ಭಾರತದ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ನಿಂದ ಹೊರಡುವವರೆಗೂ ಸ್ವತಃ ಇಸ್ರೇಲ್ಗೂ ಈ ದಾಳಿಯ ಬಗ್ಗೆ ಕಲ್ಪನೆಯಿರಲಿಲ್ಲ ಎಂಬ ಮಾಹಿತಿ ಬಹಿರಂಗ!

ಜೆರುಸಲೆಮ್ (ಇಸ್ರೇಲ್): ಇರಾನ್ ಮೇಲೆ ದಾಳಿ ಮಾಡುವ ಯೋಜನೆಯನ್ನು ದಾಳಿಗಿಂತ ಕೇವಲ ೨ ದಿನಗಳ ಮೊದಲು ನಿರ್ಧರಿಸಲಾಗಿತ್ತು ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೇನ್ ಅಜಾರ್ ಅವರು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಇಸ್ರೇಲ್ ಪ್ರವಾಸ ಮುಗಿದ ಸ್ವಲ್ಪ ಸಮಯದೊಳಗೆ ಇಸ್ರೇಲ್ ಇರಾನ್ ಮೇಲೆ ಭೀಕರ ದಾಳಿ ನಡೆಸಿದ್ದರಿಂದ ಅನೇಕ ತರ್ಕ-ವಿತರ್ಕಗಳು ಕೇಳಿಬಂದಿದ್ದವು. ಈಗ ಅಜಾರ್ ಅವರ ಸ್ಪಷ್ಟನೆಯಿಂದ ಈ ಚರ್ಚೆಗಳಿಗೆ ತೆರೆ ಬಿದ್ದಿದೆ.
ಅಜಾರ್ ಅವರು ಮುಂದುವರಿದು ಮಾತನಾಡುತ್ತಾ, ‘‘ಇರಾನ್ ಮೇಲಿನ ದಾಳಿಯು ಪೂರ್ವಯೋಜಿತವಾಗಿರಲಿಲ್ಲ. ಪ್ರಧಾನಿ ಮೋದಿ ಇಸ್ರೇಲ್ನಿಂದ ಮರಳಿದ ನಂತರ ಕ್ರಮ ಕೈಗೊಳ್ಳಲು ಸಿಕ್ಕ ಅವಕಾಶದ ಫಲವಿದು. ಪ್ರಧಾನ ಮಂತ್ರಿ ಮೋದಿ ಅವರ ಪ್ರವಾಸದ ಸಮಯದಲ್ಲಿ ಈ ಸಂಭಾವ್ಯ ದಾಳಿಯ ಬಗ್ಗೆ ಸ್ವತಃ ಇಸ್ರೇಲ್ಗೂ ಮಾಹಿತಿ ಇರಲಿಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ನರೇಂದ್ರ ಮೋದಿ ಅವರ ನಡುವೆ ಪ್ರಾದೇಶಿಕ ಅಭಿವೃದ್ಧಿಯ ಬಗ್ಗೆ ಚರ್ಚೆಯಾಯಿತು; ಆದರೆ ನಮಗೇ ತಿಳಿಯದ ವಿಷಯವನ್ನು ನಾವು ಸಾರ್ವಜನಿಕವಾಗಿ ಹಂಚಿಕೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಫೆಬ್ರವರಿ ೨೮ ರಂದು ಬೆಳಿಗ್ಗೆ ಇರಾನ್ ಮೇಲಿನ ದಾಳಿಗೆ ಭದ್ರತಾ ಮಂಡಳಿಯ ಒಪ್ಪಿಗೆ ದೊರೆಯಿತು’’ ಎಂದು ಹೇಳಿದರು.
Strikes on Iran after “operational window” post Modi visit – Israeli Envoy
Israeli Ambassador Reuven Azar said the U.S.–Israel strikes on Iran were launched after an “operational opportunity” emerged following PM Narendra Modi’s departure from Tel Aviv.
A result of decades of… pic.twitter.com/zhNRFJ0bLX
— Sanatan Prabhat (@SanatanPrabhat) March 4, 2026
ಅನೇಕ ದಶಕಗಳ ಸಿದ್ಧತೆ ಮತ್ತು ಗುಪ್ತಚರ ಸಂಸ್ಥೆಗಳ ಯಶಸ್ಸು!
ಅಜಾರ್ ಅವರು ಮುಂದುವರಿಯುತ್ತಾ, ‘‘ಇರಾನ್ನ ಬೆದರಿಕೆಗಳಿಂದ ಇಸ್ರೇಲ್ ಕಳೆದ ಹಲವು ದಶಕಗಳಿಂದ ತನ್ನ ಸೈನಿಕ ಸಾಮರ್ಥ್ಯ ಮತ್ತು ಗುಪ್ತಚರ ಸಾಮರ್ಥ್ಯವನ್ನು ಹೆಚ್ಚಿಸಲು ಶತಕೋಟಿ ಡಾಲರ್ಗಳನ್ನು ಹೂಡಿಕೆ ಮಾಡಿದೆ. ಇರಾನ್ ಆಡಳಿತದ ಕಾರ್ಯವೈಖರಿ, ಅದರ ಮಿಲಿಟರಿ ವ್ಯವಸ್ಥೆ, ಇರಾನ್ನ ನಿರ್ಧಾರ ತೆಗೆದುಕೊಳ್ಳುವವರ ಮಾಹಿತಿ ಮತ್ತು ಅವರ ನೆಲೆಗಳನ್ನು ನಿಖರವಾಗಿ ತಿಳಿದುಕೊಳ್ಳುವುದು ಪ್ರಾಥಮಿಕ ಗುರಿಗಳಾಗಿದ್ದವು. ಇದಕ್ಕಾಗಿ ಹಾಗೂ ಇರಾನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ನಾವು ಹೊಸ ಅತ್ಯಾಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದೇವೆ. ಈ ಕಾರಣದಿಂದಲೇ ಈ ದಾಳಿಯು ಯಶಸ್ವಿಯಾಗಲು ಸಾಧ್ಯವಾಯಿತು’’ ಎಂದು ತಿಳಿಸಿದರು.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ