ಇಂದೋರ್ (ಮಧ್ಯಪ್ರದೇಶ): ಹಿಂದೂ ಎಂದು ನಂಬಿಸಿ ಮಹಿಳೆಯ ಮೇಲೆ ಅತ್ಯಾಚಾರ ಮಾಡಿದ ಜಾವೇದ್

ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ

ಇಂದೋರ್ (ಮಧ್ಯಪ್ರದೇಶ) – ಕರಾಟೆ ತರಬೇತುದಾರನಾದ ಜಾವೇದ್ ಅಖ್ತರ್ ಎಂಬಾತ ತನ್ನ ಹೆಸರನ್ನು ‘ಕರಣ್’ ಎಂದು ಹೇಳಿಕೊಂಡು, ತಾನು ಹಿಂದೂ ಎಂದು ನಂಬಿಸಿ ಹಿಂದೂ ಮಹಿಳೆಗೆ ಮದುವೆಯ ಆಮಿಷ ತೋರಿಸಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಮಹಿಳೆಯ ಅಶ್ಲೀಲ ಚಿತ್ರಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಇಂದೋರ್‌ನ ಮಹೂ ಎಂಬಲ್ಲಿ ಈ ಘಟನೆ ನಡೆದಿದೆ. ಯುವತಿಯ ದೂರಿನ ಮೇರೆಗೆ ಪೊಲೀಸರು ಕರಾಟೆ ತರಬೇತುದಾರ ಜಾವೇದ್ ಅಖ್ತರ್‌ನನ್ನು ಬಂಧಿಸಿದ್ದಾರೆ.

1. ತನ್ನನ್ನು ‘ಕರಣ್ ಸಿಂಗ್’ ಎಂದು ಪರಿಚಯಿಸಿಕೊಂಡಿದ್ದ ಜಾವೇದ್, ಹಿಂದೂ ಮಹಿಳೆಯನ್ನು ಪ್ರೇಮ ಜಾಲದಲ್ಲಿ ಸಿಲುಕಿಸಿ ಮದುವೆಯ ಆಮಿಷ ಒಡ್ಡಿದ್ದನು. ಸಂತ್ರಸ್ತೆಯ ಪ್ರಕಾರ, 2020 ರಲ್ಲಿ ಕರಾಟೆ ತರಗತಿಯ ಸಮಯದಲ್ಲಿ ಅವರಿಬ್ಬರ ನಡುವೆ ಸ್ನೇಹ ಏರ್ಪಟ್ಟಿತು.

2. ಜಾವೇದ್ ಹಲವು ವರ್ಷಗಳ ಕಾಲ ತನ್ನ ನಿಜವಾದ ಗುರುತನ್ನು ಮರೆಮಾಚಿದ್ದನು. ಒಂದು ಕಾರ್ಯಕ್ರಮದಲ್ಲಿ ಯಾರೋ ಅವನನ್ನು ‘ಜಾವೇದ್’ ಎಂದು ಕರೆದಾಗ ಆತನ ಅಸಲಿಯತ್ತು ಬಯಲಿಗೆ ಬಂದಿದೆ. ಮಹಿಳೆ ಆತನಿಂದ ದೂರವಿರಲು ಪ್ರಯತ್ನಿಸಿದಾಗ, ಜಾವೇದ್ ಆಕೆಯ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಆಕೆಯ ಮಾನಹಾನಿ ಮಾಡಿದ್ದಾನೆ.

3. ತನ್ನ ಮೇಲೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಜಾವೇದ್ ಒತ್ತಡ ಹೇರುತ್ತಿದ್ದನೆಂದು ಮಹಿಳೆ ಆರೋಪಿಸಿದ್ದಾಳೆ. ಫೆಬ್ರವರಿ 26 ರಂದು ಆರೋಪಿಯು ಆಕೆಯನ್ನು ಸಾರ್ವಜನಿಕ ಸ್ಥಳದಿಂದ ಬಲವಂತವಾಗಿ ಎತ್ತೊಯ್ಯಲು ಪ್ರಯತ್ನಿಸಿದ್ದಲ್ಲದೆ, ವಿರೋಧಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಫೆಬ್ರವರಿ 27 ರ ರಾತ್ರಿ ಜಾವೇದ್‌ನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

  • ಇನ್ನು ಮುಂದೆ ಹಿಂದೂಗಳು ವ್ಯಾಯಾಮ ತರಬೇತುದಾರರು, ಕರಾಟೆ ತರಬೇತುದಾರರು ಅಥವಾ ಇತರ ಯಾವುದೇ ರೀತಿಯ ತರಬೇತುದಾರರ ಹಿನ್ನೆಲೆಯನ್ನು ಪರಿಶೀಲಿಸಿದರೆ ಅದರಲ್ಲಿ ತಪ್ಪೇನಿದೆ?
  • ಹಿಂದೂ ಮಹಿಳೆಯರು ಕಣ್ಣು ಮುಚ್ಚಿ ಯುವಕರನ್ನು ನಂಬುತ್ತಿರುವುದರಿಂದ ಇಂತಹ ಘಟನೆಗಳು ಹೆಚ್ಚೆಚ್ಚು ನಡೆಯುತ್ತಿವೆ. ಆದ್ದರಿಂದ ಹಿಂದೂ ಮಹಿಳೆಯರು ಯಾವ ರೀತಿಯ ಆಮಿಷಗಳಿಗೆ ಬಲಿಯಾಗಬಾರದು!