೯ ಫೆಬ್ರವರಿ ೨೦೨೬ ರಂದು ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದ ಶ್ರೀಮತಿ ಕ್ಷಮಾ ರಾಣೆ, ಸೌ. ವಿಜಯಲಕ್ಷ್ಮಿ ದಂಡಮುಡಿ ಮತ್ತು ಡಾ. (ಸೌ.) ಸಂಗೀತಾ ಚೌಧರಿ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ಪ್ರಾಪ್ತಮಾಡಿಕೊಂಡ ಬಗ್ಗೆ ಘೋಷಿಸಲಾಯಿತು. ಈ ನಿಮಿತ್ತ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಶ್ರೀಮತಿ ಕ್ಷಮಾ ರಾಣೆ ಮತ್ತು ಸೌ. ವಿಜಯಲಕ್ಷ್ಮಿ ದಂಡಮುಡಿ ಇವರ ಬಗ್ಗೆ ಹೇಳಿದ ಗುಣವೈಶಿಷ್ಟ್ಯಗಳನ್ನು ನಾವು ಕಳೆದ ವಾರದ ಸಂಚಿಕೆಯಲ್ಲಿ ನೋಡಿದ್ದೇವೆ. ಈ ವಾರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಡಾ. (ಸೌ.) ಸಂಗೀತಾ ಚೌಧರಿ ಇವರ ಬಗ್ಗೆ ವ್ಯಕ್ತಪಡಿಸಿದ ಕೌತುಕೋದ್ಗಾರದ ನುಡಿಗಳನ್ನು ಇಲ್ಲಿ ನೀಡುತ್ತಿದ್ದೇವೆ.

೧. ಉತ್ತಮ ನೇತೃತ್ವ ಗುಣ ಮತ್ತು ಮುಂದಾಳತ್ವ ವಹಿಸುವ ವೃತ್ತಿ
ಸಂಗೀತಾಳಲ್ಲಿ ಉತ್ತಮ ನೇತೃತ್ವ ಗುಣವಿದೆ. ಯಾವುದೇ ಸೇವೆಯನ್ನು ಮಾಡುವಾಗ ಕೇವಲ ಅದನ್ನು ಪೂರ್ಣಗೊಳಿಸಬೇಕೆಂದು ಮಾಡುವುದಿಲ್ಲ; ಬದಲಾಗಿ ಆ ಸೇವೆಗೆ ಒಂದು ಸರಿಯಾದ ವ್ಯವಸ್ಥೆ ಅಥವಾ ಶಿಸ್ತನ್ನು ರೂಪಿಸುವ ನಿಟ್ಟಿನಲ್ಲಿ ಯಾವಾಗಲೂ ತಾವಾಗಿಯೇ ಉತ್ಸಾಹದಿಂದ ನೇತೃತ್ವ ವಹಿಸುತ್ತಾರೆ. ಸೇವೆ ಹೆಚ್ಚೆಚ್ಚು ಪರಿಪೂರ್ಣ ಮತ್ತು ಭಾವಪೂರ್ಣವಾಗಲು ಅವರಿಗೆ ಹೊಸ ಹೊಸ ವಿಷಯಗಳು ಹೊಳೆಯುತ್ತವೆ. ಅವರಲ್ಲಿರುವ ಉತ್ತಮ ನಿಯೋಜನಾ ಕೌಶಲ್ಯದಿಂದ ಅವರು ಅದನ್ನು ಕಾರ್ಯರೂಪಕ್ಕೂ ತರುತ್ತಾರೆ, ಇದು ನಿಜಕ್ಕೂ ಶ್ಲಾಘನೀಯ. ಅವರಲ್ಲಿರುವ ಸಮಷ್ಟಿ ಗುಣಗಳಿಂದಾಗಿ ಅವರಿಗೆ ನೀಡಿದ ಯಾವುದೇ ಸೇವೆಯನ್ನು ಅವರು ಉತ್ತಮ ರೀತಿಯಲ್ಲಿ ಪೂರ್ಣಗೊಳಿಸುತ್ತಾರೆ ಎಂಬ ವಿಶ್ವಾಸ ನನಗಿದೆ.
೨. ನಿರೀಕ್ಷಣಾ ಕ್ಷಮತೆ
ಸಂಗೀತಾ ಇವರ ನಿರೀಕ್ಷಣಾ ಕ್ಷಮತೆಯು ಮೆಚ್ಚತಕ್ಕದ್ದು. ಸೇವೆಯನ್ನು ಮಾಡುವಾಗ ತಮ್ಮ ಜೊತೆಗಿರುವ ಸಾಧಕರಿಗೆ ಗಮನಕ್ಕೆ ಬಂದ ಅಂಶಗಳನ್ನು ಕಾಲಕಾಲಕ್ಕೆ ತಿಳಿಸುತ್ತಾರೆ. ಅಲ್ಲಿ ನಿರೀಕ್ಷಿತ ಬದಲಾವಣೆ ಆಗದಿದ್ದರೆ, ಜವಾಬ್ದಾರ ಸಾಧಕರಿಗೆ ತಿಳಿಸಿ ಸಹಾಯ ಪಡೆಯುವ ಮೂಲಕ ಆ ವಿಷಯವನ್ನು ಪೂರ್ಣತ್ವಕ್ಕೆ ಕೊಂಡೊಯ್ಯುವ ತಳಮಳ ಅವರಿಗಿದೆ.

೩. ತತ್ತ್ವನಿಷ್ಠೆ ಮತ್ತು ಪ್ರೇಮಭಾವಗಳ ಸುಂದರ ಸಂಗಮ !
ಸಮಷ್ಟಿಯ ದೃಷ್ಟಿಯಿಂದ ಅವರಲ್ಲಿ ಬಹಳ ಒಳ್ಳೆಯ ಗುಣಗಳಿವೆ. ಅವರ ಮತ್ತೊಂದು ವೈಶಿಷ್ಟ್ಯವೆಂದರೆ ಅವರಲ್ಲಿ ತತ್ತ್ವನಿಷ್ಠೆ ಮತ್ತು ಪ್ರೇಮಭಾವ ಈ ಗುಣಗಳ ಅಪೂರ್ವ ಸಂಗಮವನ್ನು ಕಾಣಬಹುದು. ‘ಆಶ್ರಮದ ಸಾಧಕರನ್ನು ತಮ್ಮದೇ ಕುಟುಂಬ ಎಂದು ಭಾವಿಸಿ ಅವರಿಗೆ ಏನು ಸಹಾಯ ಮಾಡಬಹುದು ?’, ಎಂಬ ವಿಚಾರ ಮಾಡುತ್ತಾರೆ. ಅವರು ಸಾಧಕರನ್ನು ಕೇವಲ ಮಾನಸಿಕ ಸ್ತರದಲ್ಲಿ ನಿಭಾಯಿಸದೆ, ಅವರಿಗೆ ತತ್ತ್ವನಿಷ್ಠೆಯಿಂದ ಸಾಧನೆಯ ದೃಷ್ಟಿಕೋನಗಳನ್ನು ನೀಡುತ್ತಾರೆ. ಎದುರಿಗಿರುವ ಸಾಧಕರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅವರ ಸ್ಥಿತಿಗೆ ಹೋಗಿ ಸಂವೇದನಾಶೀಲತೆಯಿಂದ ಸಾಧಕರ ಅಡಚಣೆಗಳನ್ನು ತಿಳಿದುಕೊಂಡು, ಅತ್ಯಂತ ಪ್ರೀತಿಯಿಂದ ಸಹಾಯ ಮಾಡುವ ಕಲೆ ಅವರಿಗೆ ಸಿದ್ಧಿಸಿದೆ. ಇದರಿಂದಾಗಿ ಅನೇಕ ಸಾಧಕರು ಅವರೊಂದಿಗೆ ಮನಮುಕ್ತತೆಯಿಂದ ಮಾತನಾಡುತ್ತಾರೆ. ಅವರೊಂದಿಗೆ ಮಾತನಾಡುವುದರಿಂದ ಸಾಧಕರಲ್ಲಿ ಪ್ರಯತ್ನ ಮಾಡುವ ಉತ್ಸಾಹ ಮೂಡುತ್ತದೆ. ಅನೇಕ ಸಾಧಕರಿಗೆ ಅವರ ಆಧಾರವೆನಿಸುತ್ತದೆ.
೪. ಸಾಧನೆಯ ಪ್ರಯತ್ನಗಳಿಂದ ಕಂಡುಬಂದ ಸಕಾರಾತ್ಮಕ ಬದಲಾವಣೆ !
ವ್ಯಷ್ಟಿ-ಸಮಷ್ಟಿ ಸಾಧನೆಯ ದೃಷ್ಟಿಯಿಂದ ಕಾಲಕಾಲಕ್ಕೆ ಸಿಗುವ ಮಾರ್ಗದರ್ಶನದಂತೆ ಅದನ್ನು ಕೃತಿಯಲ್ಲಿ ತರಲು ಅವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಅವರು ಅತ್ಯಂತ ತಳಮಳದಿಂದ ಮಾಡಿದ ಸಾಧನೆಯ ಪ್ರಯತ್ನಗಳಿಂದಾಗಿ ಅವರಲ್ಲಿ ಬಹಳಷ್ಟು ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತಿವೆ. ಅವರ ಅಂತರಂಗದಲ್ಲಿ ಆದ ಈ ಪರಿವರ್ತನೆಯಿಂದಾಗಿ ಅವರ ಮುಖದಲ್ಲಿಯೂ ಒಳ್ಳೆಯ ಬದಲಾವಣೆ ಕಂಡು ಬರುತ್ತಿದೆ.
ಅವರ ಈ ಗುಣಗಳಿಂದಾಗಿಯೇ ಸಾಧನೆಯ ಒಂದು ಪ್ರಮುಖ ಹಂತವನ್ನು ದಾಟಿ ಅವರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿದ್ದಾರೆ. ಆದುದರಿಂದಲೇ ದೇವರು ನನಗೆ ಅವರ ಬಗ್ಗೆ ಈ ನಾಲ್ಕು ಸಾಲುಗಳನ್ನು ಸೂಚಿಸಿದರು….
ಧ್ವನಿಚಿತ್ರ ಸಂಗ್ರಹದ (ವಿಡಿಯೋ ಆರ್ಕೈವ್) ಸೇವೆ ಮಾಡುತ್ತಾ ಮಾಡುತ್ತಾ |
ಸಂಗ್ರಹಿಸಿದರು ಗುರುಗಳ ಬೋಧನೆಯನ್ನು |
ಸಾಧನೆಯಿಂದ ದೈವೀ ಗುಣಗಳ ವೃಕ್ಷವು ಚಿಗುರಿತು |
ಆದುದರಿಂದಲೇ ಗುರುಗಳು ಇಂದು ಉದ್ಧರಿಸಿದರು ಈ ಸಂಗೀತಾಳನ್ನು ||
(ಟಿಪ್ಪಣಿ : ಪ್ರಸ್ತುತ ಅವರು ಧ್ವನಿಚಿತ್ರ ಸಂಗ್ರಹದ ಸೇವೆಯನ್ನು ಮಾಡುತ್ತಿದ್ದಾರೆ.)
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ (೯.೨.೨೦೨೬)
ಈರೋಡ್ (ತಮಿಳುನಾಡು) ನಲ್ಲಿರುವ ಕಸ್ತೂರಿ ರಂಗನಾಥ ದೇವಾಲಯದಲ್ಲಿ ಭಕ್ತಿಪೂರ್ವಕವಾಗಿ ನೆರವೇರಿದ ‘ಮಹಾಸುದರ್ಶನ ಯಾಗ’!
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !