ರಂಜಾನ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶ ಹೊಂದಿದ್ದ ಜಾಲ್ಲೋಹ್!

  • ವರ್ಜಿನಿಯಾದಲ್ಲಿ (ಅಮೆರಿಕ) ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಸಾವು, ಇಬ್ಬರಿಗೆ ಗಾಯ!

  • ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರಿಗೆ ನೆರವಾದ ಪ್ರಕರಣದಲ್ಲಿ 9 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದ!

ರಿಚ್‌ಮಂಡ್ (ಅಮೆರಿಕ) – ಅಮೆರಿಕದ ವರ್ಜಿನಿಯಾ ರಾಜ್ಯದ ನಾರ್ಫೋಕ್‌ನಲ್ಲಿರುವ ‘ಓಲ್ಡ್ ಡೊಮಿನಿಯನ್’ ವಿಶ್ವವಿದ್ಯಾಲಯದಲ್ಲಿ ಮಾರ್ಚ್ 12 ರಂದು ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಈ ಘಟನೆಯಲ್ಲಿ ಗುಂಡು ಹಾರಿಸಿದವನ ಹೆಸರು ಮೊಹಮ್ಮದ್ ಜಾಲ್ಲೋಹ್ ಆಗಿದ್ದು, ಈತ ‘ಆರ್ಮಿ ನ್ಯಾಷನಲ್ ಗಾರ್ಡ್‌’ನ ಮಾಜಿ ಸೈನಿಕನಾಗಿದ್ದನು. 2016 ರಲ್ಲಿ ಇಸ್ಲಾಮಿಕ್ ಸ್ಟೇಟ್‌ಗೆ ಪ್ರತ್ಯಕ್ಷವಾಗಿ ಸಹಾಯ ಮಾಡಿದ ಪ್ರಕರಣದಲ್ಲಿ ಜಾಲ್ಲೋಹ್ ಅಪರಾಧಿಯೆಂದು ಸಾಬೀತಾಗಿ 9 ವರ್ಷಗಳ ಶಿಕ್ಷೆಯೂ ಆಗಿತ್ತು. ಆದರೆ ಜೈಲಿನಿಂದ ಹೊರಬಂದ ನಂತರ ಅವನಿಗೆ ರಂಜಾನ್ ಮಾಸದಲ್ಲಿ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶವಿತ್ತು. ಇದೇ ಕಾರಣಕ್ಕಾಗಿ ಆತ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ.

ಈ ಘಟನೆಯ ಕುರಿತು ಅಮೆರಿಕದ ತನಿಖಾ ಸಂಸ್ಥೆ ‘ಎಫ್.ಬಿ.ಐ.’ನ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ವಿಶೇಷ ಅಧಿಕಾರಿ ಡೊಮಿನಿಕ್ ಇವಾನ್ಸ್ ಮಾಹಿತಿ ನೀಡಿದ್ದು, “ಜಾಲ್ಲೋಹ್ ಮಹಾವಿದ್ಯಾಲಯದ ‘ರಿಸರ್ವ್ ಆಫೀಸರ್ಸ್ ಟ್ರೈನಿಂಗ್ ಕಾರ್ಪ್ಸ್’ ತರಗತಿಗೆ ಬಲವಂತವಾಗಿ ನುಗ್ಗಿದ್ದನು. ‘ಅಲ್ಲಾಹು ಅಕ್ಬರ್’ (ಅಲ್ಲಾಹು ಮಹಾನ್) ಎಂದು ಘೋಷಣೆ ಕೂಗುತ್ತಾ ಆತ ಗುಂಡಿನ ದಾಳಿ ಆರಂಭಿಸಿದನು. ಇದರಲ್ಲಿ ತರಬೇತುದಾರ ಲೆಫ್ಟಿನೆಂಟ್ ಕರ್ನಲ್ ಬ್ರ್ಯಾಂಡನ್ ಶಾ ಮೃತಪಟ್ಟರೆ, ಇಬ್ಬರು ಗಾಯಗೊಂಡಿದ್ದಾರೆ. ಈ ಸಮಯದಲ್ಲಿ ಅಲ್ಲಿದ್ದ ವಿದ್ಯಾರ್ಥಿಗಳು ಅವನನ್ನು ತಡೆದು ಕೊಂದರು” ಎಂದು ತಿಳಿಸಿದರು. ಇವಾನ್ಸ್ ಈ ಘಟನೆಯನ್ನು ‘ಭಯೋತ್ಪಾದಕ ಕೃತ್ಯ’ ಎಂದು ಕರೆದಿದ್ದಾರೆ.

ಸಂಪಾದಕೀಯ ನಿಲುವು

ಇದರಿಂದ ಜಿಹಾದಿಗಳ ಮಾನಸಿಕತೆ ಹೇಗಿರುತ್ತದೆ ಎಂಬುದು ಅರಿವಿಗೆ ಬರುತ್ತದೆ! ಒಬ್ಬ ಸಾಮಾನ್ಯ ಅಪರಾಧಿ 9 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸಿ ಬಂದ ನಂತರ, ಅವನು ಮುಂದೆ ಉತ್ತಮ ಜೀವನ ನಡೆಸುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಜಿಹಾದಿ ಭಯೋತ್ಪಾದಕರಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂಬುದು ಇದರಿಂದ ಕಂಡುಬರುತ್ತದೆ. ಆದ್ದರಿಂದ ಭಯೋತ್ಪಾದಕ ದಾಳಿ ನಡೆಸುವವರಿಗಾಗಲಿ ಅಥವಾ ಅವರಿಗೆ ಸಹಾಯ ಮಾಡುವವರಿಗಾಗಲಿ, ಗಲ್ಲು ಶಿಕ್ಷೆಯೇ (ಮರಣದಂಡನೆ) ಆಗಬೇಕು!