
ಆಧುನಿಕ ಜೀವನಶೈಲಿಯಿಂದ ಉಂಟಾಗುವ ದೈಹಿಕ ಸಮಸ್ಯೆಗಳಿಗೆ ’ವ್ಯಾಯಾಮ’ವು ಒಂದು ಪರಿಣಾಮಕಾರಿ ಪರಿಹಾರವಾಗಿದೆ. ಪ್ರಾಚೀನ ಗ್ರಂಥಗಳಲ್ಲಿನ ವ್ಯಾಯಾಮದ ತತ್ತ್ವಜ್ಞಾನವು ಇಂದಿಗೂ ಅಷ್ಟೇ ಉಪಯುಕ್ತವಾಗಿದ್ದು, ನಾವು ಅದರಿಂದ ಸ್ಫೂರ್ತಿ ಪಡೆಯ ಬಹುದು. ಈ ಲೇಖನಮಾಲೆಯ ಮೂಲಕ ನಾವು ‘ವ್ಯಾಯಾಮದ ಮಹತ್ವ, ವ್ಯಾಯಾಮದ ಬಗೆಗಿನ ಸಂದೇಹಗಳ ನಿವಾರಣೆ, ‘ಅರ್ಗೋನಾಮಿಕ್ಸ್’ ನಿಯಮಗಳು ಮತ್ತು ಕಾಯಿಲೆಗೆ ಅನುಗುಣವಾಗಿ ಯೋಗ್ಯ ವ್ಯಾಯಾಮ’ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ವ್ಯಾಯಾಮದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಈ ಪ್ರಯಾಣವು ಸ್ಫೂರ್ತಿದಾಯಕವಾಗಿರಲಿದೆ ! ಯೋಗ್ಯ ರೀತಿಯಲ್ಲಿ ವ್ಯಾಯಾಮ ಮಾಡಿದರೆ ಕುತ್ತಿಗೆಯ ಸಮಸ್ಯೆಗಳನ್ನು ಪರಿಹರಿಸಲು ಖಂಡಿತ ಸಹಾಯವಾಗುವುದು. ಈ ಲೇಖನದಲ್ಲಿ ನಾವು ಕುತ್ತಿಗೆಗಾಗಿ ಆವಶ್ಯಕವಾಗಿರುವ ವ್ಯಾಯಾಮದ ವಿಧಗಳು ಮತ್ತು ಕಾಲಾವಧಿಯನ್ನು ನೋಡೋಣ. ‘ಕಳೆದ ೨೦ ವರ್ಷಗಳಲ್ಲಿ ಜಗತ್ತಿನಾದ್ಯಂತ ಕುತ್ತಿಗೆಯ ಸಮಸ್ಯೆಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ಕೇವಲ ೨೫ ರಿಂದ ೩೦ ವರ್ಷದಲ್ಲಿಯೇ ಕುತ್ತಿಗೆಯ ಬೆನ್ನುಮೂಳೆಯ ಸಮಸ್ಯೆಗಳು ಉದ್ಭವಿಸುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಬರುತ್ತಿವೆ. ಇದಕ್ಕೆ ಕಾರಣವಾದ ಕುಳಿತುಕೊಂಡೇ ಕೆಲಸ ಮಾಡುವ ಜೀವನಶೈಲಿ, ದೀರ್ಘಕಾಲ ಕಂಪ್ಯೂಟರ್ ಮತ್ತು ಮೊಬೈಲ್‌ನ ಬಳಕೆ ಇತ್ಯಾದಿಗಳಿಗೆ ಪರ್ಯಾಯವಿಲ್ಲದಿದ್ದರೂ, ಆ ನಿಟ್ಟಿನಲ್ಲಿ ನಮ್ಮ ದೇಹವನ್ನು ಸಿದ್ಧಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.
೧. ಮನಸ್ಸಿನ ಕಾರ್ಯ
ಕುತ್ತಿಗೆಯ ಮುಖ್ಯ ಕಾರ್ಯವೆಂದರೆ ‘ತಲೆಯನ್ನು ದೇಹದ ಜೊತೆಗೆ ಜೋಡಿಸುವುದು’, ಕುತ್ತಿಗೆಯು ಮೆದುಳು ಮತ್ತು ತಲೆಯ ಎಲ್ಲ ಅವಯವಗಳಿಗೆ ರಕ್ತಪೂರೈಕೆ ಮತ್ತು ಸಂವೇದನೆಗಳನ್ನು ತಲುಪಿಸುತ್ತದೆ, ಹಾಗೆಯೇ ನಮ್ಮ ದೃಷ್ಟಿವ್ಯಾಪ್ತಿಯನ್ನು ಹೆಚ್ಚಿಸಲು (ಎಲ್ಲ ಬದಿಗಳಿಂದ ನೋಡಲು) ಕುತ್ತಿಗೆಯನ್ನೇ ಬಳಸಬೇಕಾಗುತ್ತದೆ. ‘ಚಟುವಟಿಕೆ ಮಾಡುವುದು’, ಇದು ಕುತ್ತಿಗೆಯ ಪ್ರಮುಖ ಗುಣವಾಗಿದೆ.

೨. ಕುತ್ತಿಗೆಯ ಬೆನ್ನುಮೂಳೆಯ ಆರೋಗ್ಯವು ಅದರ ಚಟುವಟಿಕೆಯ ಮೇಲೆ ಅವಲಂಬಿಸಿರುತ್ತದೆ
ಇತ್ತೀಚಿನ ದಿನಗಳಲ್ಲಿ ಕೆಲಸದಿಂದ ಹಿಡಿದು ಮನೋರಂಜನೆ ಯವರೆಗೆ ನಮ್ಮ ಕುತ್ತಿಗೆಯು ಒಂದೇ ಸ್ಥಿತಿಯಲ್ಲಿ ಸ್ಥಿರ ವಾಗಿರುತ್ತದೆ. ಬಹುತೇಕ ಕಂಪ್ಯೂಟರ್ ಅಥವಾ ಕುಳಿತಲ್ಲೇ ಮಾಡುವ ಕೆಲಸಗಳನ್ನು ಮಾಡುವಾಗ, ಹಾಗೆಯೇ ಬಿಡುವಿನ ವೇಳೆಯಲ್ಲಿ ದೂರದರ್ಶನ (ಟಿವಿ) ಮತ್ತು ಮೊಬೈಲ್ ನೋಡುವಾಗಲೂ ಕುತ್ತಿಗೆಯ ಚಲನೆ ಹೆಚ್ಚಾಗಿ ಆಗುವುದಿಲ್ಲ. ಕುತ್ತಿಗೆಯ ಬೆನ್ನುಮೂಳೆಯ ಆರೋಗ್ಯವು ಅವುಗಳ ಚಲನೆ ಯನ್ನು ಅವಲಂಬಿಸಿರುತ್ತದೆ. ಕುತ್ತಿಗೆಯ ಚಲನೆಯು ಸಂಪೂರ್ಣವಾಗಿದ್ದರೆ, ಬೆನ್ನುಮೂಳೆಯ ಕಾಯಿಲೆಗಳು ಬೇಗನೆ ಬರುವುದಿಲ್ಲ. ಕುತ್ತಿಗೆಯ ಚಲನೆಯೇ ಕಾಯಿಲೆಗಳನ್ನು ದೂರವಿಡುವ ಅತ್ಯುತ್ತಮ ಸಾಧನವಾಗಿದೆ.

೩. ಕುತ್ತಿಗೆಯ ಮೇಲಾಗುವ ಭುಜಗಳ ಪರಿಣಾಮ
ನಾವು ಒಂದು ಪ್ರಯೋಗ ಮಾಡೋಣ. ನೆಟ್ಟಗೆ ಕುಳಿತು ಕುತ್ತಿಗೆಯನ್ನು ಮೇಲೆ-ಕೆಳಗೆ ಚಲಿಸಿ ಮತ್ತು ಭುಜಗಳನ್ನು ಮುಂದೆ ಮಾಡಿ ಬೆನ್ನನ್ನು ಬಗ್ಗಿಸಿ ನಂತರ ಕುತ್ತಿಗೆ ಯನ್ನು ಚಲಿಸಿ. ಇದರಲ್ಲಿ ಭುಜಗಳನ್ನು ಮುಂದೆ ಮಾಡಿ ಕುಳಿತಾಗ ಕುತ್ತಿಗೆಯ ಸಂಪೂರ್ಣ ಚಲನೆ ಸಾಧ್ಯವಾಗುವುದಿಲ್ಲ. ಇದರಿಂದ ‘ಭುಜಗಳು ಕುತ್ತಿಗೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ?’ ಎಂಬುದು ನಮಗೆ ತಿಳಿಯುತ್ತದೆ.
೪. ಕುತ್ತಿಗೆಯೊಂದಿಗೆ ಭುಜಗಳ ವ್ಯಾಯಾಮವೂ ಅವಶ್ಯಕ !

ಬೆನ್ನುಮೂಳೆಗೆ ಆಧಾರ ನೀಡಲು ಮತ್ತು ಚಲನೆಯನ್ನು ಕಾಪಾಡಿಕೊಳ್ಳಲು ಕುತ್ತಿಗೆಯ ಸ್ನಾಯುಗಳಲ್ಲಿ ಬಲವಿರುವುದು ಅವಶ್ಯಕವಾಗಿದೆ. ಕುತ್ತಿಗೆ ಮತ್ತು ತಲೆಯ ತೂಕವನ್ನು ಕುತ್ತಿಗೆ ಹಾಗೂ ಭುಜಗಳ ಸ್ನಾಯುಗಳು ಒಟ್ಟಾಗಿ ಹೋರುತ್ತವೆ. ಆದ್ದರಿಂದ ಕುತ್ತಿಗೆಯ ಒಟ್ಟಾರೆ ಆರೋಗ್ಯವು ಹೆಚ್ಚಿನ ಪ್ರಮಾಣದಲ್ಲಿ ಭುಜಗಳ ಸ್ನಾಯುಗಳ ಮೇಲೆ ಅವಲಂಬಿಸಿರುತ್ತದೆ. ಕುತ್ತಿಗೆಯ ಸ್ನಾಯುಗಳ ಮೇಲಿನ ಒತ್ತಡವನ್ನು ದೂರ ಮಾಡಲು ಮತ್ತು ‘ಅದು ಮತ್ತೆ ಬರದಂತೆ’ ತಡೆಯಲು ಕುತ್ತಿಗೆಯ ಜೊತೆಗೆ ಭುಜಗಳ ವ್ಯಾಯಾಮಗಳನ್ನೂ ಮಾಡಲೇಬೇಕು. ಕುತ್ತಿಗೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಕುತ್ತಿಗೆ ಮತ್ತು ಭುಜಗಳ ಕೆಲವು ಸುಲಭ ವ್ಯಾಯಾಮಗಳ ವೀಡಿಯೊಗಳನ್ನು ತಯಾರಿಸಿದ್ದೇವೆ. ಅವುಗಳನ್ನು ನೀವು ತಪ್ಪದೇ ನೋಡಿ. ಅದಕ್ಕಾಗಿ ಜೊತೆಗೆ ನೀಡಿದ ಕ್ಯೂ ಆರ್ ಕೋಡ್ ಅನ್ನು ಸ್ಕಾನ್ ಮಾಡಿ ಯಾರಿಗೆ ಕುತ್ತಿಗೆಯ ಸಮಸ್ಯೆಗಳು ಪ್ರಾರಂಭವಾಗಿದೆಯೋ, ಅವರು ವೈದ್ಯರ ಸಲಹೆಯನ್ನು ಪಡೆದು ಈ ವ್ಯಾಯಾಮಗಳನ್ನು ಮಾಡಬೇಕು.’ (೧೪.೧೨.೨೦೨೪)
– ಶ್ರೀ. ನಿಮಿಷ ಮ್ಹಾತ್ರೆ, ಭೌತಿಕೋಪಚಾರ ತಜ್ಞ, ಫೋಂಡಾ, ಗೋವಾ.
ವಾತಾವರಣದಲ್ಲಿ ಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ೧೫ ದಿನಗಳ ಕಾಲ ಪಾಲಿಸಬೇಕಾದ ಕೆಳಗಿನ ೫ ನಿಯಮಗಳು !
ಬಿಳಿ ಸೆರಗಿನ ಸಮಸ್ಯೆ (ಲ್ಯುಕೋರಿಯಾ) ಮತ್ತು ಆಯುರ್ವೇದ
ವ್ಯಾಯಾಮದಲ್ಲಿ ನೈಸರ್ಗಿಕ ಗುಣಗಳ ಮಹತ್ವ !
ಮಕ್ಕಳ ಅನಾರೋಗ್ಯದ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕೆಗಳು !
ಟ್ರೆಂಡ್ – ತೂಕ ಇಳಿಸುವ ಸೆಳೆತ ಮತ್ತು ನಾವು !
ಬೇಸಿಗೆಯಲ್ಲಿ ತೊಂದರೆಯಾಗಬಾರದೆಂದು ಮುಂದಿನ ಕಾಳಜಿ ವಹಿಸಿ !