ತಮಿಳುನಾಡಿನ ದೇವಸ್ಥಾನದಲ್ಲಿ ವಿಧಿ-ವಿಧಾನಗಳೊಂದಿಗೆ ಪುನರ್ ಪ್ರತಿಷ್ಠಾಪನೆ

ಲಂಡನ್ (ಬ್ರಿಟನ್) – ಇಲ್ಲಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ‘ ಎಶ್ಮೋಲಿಯನ್ ಸಂಗ್ರಹಾಲಯ’ವು (ಮ್ಯೂಸಿಯಂ) ತಮಿಳುನಾಡಿನ ೧೬ ನೇ ಶತಮಾನದ ಅತ್ಯಂತ ಅಮೂಲ್ಯವಾದ ಕಂಚಿನ ಮೂರ್ತಿಯನ್ನು ಭಾರತಕ್ಕೆ ಮರಳಿ ನೀಡಿದೆ. ಇದು ತಮಿಳುನಾಡಿನ ಭಗವಾನ್ ಶ್ರೀವಿಷ್ಣುವಿನ ಭಕ್ತರಾಗಿದ್ದ ೧೬ ನೇ ಶತಮಾನದ ಮಹಾನ್ ಸಂತ ತಿರುಮಂಗೈ ಆಳ್ವಾರ್ ಅವರ ಮೂರ್ತಿಯಾಗಿದೆ. ಲಂಡನ್‌ನ ‘ಇಂಡಿಯಾ ಹೌಸ್’ನಲ್ಲಿ ನಡೆದ ಸಮಾರಂಭದಲ್ಲಿ ಈ ಮೂರ್ತಿಯನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ೫೦೦ ವರ್ಷಗಳಷ್ಟು ಪುರಾತನವಾದ ಈ ಮೂರ್ತಿಯನ್ನು ಈಗ ತಮಿಳುನಾಡಿನ ಯಾವ ದೇವಸ್ಥಾನದಿಂದ ದಶಕಗಳ ಹಿಂದೆ ಕಳು ಮಾಡಲಾಗಿತ್ತೋ, ಅದೇ ದೇವಸ್ಥಾನದಲ್ಲಿ ಮತ್ತೆ ಪ್ರತಿಷ್ಠಾಪಿಸಲಾಗುವುದು.
ಮೂರ್ತಿಯ ರಹಸ್ಯ ಬಯಲಾಗಿದ್ದು ಹೀಗೆ !
೧. ಆಕ್ಸ್‌ಫರ್ಡ್‌ನ ಈ ಸಂಗ್ರಹಾಲಯವು ಈ ಮೂರ್ತಿಯನ್ನು ೧೯೬೭ ರಲ್ಲಿ ಖರೀದಿಸಿತ್ತು.
೨. ೨೦೧೯ ರಲ್ಲಿ ಸಂಶೋಧಕರೊಬ್ಬರು ಈ ಮೂರ್ತಿಯು ತಮಿಳುನಾಡಿನ ಥಾಡಿಕೊಂಬುವಿನ ‘ಶ್ರೀ ಸೌಂದರ್ಯರಾಜ ಪೆರುಮಾಳ್ ದೇವಸ್ಥಾನ’ಕ್ಕೆ ಸೇರಿದ್ದು ಎಂದು ಬಹಿರಂಗಪಡಿಸಿದರು.
೩. ಈ ಬಗ್ಗೆ ತನಿಖೆ ನಡೆಸಿದಾಗ, ಸತ್ಯಾಂಶ ಹೊರಬಂದಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ತಮಿಳುನಾಡು ಸರಕಾರವು ಈ ಕುರಿತು ಬಲವಾದ ಸಾಕ್ಷ್ಯಗಳನ್ನು ಪ್ರಸ್ತುತ ಪಡಿಸಿದವು.
೪. ಎಶ್ಮೋಲಿಯನ್ ಮ್ಯೂಸಿಯಂನ ನಿರ್ದೇಶಕ ಡಾ. ಝಾ ಸ್ಟರ್ಗಿಸ್ ಮಾತನಾಡಿ, ಈ ಮೂರ್ತಿಯನ್ನು ತಾವು ಸದುದ್ದೇಶದಿಂದ ಖರೀದಿಸಿದ್ದೆವು; ಆದರೆ ಸತ್ಯ ತಿಳಿಯುತ್ತಿದ್ದಂತೆಯೇ ಅದನ್ನು ಮರಳಿ ನೀಡುವುದು ಸರಿಯಾದ ಕ್ರಮ ಎಂದು ಹೇಳಿದರು. ವಿಶೇಷವೆಂದರೆ, ಈ ಸಂಗ್ರಹಾಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ಯಾವುದೇ ದೇಶಕ್ಕೆ ಅದರ ವಸ್ತುವನ್ನು ಮರಳಿ ನೀಡಲಾಗಿದೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation