ಚಿಕ್ಕಬಳ್ಳಾಪುರ: ಆಲಿಪುರ ಗ್ರಾಮದಲ್ಲಿ ಖಾಮೇನಿ ನಿಧನಕ್ಕೆ 3 ದಿನಗಳ ಶೋಕಾಚರಣೆ!

ಚಿಕ್ಕಬಳ್ಳಾಪುರ – ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತುಲ್ಲಾ ಅಲಿ ಖಾಮೇನಿ ಹತ್ಯೆಯಾದ ಹಿನ್ನೆಲೆಯಲ್ಲಿ ಇಲ್ಲಿ ಶೋಕ ವ್ಯಕ್ತಪಡಿಸಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪಕ್ಕದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಆಲಿಪುರ ಗ್ರಾಮದಲ್ಲಿ 3 ದಿನಗಳ ಕಾಲ ಶೋಕಾಚರಣೆ ಮಾಡಲಾಗುತ್ತಿದೆ. ಗ್ರಾಮಸ್ಥರು ಅಂಗಡಿ ಮುಂಗಟ್ಟು ಹಾಗೂ ಮಾರುಕಟ್ಟೆಗಳನ್ನು ಬಂದ್ ಮಾಡುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಖಾಮೇನಿ ಮತ್ತು ಚಿಕ್ಕಬಳ್ಳಾಪುರದ ನಡುವೆ ಹಳೆಯ ಸಂಬಂಧವಿದೆ. 1986ರಲ್ಲಿ ಖಾಮೇನಿ ಅವರು ಆಲಿಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಭೇಟಿಯ ನೆನಪುಗಳು ಇಂದಿಗೂ ಸ್ಥಳೀಯರ ಮನಸ್ಸಿನಲ್ಲಿ ಹಸಿರಾಗಿವೆ. ಆಲಿಪುರದ ಸುಮಾರು 20,000 ಶಿಯಾ ಮುಸ್ಲಿಮರು ಖಾಮೇನಿ ಅವರನ್ನು ತಮ್ಮ ‘ಧರ್ಮಗುರು’ ಎಂದು ಪರಿಗಣಿಸುತ್ತಾರೆ. ಖಾಮೇನಿ ಅವರ ಹೆಸರಿನಲ್ಲಿ ಆಲಿಪುರದಲ್ಲಿ ಇಂದಿಗೂ ಒಂದು ಖಾಸಗಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ.

ಸಂಪಾದಕೀಯ ನಿಲುವು

ಒಂದು ವೇಳೆ ಭವಿಷ್ಯದಲ್ಲಿ ಭಾರತವು ಇರಾನ್ ವಿರುದ್ಧ ನಿಲ್ಲಬೇಕಾದ ಸಂದರ್ಭ ಬಂದರೆ, ಈ ಮುಸ್ಲಿಮರು ಯಾರ ಪರವಾಗಿ ನಿಲ್ಲುತ್ತಾರೆ ಎಂದು ಯಾರಾದರೂ ಕೇಳುವರೇ?