
ನವ ದೆಹಲಿ – ವೈಯಕ್ತಿಕ ಕಾನೂನುಗಳನ್ನು ನೇರವಾಗಿ ಅಮಾನ್ಯಗೊಳಿಸಿದರೆ ಕಾನೂನುಬದ್ಧ ಶೂನ್ಯತೆ ಉದ್ಭವಿಸಬಹುದು. ಆದ್ದರಿಂದ ಈ ವಿಷಯವನ್ನು ಶಾಸಕಾಂಗದ ವಿವೇಚನೆಗೆ ಬಿಡುವುದು ಹೆಚ್ಚು ಸೂಕ್ತ, ಇದರಿಂದ ಸಂಸತ್ತು ಸಮಾನ ನಾಗರಿಕ ಸಂಹಿತೆಯ ಬಗ್ಗೆ ಸ್ವತಂತ್ರ ಕಾನೂನನ್ನು ರೂಪಿಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
• ‘ಮುಸ್ಲಿಂ ಪರ್ಸನಲ್ ಲಾ’ ರದ್ದಾದರೆ ಯಾವ ಕಾನೂನು ಜಾರಿಗೆ ಬರುವುದು? – ನ್ಯಾಯಾಲಯದ ಪ್ರಶ್ನೆ
ಈ ಪ್ರಕರಣದಲ್ಲಿ ಅರ್ಜಿದಾರರು ‘ಮುಸ್ಲಿಂ ಪರ್ಸನಲ್ ಲಾ (ಶರಿಯತ್) ಕಾಯ್ದೆ, 1937’ ಅನ್ನು ಪ್ರಶ್ನಿಸಿದ್ದಾರೆ. ಈ ಕಾಯ್ದೆಯಿಂದಾಗಿ ಉತ್ತರಾಧಿಕಾರದಂತಹ ವಿಷಯಗಳಲ್ಲಿ ಮುಸ್ಲಿಂ ಮಹಿಳೆಯರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಇದರ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ಒಂದು ವೇಳೆ ಈ ಕಾಯ್ದೆಯನ್ನು ರದ್ದುಗೊಳಿಸಿದರೆ ಮುಂದೆ ಯಾವ ಕಾನೂನು ಅನ್ವಯವಾಗುತ್ತದೆ? ಎಂಬ ಮಹತ್ವದ ಪ್ರಶ್ನೆ ಉದ್ಭವಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಾನೂನುಬದ್ಧ ಶೂನ್ಯತೆ ಉಂಟಾಗುವುದಿಲ್ಲವೇ? ಎಂದು ಕೇಳಿದೆ.
• 1937ರ ಕಾಯ್ದೆಯನ್ನು ಸಂವಿಧಾನ ವಿರೋಧಿ ಎಂದು ಘೋಷಿಸಬಹುದು! – ನ್ಯಾಯವಾದಿ ಪ್ರಶಾಂತ ಭೂಷಣ
ಅರ್ಜಿದಾರರ ಪರವಾಗಿ ನ್ಯಾಯವಾದಿ ಪ್ರಶಾಂತ ಭೂಷಣ ಅವರು ಮಾತನಾಡಿ, ಶರಿಯತ್ ಕಾಯ್ದೆಯ ಪ್ರಕಾರ ಮಹಿಳೆಯರಿಗೆ ಉತ್ತರಾಧಿಕಾರದಲ್ಲಿ ಪುರುಷರಿಗಿಂತ ಅರ್ಧದಷ್ಟು ಪಾಲು ಮಾತ್ರ ಸಿಗುತ್ತದೆ. ಈ ತಾರತಮ್ಯವನ್ನು ಹೋಗಲಾಡಿಸಲು 1937ರ ಕಾಯ್ದೆಯನ್ನು ಸಂವಿಧಾನ ವಿರೋಧಿ ಎಂದು ಘೋಷಿಸಬಹುದು. ಒಂದು ವೇಳೆ ಈ ಕಾಯ್ದೆ ರದ್ದಾದರೆ ‘ಇಂಡಿಯನ್ ಸಕ್ಸೆಶನ್ ಆಕ್ಟ್’ (ಭಾರತೀಯ ಉತ್ತರಾಧಿಕಾರ ಕಾಯ್ದೆ?) ಜಾರಿಗೆ ಬರುತ್ತದೆ. ಈ ಕಾಯ್ದೆಯಡಿ ಉತ್ತರಾಧಿಕಾರ ಹಕ್ಕುಗಳಲ್ಲಿ ಸ್ತ್ರೀ-ಪುರುಷ ಇಬ್ಬರಿಗೂ ಸಮಾನ ಅಧಿಕಾರ ನೀಡಲಾಗಿದೆ. ಉತ್ತರಾಧಿಕಾರವು ಒಂದು ನಾಗರಿಕ ಹಕ್ಕಾಗಿದೆಯೇ ಹೊರತು ಧಾರ್ಮಿಕ ಆಚರಣೆಯಲ್ಲ, ಆದ್ದರಿಂದ ಇದಕ್ಕೆ ಸಂವಿಧಾನದ 25ನೇ ವಿಧಿಯಡಿ ರಕ್ಷಣೆ ಸಿಗಲು ಸಾಧ್ಯವಿಲ್ಲ ಎಂದು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು ತಕ್ಷಣವೇ ಹಸ್ತಕ್ಷೇಪ ಮಾಡುವ ಬಗ್ಗೆ ಸತರ್ಕತೆಯ ನಿಲುವು ತಳೆಯಿತು. “ಸುಧಾರಣೆ ಮಾಡುವ ಅತಿ ಉತ್ಸಾಹದಲ್ಲಿ ನಾವು ಮಹಿಳೆಯರಿಗೆ ಸದ್ಯ ಸಿಗುತ್ತಿರುವ ಹಕ್ಕುಗಳನ್ನೂ ಕಳೆದುಕೊಳ್ಳುವಂತೆ ಮಾಡಬಾರದು. ಆದ್ದರಿಂದ ಈ ವಿಷಯದ ಬಗ್ಗೆ ಆಳವಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ” ಎಂದು ನ್ಯಾಯಾಲಯ ಹೇಳಿದೆ. ಅರ್ಜಿಯಲ್ಲಿ ಸುಧಾರಣೆಗಳನ್ನು ಮಾಡಿ ಪರ್ಯಾಯ ಮಾರ್ಗಗಳನ್ನು ಸೂಚಿಸುವಂತೆ ನ್ಯಾಯಾಲಯವು ಅರ್ಜಿದಾರರಿಗೆ ಸಲಹೆ ನೀಡಿದೆ.
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !