ಇಂಗ್ಲೇಂಡ್ ನ ‘ದ ಹಂಡ್ರೆಡ್’ ಟೂರ್ನಿಯಲ್ಲಿ ಮಾರನ್ ಅವರ ‘ಸನ್ ರೈಸರ್ಸ್ ಲೀಡ್ಸ್’ ತಂಡ

ನವದೆಹಲಿ – ಐಪಿಎಲ್ ತಂಡವಾದ ಸನ್ ರೈಸರ್ಸ್ ಹೈದರಾಬಾದ್‌ನ ಮಾಲೀಕಿ ಮತ್ತು ಸನ್ ಟಿವಿ ಒಡತಿ ಕಾವ್ಯಾ ಮಾರನ್ ಅವರು ಇಂಗ್ಲೆಂಡ್‌ನಲ್ಲಿರುವ ತಮ್ಮ ತಂಡಕ್ಕಾಗಿ ಪಾಕಿಸ್ತಾನಿ ಕ್ರಿಕೆಟಿಗ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆಯುವ ‘ದ ಹಂಡ್ರೆಡ್’ ಲೀಗ್‌ನಲ್ಲಿ ಕಾವ್ಯಾ ಮಾರನ್ ಅವರು ‘ಸನ್ ರೈಸರ್ಸ್ ಲೀಡ್ಸ್’ ತಂಡದ ಮಾಲೀಕರಾಗಿದ್ದಾರೆ. ಮಾರ್ಚ್ 12 ರಂದು ನಡೆದ ‘ದ ಹಂಡ್ರೆಡ್’ ಲೀಗ್ ಹರಾಜಿನಲ್ಲಿ ಅಬ್ರಾರ್ ಅಹ್ಮದ್ ಅವರನ್ನು ಸುಮಾರು 2 ಲಕ್ಷದ 55 ಸಾವಿರ ಡಾಲರ್ ನೀಡಿ ಖರೀದಿಸಲಾಗಿದೆ. ‘ದ ಹಂಡ್ರೆಡ್’ ಇತಿಹಾಸದಲ್ಲಿ ಭಾರತೀಯ ಮಾಲೀಕತ್ವದ ತಂಡವೊಂದು ಪಾಕಿಸ್ತಾನಿ ಆಟಗಾರನನ್ನು ಖರೀದಿಸಿರುವುದು ಇದೇ ಮೊದಲು. ಈ ವಿಷಯವು ಈಗ ಭಾರತದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.
🚨 Outrage: Kavya Maran’s Team Signs Pakistani Player Who Mocked IAF Hero Abhinandan
Sun TV owner Kavya Maran has signed a Pakistani cricketer – previously accused of mocking IAF pilot Abhinandan Varthaman and Operation Sindoor – for her Sunrisers Leeds team in England’s The… pic.twitter.com/TuAyVzbPwB
— Sanatan Prabhat (@SanatanPrabhat) March 13, 2026
ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಸನ್ ರೈಸರ್ಸ್ ಹೈದರಾಬಾದ್ ಮತ್ತು ಕಾವ್ಯಾ ಮಾರನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾಷ್ಟ್ರೀಯ ಭಾವನೆಗಳನ್ನು ಗೌರವಿಸದ ಆರೋಪ ಕೇಳಿಬರುತ್ತಿದೆ. ಈ ವಿವಾದದ ಬೆನ್ನಲ್ಲೇ ‘ಸನ್ ರೈಸರ್ಸ್ ಲೀಡ್ಸ್’ ತಂಡದ ‘X’ (ಟ್ವಿಟರ್) ಖಾತೆಯನ್ನು ಹಠಾತ್ತನೆ ಮುಚ್ಚಲಾಗಿದೆ. ತಂಡದ ಮಾಲೀಕರು ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಈ ಕುರಿತು ಸನ್ ರೈಸರ್ಸ್ ಲೀಡ್ಸ್ ತಂಡದ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ ಸ್ಪಷ್ಟನೆ ನೀಡಿದ್ದಾರೆ. “ಹರಾಜಿನಲ್ಲಿ ನಮಗೆ ಆದಿಲ್ ರಶೀದ್ (ಅಪಘಾನಿಸ್ತಾನದ ಆಟಗಾರ) ಅವರನ್ನು ಖರೀದಿಸಲು ಸಾಧ್ಯವಾಗಲಿಲ್ಲ, ಆದ್ದರಿಂದ ಅವರ ಬದಲಿಗೆ ಅಬ್ರಾರ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದೇವೆ” ಎಂದು ಅವರು ಹೇಳಿದ್ದಾರೆ.
ಸಂಪಾದಕೀಯ ನಿಲುವುಭಾರತದ ಶತ್ರು ರಾಷ್ಟ್ರದ ಆಟಗಾರನಿಗೆ ಕೋಟಿಗಟ್ಟಲೆ ಹಣ ನೀಡಿ ಖರೀದಿಸಿರುವ ಮಾರನ್ ಅವರ ‘ಐಪಿಎಲ್’ ತಂಡವಾದ ‘ಸನ್ ರೈಸರ್ಸ್ ಹೈದರಾಬಾದ್’ ಅನ್ನು ನಿಷೇಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಬೇಕು! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation