|

ಬಿಜನೌರ (ಉತ್ತರ ಪ್ರದೇಶ) – ಕಿರತಪುರದ ನಿವಾಸಿಯಾದ ಅಬುಜರ್ ಉರ್ಫ್ ರೈನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಗೆ ಹಿಂದೂಗಳ ವಾಹನಗಳಿಗೆ ಬೆಂಕಿ ಹಚ್ಚುವ ಗುರಿಯನ್ನು ನೀಡಲಾಗಿತ್ತು. ಅಬುಜರ್ ಹಿಂದೂಗಳ ಧಾರ್ಮಿಕ ಶಬ್ದಗಳನ್ನು ಬರೆದಿದ್ದ ಪಿಕಪ್ ವಾಹನವೊಂದಕ್ಕೆ ಬೆಂಕಿ ಹಚ್ಚಿ, ಅದರ ವಿಡಿಯೋ ಮಾಡಿ ತನ್ನ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗೆ ಕಳುಹಿಸಿದ್ದನು. ಈ ಸಂಚಿನ ಜಾಲವು ಮುಂಬಯಿ ಮತ್ತು ಟೆಲಿಗ್ರಾಮ್ ನೆಟ್ ವರ್ಕ್ ಗೆ ಹಬ್ಬಿರುವುದನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.
Shocking: Bijnor Police arrest a man for arson following a "burn-for-pay" scheme.
The accused, Abuzar Shamim Rain, was allegedly paid to target vehicles with Hindu religious symbols and send video proof to his handler on Telegram.
Police investigation is now headed to Mumbai to… pic.twitter.com/D9quGxvw6t
— Sanatan Prabhat (@SanatanPrabhat) March 14, 2026
೧. ಆರೋಪಿ ಅಬುಜರ್ ಗುರುಗ್ರಾಮದ ಸಲೂನ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು; ಆದರೆ ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದನು. ಈತ ಮುಂಬಯಿಯಲ್ಲಿರುವ ತನ್ನ ಸೋದರಸಂಬಂಧಿ ಜೈದ್ ಎಂಬಾತನ ಬಳಿ ೫,೦೦೦ ರೂಪಾಯಿಗಳ ಸಹಾಯ ಕೇಳಿದ್ದನು. ಜೈದ್ ಈತನನ್ನು ಟೆಲಿಗ್ರಾಮ್ ನಲ್ಲಿ ‘ಅಬೂಬಕರ್’ ಎಂಬ ವ್ಯಕ್ತಿಗೆ ಪರಿಚಯಿಸಿದ್ದನು. ಅಬೂಬಕರ್ ಹಣದ ಸಹಾಯ ಮಾಡುವ ಬದಲಿಗೆ, ಹಿಂದೂ ಧರ್ಮಕ್ಕೆ ಸಂಬಂಧಿಸಿದ ಶಬ್ದಗಳಿರುವ ವಾಹನಗಳಿಗೆ ಬೆಂಕಿ ಹಚ್ಚಬೇಕೆಂಬ ಶರತ್ತು ವಿಧಿಸಿದ್ದನು. ಬೆಂಕಿ ಹಚ್ಚಿದ ವಿಡಿಯೋ ಕಳುಹಿಸಿದರೆ ದೊಡ್ಡ ಮೊತ್ತದ ಹಣ ನೀಡುವುದಾಗಿ ಆಮಿಷವೊಡ್ಡಿದ್ದನು.
೨. ಇದರ ಬೆನ್ನಲ್ಲೇ ಅಬುಜರ್ ಮಾರ್ಚ್ ೪ರ ರಾತ್ರಿ ಕಿರತಪುರದ ಜೆಂಡಾ ಚೌಕ್ ನಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನವೊಂದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದನು. ಈ ಘಟನೆಯ ನಂತರ ಈತ ಪುನಃ ಗುರುಗ್ರಾಮಕ್ಕೆ ಓಡಿಹೋದನು. ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸಿದಾಗ ಅಬುಜರ್ ಗುರುತು ಪತ್ತೆಯಾಗಿದೆ. ಈತನನ್ನು ಬಂಧಿಸಿದ ಬಳಿಕ ಈತನ ಮೊಬೈಲ್ ನಲ್ಲಿ ಹಲವಾರು ಪ್ರಮುಖ ಸುಳಿವುಗಳು ಮತ್ತು ಟೆಲಿಗ್ರಾಮ್ ಸಂದೇಶಗಳು ಲಭ್ಯವಾಗಿವೆ. ಈ ಸಂಚಿನ ಮುಖ್ಯ ಸೂತ್ರಧಾರನನ್ನು ಸೆರೆಹಿಡಿಯಲು ಪೊಲೀಸರ ತಂಡವೊಂದು ಮುಂಬಯಿಗೆ ತೆರಳಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!