
ಕೊಮಿಲ್ಲಾ (ಬಾಂಗ್ಲಾದೇಶ) – ಇಲ್ಲಿನ ಕಲಾಗಾಛಿತ್ಲಾ ದೇವಾಲಯ ಮತ್ತು ಅದರ ಸಮೀಪದ ರಸ್ತೆಯಲ್ಲಿ ಮಾರ್ಚ್ 7 ರಂದು ಸರಣಿ ಪೆಟ್ರೋಲ್ ಬಾಂಬ್ ಸ್ಫೋಟಗಳು ಸಂಭವಿಸಿವೆ. ಈ ಸ್ಫೋಟಗಳಲ್ಲಿ ಮೂವರು ಗಾಯಗೊಂಡಿದ್ದು, ಅವರಲ್ಲಿ ದೇವಾಲಯದ ಅರ್ಚಕ ಕೇಶವ ಚಕ್ರವರ್ತಿ ಮತ್ತು ಸ್ಥಳೀಯ ನಿವಾಸಿ ಅಬ್ದುಲ್ ಬಾರೆಕ್ ಸೇರಿದ್ದಾರೆ. ಮೂರನೇ ವ್ಯಕ್ತಿಯ ಗುರುತು ಇನ್ನು ಪತ್ತೆಯಾಗಿಲ್ಲ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಸಂಜೆ 6:28 ರ ಸುಮಾರಿಗೆ ಬುರ್ಖಾ ಧರಿಸಿದ ವ್ಯಕ್ತಿಯೊಬ್ಬರು ದೇವಾಲಯದ ಆವರಣ ಪ್ರವೇಶಿಸಿ ಬ್ಯಾಗ್ ಇಟ್ಟು ಓಡಿಹೋಗಿದ್ದಾರೆ. ಅದರ ಬೆನ್ನಲ್ಲೇ ಸ್ಫೋಟ ಸಂಭವಿಸಿದೆ.
ದೋಷಿಗಳನ್ನು ಆದಷ್ಟು ಬೇಗ ಬಂಧಿಸಲು ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಕೊಮಿಲ್ಲಾ ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ. ಆಕ್ರಮಣಕಾರರು ಪರಾರಿಯಾಗುವಾಗ ಹತ್ತಿರದಲ್ಲಿದ್ದ ಬೌದ್ಧ ಮಂದಿರದ ಮೇಲೆಯೂ ನಾಡಬಾಂಬ್ ಎಸೆದಿದ್ದಾರೆ.
“ಧಾರ್ಮಿಕ ಸೌಹಾರ್ದತೆಯನ್ನು ಹಾಳುಮಾಡುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ” ಎಂದು ಹಿಂದೂ-ಬೌದ್ಧ-ಕ್ರಿಶ್ಚಿಯನ್ ಏಕತಾ ಪರಿಷತ್ತಿನ ಕೊಮಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿ ತಪಸ್ ಬಕ್ಷಿ ಹೇಳಿದ್ದಾರೆ. ಈ ಪ್ರದೇಶದಲ್ಲಿ ಒಂದು ಬೌದ್ಧ ಮಂದಿರ, ಎರಡು ಹಿಂದೂ ದೇವಾಲಯಗಳು ಮತ್ತು ಒಂದು ಮಸೀದಿ ಇದೆ. (ಸ್ಫೋಟ ನಡೆಸಿದವರು ಮಸೀದಿಯನ್ನು ಬಿಟ್ಟು ಹಿಂದೂ ಮತ್ತು ಬೌದ್ಧ ಮಂದಿರಗಳನ್ನೇ ಗುರಿಯಾಗಿಸಿಕೊಂಡಿರುವುದು ದಾಳಿಕೋರರು ಯಾರೆಂಬುದನ್ನು ಸ್ಪಷ್ಟಪಡಿಸುತ್ತದೆ! – ಸಂಪಾದಕರು)
ಪೊಲೀಸರು ಘಟನಾ ಸ್ಥಳದಿಂದ ಕೊಡಲಿ, ಬ್ಯಾಗ್ ಸೇರಿದಂತೆ ಕೆಲವು ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಹಿಂದೂ ದೇವಾಲಯಗಳು ಅಸುರಕ್ಷಿತ! |
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಕಲಬುರಗಿಯಲ್ಲಿ ಜೈಲಿನ ಗೋಡೆ ಜಿಗಿದು ೩ ಕೈದಿಗಳು ಪರಾರಿ!
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid