ಆರೋಗ್ಯಕರ ಜೀವನಕ್ಕಾಗಿ ವ್ಯಾಯಾಮ – ೩೯
ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಪರಿಹಾರವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಸ್ಫೂರ್ತಿ ಪಡೆಯಬಹುದು. ಈ ಲೇಖನಮಾಲೆಯ ಮೂಲಕ ನಾವು ‘ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, ‘ಅರ್ಗೋನಾಮಿಕ್ಸ್’ ನಿಯಮಗಳು ಮತ್ತು ಕಾಯಿಲೆಗೆ ಅನುಗುಣವಾಗಿ ಯೋಗ್ಯ ವ್ಯಾಯಾಮ’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ವ್ಯಾಯಾಮದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪ್ರಯಾಣವು ಸ್ಫೂರ್ತಿದಾಯಕವಾಗಿರಲಿದೆ !

ಯೋಗ್ಯ ಪದ್ಧತಿಯಿಂದ ವ್ಯಾಯಾಮ ಮಾಡಿದರೆ ಕುತ್ತಿಗೆಯ ಸಮಸ್ಯೆಗಳನ್ನು ಪರಿಹರಿಸಲು ಖಂಡಿತ ಸಹಾಯವಾಗುವುದು. ಈ ಲೇಖನದಲ್ಲಿ ನಾವು ತಲೆನೋವಿಗಾಗಿ ಆವಶ್ಯಕವಾದ ವ್ಯಾಯಾಮದ ವಿಧಗಳನ್ನು ನೋಡೋಣ. ‘ಸಾಮಾನ್ಯ ತಲೆನೋವಿರಲಿ ಅಥವಾ ತೀವ್ರ ಸ್ವರೂಪದ ಅರೆತಲೆನೋವಿರಲಿ, ಅದು ನಮ್ಮ ಕೆಲಸದಲ್ಲಿ ಅಡ್ಡಿಪಡಿಸಲು ಸಾಕಾಗುತ್ತದೆ; ಆದರೆ ನಿಮಗೆ ಆಶ್ಚರ್ಯವೆನಿಸಬಹುದು, ಕೆಲವೊಮ್ಮೆ ನಮ್ಮ ಕೆಲಸ ಮಾಡುವ ಪದ್ಧತಿಯೇ ಅದಕ್ಕೆ ಕಾರಣವಾಗಬಹುದು.
೧. ತಲೆನೋವಿನ ಕಾರಣಗಳು
ಕುತ್ತಿಗೆಯ ಮೇಲಿನ ಒತ್ತಡದಿಂದ ಸಾಮಾನ್ಯವಾಗಿ ಶೇ. ೧೫ ರಿಂದ ೨೦ ರಷ್ಟು ತಲೆನೋವು ಪ್ರಾರಂಭವಾಗುತ್ತದೆ. ೫೦ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳಿಗೆ ಇರುವ ತಲೆನೋವಿನ ಕಾರಣಗಳು ಸುಮಾರು ಶೇ. ೪೨ ರಷ್ಟು ಕುತ್ತಿಗೆಗೆ ಸಂಬಂಧಿಸಿರುತ್ತವೆ. ಕುತ್ತಿಗೆಯ ಬೆನ್ನುಮೂಳೆಯ ಕಾಯಿಲೆಗಳು, ನರಗಳ ಸಮಸ್ಯೆಗಳು ಮತ್ತು ಸ್ನಾಯುಗಳ ಮೇಲಿನ ಒತ್ತಡ ಇತ್ಯಾದಿಗಳು ತಲೆನೋವಿಗೆ ಕಾರಣಗಳಾಗಿರುತ್ತವೆ. ಮೆದುಳಿನ ವರೆಗೆ ತಲುಪಿಸುವ ಎಲ್ಲ ಸಂವೇದನೆಗಳು ಮತ್ತು ಮೆದುಳಿನಿಂದಾಗುವ ಎಲ್ಲ ಕಾರ್ಯದ ವೇಗವು ಕುತ್ತಿಗೆಯ ಮೂಲಕವೇ ಹೊಗುತ್ತವೆ. ಇಷ್ಟೇ ಅಲ್ಲ, ನಮ್ಮ ೫ ಜ್ಞಾನೇಂದ್ರಿಯಗಳ ಪೈಕಿ ೪ ಜ್ಞಾನೇಂದ್ರಿಯಗಳಿಗೆ (ಕಿವಿ, ಕಣ್ಣುಗಳು, ನಾಲಿಗೆ ಮತ್ತು ಮೂಗು ಇವುಗಳಿಗೆ) ಕುತ್ತಿಗೆಯ ಮೂಲಕವೇ ರಕ್ತ ಪರಿಚಲನೆಯಾಗುತ್ತದೆ. ಕುತ್ತಿಗೆಯ ತೊಂದರೆ ಪ್ರಾರಂಭವಾದಾಗ ‘ತಲೆನೋವು, ಕಣ್ಣುಗಳ ಮುಂದೆ ಕತ್ತಲು ಬರುವುದು ಮತ್ತು ಕಿವಿಗಳಲ್ಲಿ ವಿಚಿತ್ರ ಧ್ವನಿ ಕೇಳಿಸುವುದು’, ಇಂತಹ ತೊಂದರೆಗಳಾಗುತ್ತವೆ.

೨. ತಲೆನೋವಿಗೆ ಪರಿಹಾರ
ನಾವು ಕುಳಿತುಕೊಳ್ಳುವ ಪದ್ಧತಿಯು ತಪ್ಪಾಗಿದ್ದರೆ, ಕುತ್ತಿಗೆಯ ಸ್ನಾಯುಗಳ ಮೇಲೆ ಒತ್ತಡ ಬರುತ್ತದೆ. ಕಾಲಾಂತರದಿಂದ ಈ ಸ್ನಾಯುಗಳು ನಿಶಕ್ತವಾಗತೊಡಗುತ್ತವೆ. ಅಲ್ಲಿನ ನರಗಳು ಮತ್ತು ರಕ್ತನಾಳಗಳ ಮೇಲೆ ಒತ್ತಡ ಉಂಟಾಗಿ ತಲೆನೋವು ಪ್ರಾರಂಭವಾಗುತ್ತದೆ. ಕೆಲವರಿಗೆ ಆಗುತ್ತಿರುವ ಅರೆತಲೆನೋವಿನಂತೆಯೇ ಈ ತಲೆನೋವು ಇರುತ್ತದೆ. ಇಂತಹ ತಲೆನೋವು ‘ಕುತ್ತಿಗೆಗೆ ಮರ್ದನ ಮಾಡುವುದು ಅಥವಾ ಬಿಂದುಒತ್ತಡ’ ಇವುಗಳಿಂದ ಕಡಿಮೆಯಾಗುತ್ತದೆ. ತಲೆನೋವಿನಿಂದ ಶಾಶ್ವತವಾಗಿ ಹೊರಗೆ ಬರುವುದಾದರೆ ನಿಯಮಿತವಾಗಿ ವ್ಯಾಯಾಮ ಮತ್ತು ‘ಅರ್ಗೋನಾಮಿಕ್ಸ್’ನ (ergonomics) ನಿಯಮವನ್ನು ಪಾಲಿಸುವುದು ಆವಶ್ಯಕವಾಗಿದೆ.

೩. ಕೆಲಸಗಳನ್ನು ಮಾಡುವಾಗ ಕುತ್ತಿಗೆಯ ಸ್ನಾಯುಗಳ ಮೇಲೆ ಒತ್ತಡ ಬರದಂತೆ ವಹಿಸಬೇಕಾದ ಕಾಳಜಿ
ಅ. ಕುಳಿತುಕೊಂಡು ಕೆಲಸ ಮಾಡುವಾಗ ಪ್ರತಿ ೨ ಗಂಟೆಗಳಿಗೊಮ್ಮೆ ೫ ನಿಮಿಷಗಳ ವ್ಯಾಯಾಮದ ಪ್ರಕಾರಗಳನ್ನು ಮಾಡಬೇಕು.
ಆ.ಕುತ್ತಿಗೆಯ ಸ್ನಾಯುಗಳ ಮೇಲಿನ ಒತ್ತಡವು ಕಡಿಮೆಯಾಗಲು ಮತ್ತು ಶಕ್ತಿ ಹೆಚ್ಚಿಸಲು ಕೆಳಗೆ ಕೊಟ್ಟಿದ ಲಿಂಕ್ ನ್ನು ಕ್ಲಿಕ್ ಮಾಡಿ ಕುತ್ತಿಗೆಯ ವ್ಯಾಯಾಮದ ವಿಧಗಳನ್ನು ಮಾಡಬೇಕು.
ಗಣಕಯಂತ್ರದಲ್ಲಿ ಕೆಲಸ ಮಾಡುತ್ತಿದ್ದರೆ ‘ಕುರ್ಚಿ, ಮೇಜು, ಹಾಗೆಯೇ ಗಣಕಯಂತ್ರದ ಪರದೆ (ಸ್ಕ್ರೀನ್) ಇವುಗಳ ಎತ್ತರ ಸರಿಯಾಗಿದೆಯೇ ?’, ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಕುತ್ತಿಗೆಯ ಸಮಸ್ಯೆಯನ್ನು ಗುಣಪಡಿಸುವುದಕ್ಕಿಂತ ಅದು ಬರದಂತೆ ತಡೆಯುವುದೇ ಉತ್ತಮ ! ಕುತ್ತಿಗೆಯಿಂದ ಉದ್ಭವಿಸುವ ತಲೆನೋವು ಮತ್ತು ಕುತ್ತಿಗೆಯ ಇತರ ತೊಂದರೆಗಳ ನಿವಾರಣೆಗಾಗಿ ವಿಡಿಯೋಗಳು ಲಭ್ಯಗಳಿವೆ, ಅವುಗಳನ್ನು ಆವಶ್ಯವಾಗಿ ನೋಡಬೇಕು.’ ಅದಕ್ಕಾಗಿ ಜೊತೆಗೆ ನೀಡಿದ ವಿಡಿಯೋ ಲಿಂಕ್ ಮೇಲೆ ಕ್ಲಿಕ್ ಮಾಡಿ. ಯಾರಿಗೆ ಕುತ್ತಿಗೆಯ ಸಮಸ್ಯೆಗಳು ಪ್ರಾರಂಭವಾಗಿದೆಯೋ, ಅವರು ವೈದ್ಯರ ಸಲಹೆಯನ್ನು ಪಡೆದು ಈ ವ್ಯಾಯಾಮಗಳನ್ನು ಮಾಡಬೇಕು.’
– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ, ಫೋಂಡಾ, ಗೋವಾ. (೨೪.೧೨.೨೦೨೪)
| ಹಿಂದಿನ ಲೇಖನ ಓದಲು ಇಲ್ಲಿ ಈ ಲಿಂಕ್‌ನ್ನು ಕ್ಲಿಕ್ ಮಾಡಿ : https://sanatanprabhat.org/kannada/172782.html |
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !