ಬರೇಲಿಯಲ್ಲಿ (ಉತ್ತರ ಪ್ರದೇಶ) ಇಬ್ಬರು ಅಪ್ರಾಪ್ತ ಸಹೋದರಿಯರ ಸಹಾಯದಿಂದ ಹಿಂದೂ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಅನಾಸ್ Muslim Boy Anas Drugged Raped Hindu Girl

ಪೋಷಕರೂ ಕೂಡ ಸಹಾಯ ಮಾಡಿದರು

ಬರೇಲಿ (ಉತ್ತರ ಪ್ರದೇಶ) – ಇಲ್ಲಿ ಇಬ್ಬರು ಅಪ್ರಾಪ್ತ ಮುಸ್ಲಿಂ ಯುವತಿಯರು ೧೦ನೇ ತರಗತಿಯಲ್ಲಿ ಓದುತ್ತಿದ್ದ ಅಪ್ರಾಪ್ತ ಹಿಂದೂ ಹುಡುಗಿಯನ್ನು ಸ್ನೇಹದ ಬಲೆಯಲ್ಲಿ ಸಿಲುಕಿಸಿ ಸಮಯ ಸಾಧಿಸಿ ಆಕೆಗೆ ಮಾದಕ ವಸ್ತು ನೀಡಿದ್ದಲ್ಲದೆ, ತಮ್ಮದೇ ಸಹೋದರನಿಂದ ಆಕೆಯ ಮೇಲೆ ಅತ್ಯಾಚಾರ ಮಾಡಿಸಿದ್ದಾರೆ. ಈ ಕೃತ್ಯದ ವಿಡಿಯೋ ಕೂಡ ಮಾಡಲಾಗಿದೆ. ಈ ಘಟನೆಯಲ್ಲಿ ಅನಾಸ್‌ನ ತಂದೆ-ತಾಯಿಯರೂ ಸಹ ಮಗನಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಅನಾಸ್‌ನನ್ನು ಬಂಧಿಸಿದ್ದಾರೆ. ಪೊಲೀಸರು ಆತನ ಇಬ್ಬರು ಅಪ್ರಾಪ್ತ ಸಹೋದರಿಯರು ಮತ್ತು ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಿ ಅವರನ್ನು ಆರೋಪಿಗಳನ್ನಾಗಿ ಮಾಡಿದ್ದಾರೆ.

ಹುಡುಗಿ ಸಂಜೆಯಾದರೂ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಹುಡುಕಾಟ ಆರಂಭಿಸಿದರು. ಈ ವಿಷಯ ಆರೋಪಿ ಕುಟುಂಬಕ್ಕೆ ಹಾಗೂ ಮುಖ್ಯ ಆರೋಪಿಗೆ ತಿಳಿಯುತ್ತಿದ್ದಂತೆಯೇ ಅವರು ಗಾಬರಿಗೊಂಡರು. ಮುಸ್ಲಿಂ ಯುವತಿಯರು ಸಂತ್ರಸ್ತೆಯನ್ನು ಅರೆಪ್ರಜ್ಞಾವಸ್ಥೆಯಲ್ಲಿ ಆಕೆಯ ಮನೆಗೆ ಕರೆದುಕೊಂಡು ಹೋಗಿ ಅಲ್ಲಿ ಬಿಟ್ಟು ಪರಾರಿಯಾಗಿದ್ದಾರೆ. ಸಂತ್ರಸ್ತೆಗೆ ಪ್ರಜ್ಞೆ ಬಂದ ನಂತರ ಆಕೆ ನಡೆದ ಘಟನೆಯನ್ನು ಕುಟುಂಬದವರಿಗೆ ತಿಳಿಸಿದ್ದಾಳೆ. ಇದರ ಬೆನ್ನಲ್ಲೇ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಸಂಪಾದಕೀಯ ನಿಲುವು

ಇಂತಹವರಿಗೆ ಈಗ ಗಲ್ಲು ಶಿಕ್ಷೆಯೇ ಆಗಬೇಕು. ಇದಕ್ಕಾಗಿ ಕೇಂದ್ರ ಸರಕಾರವು ಕಠಿಣ ಕಾನೂನು ರೂಪಿಸುವುದು ಅತ್ಯಗತ್ಯ!