ಅಲ್ವಾರ್ (ರಾಜಸ್ಥಾನ) ನಲ್ಲಿ ಅಜ್ಞಾತರಿಂದ ಶಿವಲಿಂಗ ಭಗ್ನ ಮತ್ತು ದೇವಸ್ಥಾನದ ಬಳಿ ಕರುವನ್ನು ಕಡಿದು ಹಾಕಿದರು ! – Rajasthan Shivling Vandalized

ಅಲ್ವಾರ್ (ರಾಜಸ್ಥಾನ) – ಇಲ್ಲಿನ ಸ್ಮಶಾನದ ಬಳಿ ಇರುವ ಪುರಾತನ ದೇವಸ್ಥಾನವೊಂದರಲ್ಲಿ ಅಜ್ಞಾತ ವ್ಯಕ್ತಿಗಳು ವಿಧ್ವಂಸಕ ಕೃತ್ಯ ಎಸಗಿದ್ದಾರೆ. ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಒಡೆದು ಹಾಕಲಾಗಿದ್ದು, ಇತರ ಹಲವು ಮೂರ್ತಿಗಳಿಗೂ ಹಾನಿ ಮಾಡಲಾಗಿದೆ. ಇದರೊಂದಿಗೆ ಹಸುವಿನ ಕರುವನ್ನು ಕಡಿದು ದೇವಸ್ಥಾನದ ಬಳಿ ಎಸೆದಿರುವುದರಿಂದ ಇಡೀ ಪರಿಸರದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ. ಸ್ಥಳೀಯ ನಾಗರಿಕರು ಘಟನಾ ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿ ಜನರನ್ನು ಶಾಂತಗೊಳಿಸಿದ್ದಾರೆ.

ಇಲ್ಲಿ ಕೆಲವು ದಿನಗಳ ಹಿಂದೆ ನಂದಿಯ ವಿಗ್ರಹದ ಕುತ್ತಿಗೆ ಮುರಿದಿರುವುದು ಕಂಡುಬಂದಿತ್ತು. ಅದರ ನಂತರ ಗಣೇಶನ ವಿಗ್ರಹದ ಸೊಂಡಿಲು ಕೂಡ ಮುರಿದಿರುವುದು ಪತ್ತೆಯಾಗಿತ್ತು. ಮೊದಲು ಈ ಘಟನೆಗಳನ್ನು ಕೋತಿಗಳು ಮಾಡಿರಬಹುದು ಎಂಬ ಸಂಶಯ ವ್ಯಕ್ತವಾಗಿತ್ತು; ಆದರೆ ಈ ಬಾರಿ ಶಿವಲಿಂಗವನ್ನು ಕಲ್ಲಿನ ಸಹಾಯದಿಂದ ಸಂಪೂರ್ಣವಾಗಿ ಪುಡಿ ಮಾಡಲಾಗಿದೆ. ಶಿವಲಿಂಗದ ಬಳಿ ಒಡೆದ ಕಲ್ಲು ಕೂಡ ಪತ್ತೆಯಾಗಿರುವುದರಿಂದ, ಈ ಘಟನೆಯನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗಿದೆ ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.

ಸಂಪಾದಕೀಯ ನಿಲುವು

ಇಂತಹ ಕೃತ್ಯವನ್ನು ಹಿಂದೂಗಳು ಎಂದಿಗೂ ಮಾಡಲಾರರು. ಹಾಗಾಗಿ ಇದರ ಹಿಂದೆ ಮೂರ್ತಿ ಪೂಜೆಯನ್ನು ವಿರೋಧಿಸುವವರು ಮತ್ತು ಹಿಂದೂಗಳನ್ನು ‘ಕಾಫಿರ್’ ಎಂದು ಕರೆಯುವವರೇ ಇರಬಹುದು ಎಂಬುದರಲ್ಲಿ ಸಂಶಯವಿಲ್ಲ! ಇಂತಹವರ ವಿರುದ್ಧ ಈಗ ಶಾಶ್ವತ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ!