ನಮ್ಮನ್ನು ಮುಸಲ್ಮಾನರು ಅಥವಾ ಕ್ರೈಸ್ತರು ಅಲ್ಲ, ಹಿಂದೂಗಳೇ ಸೋಲಿಸಿದ್ದಾರೆ! – ಅನಂತಕುಮಾರ ಹೆಗಡೆ, ಭಾಜಪ ನಾಯಕ – Anant Kumar Hegde Massive Speech

ಭಟ್ಕಳ – ನಮ್ಮನ್ನು ಮುಸಲ್ಮಾನರು ಅಥವಾ ಕ್ರೈಸ್ತರು ಸೋಲಿಸಿಲ್ಲ, ನಮ್ಮಲ್ಲಿನ (ಹಿಂದೂಗಳಲ್ಲಿನ) ದ್ರೋಹಿಗಳೇ ನಮ್ಮನ್ನು ಸೋಲಿಸಿದ್ದಾರೆ ಎಂದು ಭಾಜಪದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಇಲ್ಲಿ ಹೇಳಿಕೆ ನೀಡಿದರು. ಭಟ್ಕಳದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ‘ಹಿಂದೂ ಸಂಗಮ’ ಮೇಳದಲ್ಲಿ ಅವರು ಮಾತನಾಡುತ್ತಿದ್ದರು. ಈ ಮೇಳದಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಉಪಸ್ಥಿತರಿದ್ದರು.

ಹೆಗಡೆ ಅವರು ಮಾತು ಮುಂದುವರಿಸಿ, ”ಜಾತ್ಯಾತೀತತೆ ಎಂದರೆ ಹಿಂದುತ್ವ. ಇತರ ದೇಶಗಳಿಂದ ಬಂದವರಿಗೆ ನಾವು ಮಸೀದಿ ಮತ್ತು ಚರ್ಚ್‌ ಗಳನ್ನು ನಿರ್ಮಿಸಲು ಅನುಮತಿ ನೀಡಿದ್ದೇವೆ. ಹೀಗಿರುವಾಗ ನಮಗಿಂತ ದೊಡ್ಡ ಜಾತ್ಯತೀತರು ಬೇರೆ ಯಾರು ಇರಲು ಸಾಧ್ಯ? ಧೈರ್ಯವಿದ್ದರೆ ಬಾಂಗ್ಲಾದೇಶಕ್ಕೆ ಹೋಗಿ ಜಾತ್ಯಾತೀತತೆಯ ಪಾಠಗಳನ್ನು ಮಾಡಿ. ಯಾರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮುಗಿಸುವ ಮಾತನಾಡುತ್ತಾರೋ, ಅವರು ಭ್ರಮೆಯಲ್ಲಿದ್ದಾರೆ. ಎಂದಿಗೂ ಹುಲಿ-ಸಿಂಹಗಳನ್ನಲ್ಲ, ಕೇವಲ ಆಡನ್ನು ಮಾತ್ರ ಬಲಿ ಕೊಡಲಾಗುತ್ತದೆ. ನಮ್ಮ ಸಂಘಟನೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇಂದಿನ ಶಿಕ್ಷಣವು ಕೇವಲ ಹಣ ಸಂಪಾದನೆಗಷ್ಟೇ ಸೀಮಿತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನವನ್ನು ಸಂಸ್ಕಾರಯುತವಾಗಿ ರೂಪಿಸಿಕೊಳ್ಳಬೇಕು”, ಎಂದು ಹೇಳಿದರು.

ಈ ಸಮಯದಲ್ಲಿ, ಭಟ್ಕಳ ನಗರದಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು