|

ಬೀಜಿಂಗ್ (ಚೀನಾ) – ಭಾರತ ಮತ್ತು ಚೀನಾ ‘ನೆರೆಹೊರೆಯ ದೇಶಗಳು’ ಎಂಬಂತೆ ಸ್ನೇಹವನ್ನು ಕಾಪಾಡಿಕೊಳ್ಳಬೇಕು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಬೇಕು. ಅಲ್ಲದೆ, ಎರಡೂ ದೇಶಗಳು ಅಭಿವೃದ್ಧಿ ಮತ್ತು ಸಹಕಾರದ ಮೇಲೆ ಹೆಚ್ಚಿನ ಗಮನ ಹರಿಸಬೇಕು. ಭಾರತ ಮತ್ತು ಚೀನಾ ‘ಗ್ಲೋಬಲ್ ಸೌತ್’ನ (ಯುರೋಪ್ ಮತ್ತು ಉತ್ತರ ಅಮೆರಿಕಾ ಖಂಡಗಳ ಹೊರಗಿನ ಅಭಿವೃದ್ಧಿಶೀಲ ರಾಷ್ಟ್ರಗಳ ಗುಂಪು) ಪ್ರಮುಖ ದೇಶಗಳಾಗಿದ್ದು, ಇವೆರಡರ ನಡುವೆ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳಿವೆ. ಪರಸ್ಪರ ವಿಶ್ವಾಸ ಮತ್ತು ಸಹಕಾರದಿಂದ ಎರಡೂ ದೇಶಗಳ ಅಭಿವೃದ್ಧಿಗೆ ವೇಗ ಸಿಗಬಹುದು, ಆದರೆ ಸಂಘರ್ಷವು ಏಷ್ಯಾದ ಅಭಿವೃದ್ಧಿಗೆ ಹಾನಿಕರ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ. ಚೀನಾದ ಸಂಸತ್ತಿನ ಅಧಿವೇಶನಕ್ಕೂ ಮುನ್ನ ಆಯೋಜಿಸಲಾದ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ವರ್ಷ ಭಾರತವು ‘ಬ್ರಿಕ್ಸ್’ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ ದೇಶಗಳ ಒಕ್ಕೂಟ. ಈಗ ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುನೈಟೆಡ್ ಅರಬ್ ಎಮಿರೇಟ್ಸ್ ಸೇರ್ಪಡೆಗೊಂಡಿವೆ) ಶೃಂಗಸಭೆಯ ಆತಿಥ್ಯ ವಹಿಸಲಿದ್ದರೆ, 2027 ರಲ್ಲಿ ಚೀನಾ ಈ ಸಭೆಯ ಆತಿಥ್ಯ ವಹಿಸಲಿದೆ.
ವಾಂಗ್ ಯಿ ತಮ್ಮ ಮಾತನ್ನು ಮುಂದುವರೆಸಿ, “2024 ರಲ್ಲಿ ರಷ್ಯಾದ ಕಜನ್‌ನಲ್ಲಿ ನಡೆದ ಸಭೆಯು ಎರಡೂ ದೇಶಗಳ ಸಂಬಂಧಕ್ಕೆ ಹೊಸ ಆರಂಭವನ್ನು ನೀಡಿತು, ನಂತರ ಟಿಯಾಂಜಿನ್‌ನಲ್ಲಿ ನಡೆದ ಚರ್ಚೆಗಳು ಸಂಬಂಧವನ್ನು ಮತ್ತಷ್ಟು ಸುಧಾರಿಸಲು ಸಹಾಯ ಮಾಡಿದವು. ಇತ್ತೀಚಿನ ದಿನಗಳಲ್ಲಿ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂವಾದ, ವ್ಯಾಪಾರ ಮತ್ತು ಜನರ ನಡುವಿನ ಸಂಪರ್ಕ ಹೆಚ್ಚಾಗಿದೆ. ದ್ವಿಪಕ್ಷೀಯ ವ್ಯಾಪಾರವು ಹೊಸ ದಾಖಲೆ ನಿರ್ಮಿಸಿದ್ದು, ಇದರ ನೇರ ಲಾಭ ಎರಡೂ ದೇಶಗಳ ಜನರಿಗೆ ಲಭಿಸಿದೆ. ಬ್ರಿಕ್ಸ್ ಶೃಂಗಸಭೆಯ ಆಯೋಜನೆಯಲ್ಲಿ ಎರಡೂ ದೇಶಗಳು ಪರಸ್ಪರ ಬೆಂಬಲ ನೀಡಬೇಕು,” ಎಂದರು.
ಲಡಾಖ್‌ನ ಡೋಕ್ಲಾಮ್‌ನಲ್ಲಿ ನಡೆದ ಸೈನಿಕ ಸಂಘರ್ಷದ ನಂತರ ಸುಮಾರು 5 ವರ್ಷಗಳ ಕಾಲ ಭಾರತ-ಚೀನಾ ಸಂಬಂಧ ತಣ್ಣಗಾಗಿತ್ತು; ಆದರೆ 2024 ರಲ್ಲಿ ಕಜನ್‌ನಲ್ಲಿ ಪ್ರಧಾನಮಂತ್ರಿ ಮೋದಿ ಮತ್ತು ಶೀ. ಜಿನ್‌ಪಿಂಗ್ ಭೇಟಿಯಾದ ನಂತರ ಸಂಬಂಧಗಳನ್ನು ಸಹಜ ಸ್ಥಿತಿಗೆ ತರುವ ಪ್ರಕ್ರಿಯೆ ಆರಂಭವಾಯಿತು.
ಸಂಪಾದಕೀಯ ನಿಲುವು‘ಹಿಂದಿ-ಚೀನಿ ಭಾಯಿ ಭಾಯಿ’ ಎಂದು ಹೇಳುತ್ತಾ ಭಾರತದ ಮೇಲೆ ಆಕ್ರಮಣ ಮಾಡಿ, ಸಾವಿರಾರು ಚದರ ಕಿಲೋಮೀಟರ್ ಭೂಮಿಯನ್ನು ವಶಪಡಿಸಿಕೊಂಡ ಚೀನಾವನ್ನು ಯಾರು ತಾನೇ ನಂಬುತ್ತಾರೆ? ಚೀನಾ ಮೊದಲು ತಾನು ಪಾಲುದಾರ ಎಂಬುದನ್ನು ಕೃತಿಯಲ್ಲಿ ತೋರಿಸಿಕೊಡಲಿ, ನಂತರ ಮಾತನಾಡಲಿ! |
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ಪಾಕಿಸ್ತಾನವನ್ನು ಶ್ಲಾಘಿಸಿದ ಅಮೆರಿಕದ ಉಪಾಧ್ಯಕ್ಷರ ವಿರುದ್ಧ ಅವರದ್ದೇ ಪಕ್ಷದ ಸಂಸದರು ಆಕ್ರೋಶ!
ಸ್ವದೇಶವೇ ಸರ್ವಸ್ವ !
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine