ಮೌಲಾನಾ ಅಬ್ದುಲ್ಲಾ ವಿರುದ್ಧ ಉತ್ತರ ಪ್ರದೇಶದ 84 ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲು

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತಾಯಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣ

(ಮೌಲಾನಾ ಎಂದರೆ ಇಸ್ಲಾಂ ಧರ್ಮದ ಅಧ್ಯಯನಕಾರ)

ಲಕ್ಷಣ ಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ತಾಯಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಹಾರದ ಮೌಲಾನಾ ಅಬ್ದುಲ್ಲಾ ಸಲೀಂ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 84 ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೆಲವು ದಿನಗಳ ಹಿಂದೆ ಮೌಲಾನಾ ಅವರ ವಿಡಿಯೋವೊಂದು ಮುನ್ನೆಲೆಗೆ ಬಂದಿತ್ತು. ‘ಒಂದು ವೇಳೆ ಯಾರ ಬಳಿಯಾದರೂ ಯೋಗಿ ಆದಿತ್ಯನಾಥ ಅವರ ತಾಯಿಯ 250 ಗ್ರಾಂ ಮಾಂಸ ಪತ್ತೆಯಾದರೂ, ಅವರಿಗೆ ಮೊಣಕಾಲಿನ ಕೆಳಗೆ ಗುಂಡು ಹಾರಿಸಿ ಗಾಯಗೊಳಿಸುವ ಆದೇಶವಿದೆ. ಆದರೆ ರಾಜ್ಯದಲ್ಲಿ ಯಾವುದೇ ಅತ್ಯಾಚಾರಿಗಳಿಗೆ ಯಾವುದೇ ಶಿಕ್ಷೆ ನೀಡಲಾಗುತ್ತಿಲ್ಲ!’ ಎಂದು ಹೇಳಿದ್ದರು. ಈ ಹೇಳಿಕೆಯ ನಂತರ ದೊಡ್ಡ ವಿವಾದ ಉಂಟಾಗಿದೆ. ಈ ಹೇಳಿಕೆಯ ವಿರುದ್ಧ ಇನ್ನೂ ಅನೇಕ ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ‘ಮೌಲಾನಾ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಆಂದೋಲನವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು’ ಎಂದು ಪ್ರತಿಭಟನಾಕಾರರು ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

ಯಾರು ಈ ಮೌಲಾನಾ ಅಬ್ದುಲ್ಲಾ ಸಲೀಂ?

ಬಿಹಾರದ ಮೌಲಾನಾ ಅಬ್ದುಲ್ಲಾ ಸಲೀಂ ಅವರು ಈ ಹಿಂದೆ ಓವೈಸಿ ಅವರ ‘ಎಐಎಂಐಎಂ’ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಂದರೆ ಅಖಿಲ ಭಾರತ ಮುಸ್ಲಿಂ ಏಕತಾ ಸಂಘ) ಪಕ್ಷದೊಂದಿಗೆ ಸಂಬಂಧ ಹೊಂದಿದ್ದರು. 2025ರ ಬಿಹಾರ ಚುನಾವಣೆಯಲ್ಲಿ ಅವರಿಗೆ ಜೋಕಿಹತ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಸಿಗದ ಕಾರಣ ಸಲೀಂ ಅವರು ಪಕ್ಷದಿಂದ ದೂರ ಸರಿಯುವ ನಿರ್ಧಾರ ಮಾಡಿದ್ದರು. ನಂತರ ಪ್ರಶಾಂತ ಕಿಶೋರ ಅವರ ‘ಜನ ಸುರಾಜ ಪಕ್ಷ’ ಸೇರಿದ್ದರು; ಆದರೆ ಚುನಾವಣೆಯ ಸಮಯದಲ್ಲಿ ಚುನಾವಣಾ ಆಯೋಗವು ಸಲೀಂ ಅವರ ನಾಮಪತ್ರವನ್ನು ತಿರಸ್ಕರಿಸಿತ್ತು.