
ನವದೆಹಲಿ – ಓಬಿಸಿ (ಇತರ ಹಿಂದುಳಿದ ವರ್ಗ) ಮೀಸಲಾತಿಯಡಿ ‘ಕ್ರಿಮಿ ಲೇಯರ್’ದ ಮಾನದಂಡಗಳನ್ನು ನಿರ್ಧರಿಸುವಾಗ ಪಾಲಕರ ಆದಾಯವೊಂದೇ ಏಕೈಕ ಮಾನದಂಡವಾಗಲು ಸಾಧ್ಯವಿಲ್ಲ. ಆದಾಯದ ಜೊತೆಗೆ ಪಾಲಕರ ಹುದ್ದೆ ಮತ್ತು ಅವರ ಸಾಮಾಜಿಕ ಸ್ಥಾನಮಾನವನ್ನೂ ಪರಿಗಣಿಸುವುದು ಅನಿವಾರ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಆರ್. ಮಹದೇವನ್ ಅವರಿದ್ದ ಪೀಠವು ಕೇಂದ್ರ ಸರಕಾರದ ಅರ್ಜಿಯನ್ನು ವಜಾಗೊಳಿಸಿ, ದೆಹಲಿ, ಮದ್ರಾಸ್ ಮತ್ತು ಕೇರಳ ಹೈಕೋರ್ಟ್‌ಗಳ ಹಿಂದಿನ ತೀರ್ಪುಗಳನ್ನು ಎತ್ತಿಹಿಡಿಯಿತು. ನಾಗರಿಕ ಸೇವಾ ಪರೀಕ್ಷೆಗೆ (Civil Services) ಸಂಬಂಧಿಸಿದ ಪ್ರಕರಣವೊಂದರಲ್ಲಿ ಈ ತೀರ್ಪು ನೀಡಲಾಗಿದೆ. (ಕ್ರಿಮಿ ಲೇಯರ್: ಓಬಿಸಿ ಸಮುದಾಯದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಪ್ರಗತಿ ಹೊಂದಿದ ವರ್ಗವನ್ನು ‘ಕ್ರಿಮಿ ಲೇಯರ್’ ಎಂದು ಕರೆಯಲಾಗುತ್ತದೆ. ಈ ವರ್ಗಕ್ಕೆ ಮೀಸಲಾತಿಯ ಲಾಭ ದೊರೆಯುವುದಿಲ್ಲ.)
🚨 Supreme Court on OBC Creamy Layer
Parental income alone cannot determine the OBC creamy layer, the Supreme Court said. Job status of parents must also be considered.
Currently, families earning above ₹8 lakh annually are generally excluded from OBC quota benefits.
The… pic.twitter.com/hb376VWV4V
— Sanatan Prabhat (@SanatanPrabhat) March 13, 2026
ಸುಪ್ರೀಂ ಕೋರ್ಟ್ ಮಂಡಿಸಿದ ಪ್ರಮುಖ ಅಂಶಗಳು –
1. ಸರಕಾರಿ ನೌಕರರು, ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಬೇರೆ ಬೇರೆ ನಿಯಮಗಳಿರುವುದು ತಪ್ಪು. ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ಅಳೆದು ‘ಕ್ರಿಮಿ ಲೇಯರ್’ದ ಮಾನದಂಡಗಳನ್ನು ಅನ್ವಯಿಸಬೇಕು. ಖಾಸಗಿ ವಲಯದ ಉದ್ಯೋಗಿಗಳ ಮಕ್ಕಳನ್ನು ಭಿನ್ನವಾಗಿ ನಡೆಸಿಕೊಳ್ಳುವುದು ತಾರತಮ್ಯವಾಗುತ್ತದೆ.
2. ‘ಕ್ರಿಮಿ ಲೇಯರ್’ದ ಜನರನ್ನು ಮೀಸಲಾತಿಯಿಂದ ಹೊರಗಿಡುವುದು ಕೇವಲ ಸರಕಾರದ ನೀತಿಯಲ್ಲ, ಅದು ಸಂವಿಧಾನದ ಆಶಯವೂ ಆಗಿದೆ. ಈ ಮೂಲಕ ಮೀಸಲಾತಿಯ ನಿಜವಾದ ಲಾಭವು ನಿಜವಾಗಿಯೂ ಹಿಂದುಳಿದಿರುವ ಜನರಿಗೆ ತಲುಪಲು ಸಾಧ್ಯವಾಗುತ್ತದೆ.
3. ಈ ನಿಯಮದ ಮುಖ್ಯ ಉದ್ದೇಶವೆಂದರೆ, ಹಿಂದುಳಿದ ವರ್ಗಗಳಲ್ಲಿರುವ ಆರ್ಥಿಕವಾಗಿ ಸಕ್ಷಮವಾಗಿರುವ ವರ್ಗವು ನಿರಂತರವಾಗಿ ಮೀಸಲಾತಿಯ ಲಾಭ ಪಡೆಯುವುದನ್ನು ತಡೆಯುವುದು, ಇದರಿಂದಾಗಿ ನಿಜವಾದ ಅಗತ್ಯವಿರುವವರು ವಂಚಿತರಾಗುವುದಿಲ್ಲ.
4. ಒಂದು ‘ಜಾತಿ’ಯು ಹಿಂದುಳಿದಿರುವಿಕೆಯ ಸಂಕೇತವಾಗಿರಬಹುದು; ಆದರೆ ಕೇವಲ ಜಾತಿಯೇ ಹಿಂದುಳಿದಿರುವಿಕೆಗೆ ಏಕೈಕ ಮತ್ತು ಅಂತಿಮ ಆಧಾರವಾಗಲು ಸಾಧ್ಯವಿಲ್ಲ. ಸಾಮಾಜಿಕ ಮತ್ತು ವೃತ್ತಿಪರ ಘನತೆಯೂ ಅಷ್ಟೇ ಮುಖ್ಯವಾಗಿದೆ.
ಪ್ರಸ್ತುತ ನಿಯಮವೇನಿದೆ?
ಪ್ರಸ್ತುತ ನಿಯಮಗಳ ಪ್ರಕಾರ, ವಾರ್ಷಿಕ 8 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಆದಾಯವಿರುವ ಓಬಿಸಿ ಕುಟುಂಬಗಳನ್ನು ‘ಕ್ರಿಮಿ ಲೇಯರ್’ ಪಟ್ಟಿಗೆ ಸೇರಿಸಲಾಗುತ್ತದೆ. ಇಂತಹ ಪಾಲಕರ ಮಕ್ಕಳಿಗೆ ಸರಕಾರಿ ಉದ್ಯೋಗಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ಸೌಲಭ್ಯವಿರುವುದಿಲ್ಲ. 2017ರಲ್ಲಿ ಈ ಆದಾಯದ ಮಿತಿಯನ್ನು ವಾರ್ಷಿಕ 6 ಲಕ್ಷ ರೂಪಾಯಿಗಳಿಂದ 8 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿತ್ತು.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ