ಜಪಾನ್ ಸಚಿವರ ಶ್ಲಾಘನೆಯ ಕೃತಿ!

ಟೋಕಿಯೊ (ಜಪಾನ್) – ಜಪಾನ್‌ನಲ್ಲಿ ಸಮಯದ ಕಟ್ಟುನಿಟ್ಟಿನ ಪಾಲನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಸ್ವಲ್ಪ ವಿಳಂಬವಾದರೂ ಅದನ್ನು ಅಕ್ಷಮ್ಯ ಎಂದು ಪರಿಗಣಿಸಲಾಗುತ್ತದೆ. ಇದೇ ಕಾರಣಕ್ಕೆ ಜಪಾನ್‌ನ ಆರ್ಥಿಕ ಭದ್ರತಾ ಸಚಿವೆ ಕಿಮಿ ಒನೊಡಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಸಚಿವ ಸಂಪುಟದ ಸಭೆಗೆ ತಲುಪಲು ಕೇವಲ 5 ನಿಮಿಷ ವಿಳಂಬವಾದ ಕಾರಣ, ಅವರು ತಮ್ಮ ವಾಹನದಿಂದ ಇಳಿದ ತಕ್ಷಣ ಓಡುತ್ತಾ ಸಭೆಯ ಸ್ಥಳಕ್ಕೆ ತಲುಪಿದರು. ಅಷ್ಟೇ ಅಲ್ಲದೆ, 5 ನಿಮಿಷ ತಡವಾಗಿದ್ದಕ್ಕೆ ಇಡೀ ದೇಶದ ಕ್ಷಮೆಯಾಚಿಸಿದರು.
The Cost of 5 Minutes: Lessons from Japan 🇯🇵
In Japan, a Minister apologised to the entire country for being just 5 minutes late to a meeting. Talk about accountability
In India, arriving on time is so rare it makes the news.
📰 It’s time to ask: When will our leaders learn… pic.twitter.com/fYbbhP3bPv
— Sanatan Prabhat (@SanatanPrabhat) March 13, 2026
1. ಒನೊಡಾ ಅವರು ಸಚಿವ ಸಂಪುಟದ ಸಭೆಗೆ ತೆರಳುತ್ತಿದ್ದರು. ದಾರಿಯಲ್ಲಿ ಬೇರೊಂದು ವಾಹನ ಅಪಘಾತಕ್ಕೀಡಾಗಿದ್ದರಿಂದ ಸಂಚಾರ ದಟ್ಟಣೆ (Traffic jam) ಉಂಟಾಯಿತು. ಈ ಕಾರಣದಿಂದ ಅವರಿಗೆ ಸಮಯಕ್ಕೆ ಸರಿಯಾಗಿ ಸಭೆಗೆ ತಲುಪಲು ಸಾಧ್ಯವಾಗಲಿಲ್ಲ.
2. ಸಭೆಯ ನಂತರ ಸಚಿವೆ ಕಿಮಿ ಒನೊಡಾ ಅವರು ಇಡೀ ದೇಶದ ಕ್ಷಮೆಯಾಚಿಸಿ ಹೀಗೆ ಹೇಳಿದರು, “ದಾರಿಯಲ್ಲಿ ಹಠಾತ್ತನೆ ಸಂಭವಿಸಿದ ರಸ್ತೆ ಅಪಘಾತದಿಂದ ಸಂಚಾರ ಸ್ಥಗಿತಗೊಂಡಿತು, ಹಾಗಾಗಿ ನನಗೆ ಸಮಯಕ್ಕೆ ಸರಿಯಾಗಿ ಬರಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿಯನ್ನು ಉತ್ತಮವಾಗಿ ಎದುರಿಸಲು ನಾನು ಹೆಚ್ಚು ಜಾಗರೂಕಳಾಗಿರುತ್ತೇನೆ.”
ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ
ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅವರ ಈ ನಡವಳಿಕೆಯನ್ನು ಕೊಂಡಾಡಿದ್ದಾರೆ. ನಾಯಕರು ಈ ರೀತಿ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದು ಈಗಿನ ಕಾಲದಲ್ಲಿ ಅಪರೂಪ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara