|

(“ಭಾರತವು ಪಾಕಿಸ್ತಾನದ ವಿರುದ್ಧ ಮತ್ತೆ ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದೆ”: ಸಂಸತ್ತಿನಲ್ಲಿ ಆಸಿಫ್ ಅಲಿ ಜರ್ದಾರಿ ದಾವೆ)
ಇಸ್ಲಾಮಾಬಾದ್ (ಪಾಕಿಸ್ತಾನ): “ಭಾರತೀಯ ನಾಯಕರು ಪಾಕಿಸ್ತಾನದ ವಿರುದ್ಧ ಮತ್ತೊಂದು ಯುದ್ಧಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಭಾರತವು ಯುದ್ಧಭೂಮಿಯಿಂದ ಹಿಂದೆ ಸರಿದು ಚರ್ಚೆಯ ಹಾದಿಗೆ ಬರಬೇಕು; ಏಕೆಂದರೆ ಪ್ರಾದೇಶಿಕ ಭದ್ರತೆಗೆ ಅದೇ ಏಕೈಕ ಆಯ್ಕೆಯಾಗಿದೆ,” ಎಂದು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅಲ್ಲಿನ ಸಂಸತ್ತಿನಲ್ಲಿ ಕರೆ ನೀಡಿದರು.
ಜರ್ದಾರಿ ಪಾಕಿಸ್ತಾನವನ್ನು ಒಂದು ‘ಜವಾಬ್ದಾರಿಯುತ ಅಣ್ವಸ್ತ್ರ ರಾಷ್ಟ್ರ’ ಎಂದು ಬಿಂಬಿಸಲು ಪ್ರಯತ್ನಿಸಿದರು. “ಅಂತಹ ಶಕ್ತಿಯೊಂದಿಗೆ ದೊಡ್ಡ ಜವಾಬ್ದಾರಿಯೂ ಬರುತ್ತದೆ; ಆದರೆ ಅಗತ್ಯ ಬಿದ್ದಲ್ಲಿ ಪಾಕಿಸ್ತಾನ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲದು,” ಎಂದು ಅವರು ಸ್ಪಷ್ಟಪಡಿಸಿದರು. (ತನ್ನನ್ನು ತಾನು ‘ಜವಾಬ್ದಾರಿಯುತ’ ಎಂದು ಕರೆದುಕೊಳ್ಳುವುದು ಹಾಸ್ಯಾಸ್ಪದ. ಇತರ ರಾಷ್ಟ್ರಗಳು ಹಾಗೆ ಹೇಳಬೇಕು ಎಂಬ ಕನಿಷ್ಠ ಜ್ಞಾನವೂ ಪಾಕಿಸ್ತಾನದ ಪ್ರಥಮ ಪ್ರಜೆಗೆ ಇಲ್ಲದಿರುವುದು ಆ ದೇಶದ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ! – ಸಂಪಾದಕ)
‘ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ ರದ್ದು ಮಾಡುವುದು ಜಲ ಭಯೋತ್ಪಾದನೆ!'(ಅಂತೆ)
‘ಜಿಹಾದಿ ಭಯೋತ್ಪಾದನೆ’ ಮತ್ತು ‘ ಹಿಂದೂ ದ್ವೇಷ’ ಈ ವಿಚಾರಧಾರೆಯ ಮೇಲೆ ನಿಂತಿರುವ ಪಾಕಿಸ್ತಾನ
ಪಾಕಿಸ್ತಾನಕ್ಕೆ ಭಾರತದ ಪಾಠ ಕಲಿಸುವ ಎಲ್ಲಾ ಕೃತಿಗಳು ಭಯೋತ್ಪಾದನೆಯಂತೆ ಕಾಣುವುದು.
ಜರ್ದಾರಿ ಅವರು ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವನ್ನು ಕಟುವಾಗಿ ಟೀಕಿಸಿದರು. ಇದನ್ನು ಅವರು ‘ಜಲ ಭಯೋತ್ಪಾದನೆ’ ಎಂದು ಕರೆದರು ಮತ್ತು ನವದೆಹಲಿಯು ರಾಜಕೀಯ ಲಾಭಕ್ಕಾಗಿ ನೀರಿನ ಹರಿವನ್ನು ಆಯುಧವನ್ನಾಗಿ ಬಳಸುತ್ತಿದೆ ಎಂದು ಆರೋಪಿಸಿದರು. “ನಾವು ಜಮ್ಮು ಮತ್ತು ಕಾಶ್ಮೀರದ ಜನರಿಗೆ ರಾಜತಾಂತ್ರಿಕ ಹಾಗೂ ನೈತಿಕ ಬೆಂಬಲವನ್ನು ನೀಡುವುದನ್ನು ಮುಂದುವರಿಸುತ್ತೇವೆ. ಕಾಶ್ಮೀರ ಸಮಸ್ಯೆ ಬಗೆಹರಿಯುವವರೆಗೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸಾಧ್ಯವಿಲ್ಲ,” ಎಂದೂ ಅವರು ಹೇಳಿದರು.
ತಾಲಿಬಾನ್ ಮೇಲೆ ಆರೋಪ ಮತ್ತು ಸಂಸತ್ತಿನಲ್ಲಿ ಗದ್ದಲ
ಅಫ್ಘಾನಿಸ್ತಾನದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಜರ್ದಾರಿ, ತಾಲಿಬಾನ್ ಆಡಳಿತವು ‘ದೋಹಾ ಒಪ್ಪಂದ’ವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು. “ಪಾಕಿಸ್ತಾನದ ಭೂಮಿ ಪವಿತ್ರವಾಗಿದ್ದು, ಅದನ್ನು ಅಸ್ಥಿರಗೊಳಿಸಲು ಯಾರಿಗೂ ಅವಕಾಶ ನೀಡುವುದಿಲ್ಲ,” ಎಂದರು. ಜರ್ದಾರಿ ಭಾಷಣ ಮಾಡುತ್ತಿದ್ದಾಗ, ಇಮ್ರಾನ್ ಖಾನ್ ಅವರ ಪಕ್ಷದ ಸಂಸದರು ಖಾನ್ ಅವರ ಬಿಡುಗಡೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು, ಇದರಿಂದಾಗಿ ಸಂಸತ್ತಿನಲ್ಲಿ ಭಾರಿ ಗದ್ದಲ ಉಂಟಾಯಿತು.
ಸಂಪಾದಕೀಯ ನಿಲುವುಇಲ್ಲಿಯವರೆಗೆ ಪಾಕಿಸ್ತಾನದ ಆಕ್ರಮಣದಿಂದ ಭಾರತದೊಂದಿಗೆ 4 ಯುದ್ಧಗಳು ನಡೆದಿವೆ. ಭಾರತವು ಯಾವತ್ತೂ ಪಾಕಿಸ್ತಾನದ ಮೇಲೆ ಮೊದಲು ಆಕ್ರಮಣ ಮಾಡಿಲ್ಲ. ಹೀಗಿದ್ದರೂ, ಜರ್ದಾರಿ ಇಂತಹ ಆರೋಪದ ಮೂಲಕ ತಮ್ಮನ್ನು ತಾವು ಸಂತ್ರಸ್ತರೆಂದು ತೋರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಭಾರತವು ನಿಜವಾಗಿಯೂ ಯುದ್ಧ ಮಾಡಿದರೆ, ಪಾಕಿಸ್ತಾನವು ವಿಶ್ವದ ಭೂಪಟದಿಂದಲೇ ನಾಶವಾಗಲಿದೆ ಎಂಬ ಭಯದಿಂದ ಅವರು ಈಗ ಚರ್ಚೆಯ ಬಗ್ಗೆ ಮಾತನಾಡುತ್ತಿದ್ದಾರೆ! |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation