ತಮಿಳುನಾಡು: ನಮಾಜ್‌ ಗೆ ಅಡ್ಡಿಯೆಂದು ಹಿಂದೂಗಳ ಧಾರ್ಮಿಕ ಮೆರವಣಿಗೆಗೆ ತಡೆ!

ಮಸೀದಿಯ ಬಳಿ ಮೆರವಣಿಗೆ ಸಾಗುವಾಗ ಘೋಷಣೆ ಕೂಗುವುದು, ವಾದ್ಯ ನುಡಿಸುವುದು ಮತ್ತು ಪಟಾಕಿ ಸಿಡಿಸುವುದಕ್ಕೆ ನಿಷೇಧ

ಎಐ ಚಿತ್ರ

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಉಥಮಾಪಾಳಯಂನಲ್ಲಿರುವ ಕಳಾಥೀಶ್ವರರ್ ಜ್ಞಾನಾಂಬಿಗೈ ದೇವಸ್ಥಾನದ ಮಾಸಿಮಗಂ ಜಾತ್ರಾ ಮಹೋತ್ಸವದ ಪ್ರಮುಖ ಧಾರ್ಮಿಕ ಮೆರವಣಿಗೆಯ ಹಾದಿಯಲ್ಲಿ ಮಸೀದಿಯೊಂದಿದ್ದು, ಆ ಮಾರ್ಗದಲ್ಲಿ ಮೆರವಣಿಗೆ ಸಾಗುವುದಕ್ಕೆ ಸ್ಥಳೀಯ ಮುಸಲ್ಮಾನರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿರೋಧದಿಂದಾಗಿ ಫೆಬ್ರವರಿ ೨೫ರ ರಾತ್ರಿ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಯಿತು ಮತ್ತು ಕೆಲವು ಗಂಟೆಗಳ ಕಾಲ ಮೆರವಣಿಗೆಯನ್ನು ತಡೆಯಬೇಕಾಯಿತು. ಈ ವಿವಾದದ ಹಿನ್ನೆಲೆಯಲ್ಲಿ ಆಡಳಿತ ಮತ್ತು ಪೊಲೀಸರು ಹಸ್ತಕ್ಷೇಪ ಮಾಡಬೇಕಾಯಿತು.

೧. ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದ ಒಕ್ಕಲಿಗ ಗೌಂಡರ್ ಸಮುದಾಯದ ಭಕ್ತರು ಪೂಜಾ ವಿಗ್ರಹಗಳನ್ನು ಇಂದಿರಾನಗರ ಭಾಗಕ್ಕೆ ಕೊಂಡೊಯ್ಯುತ್ತಿದ್ದರು. ಫೆಬ್ರವರಿ ೧೯ ರಿಂದ ಮಂಡಗಪಡಿ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮವು ಮಾರ್ಚ್ ಮೊದಲ ವಾರದಲ್ಲಿ ನಡೆಯಲಿರುವ ಮುಖ್ಯ ಹಬ್ಬದ ಮುನ್ನದ ಸಿದ್ಧತೆಗೆ ಸಂಬಂಧಿಸಿದ್ದಾಗಿದೆ. ಜಾತ್ರೆಯ ಸಿದ್ಧತೆಗಳು ನಡೆಯುತ್ತಿರುವಾಗ ಮುಸಲ್ಮಾನರು, ‘ಮಸೀದಿಯ ಹತ್ತಿರ ಮೆರವಣಿಗೆ ನಡೆಸಿದರೆ ನಮಾಜ್ ಪಠಣಕ್ಕೆ ತೊಂದರೆಯಾಗುತ್ತದೆ’ ಎಂದು ಹೇಳಿ ವಿರೋಧಿಸಿದರು. ಮೆರವಣಿಗೆಯ ಸಮಯವನ್ನು ಮುಂದೂಡಬೇಕು ಅಥವಾ ಪರ್ಯಾಯ ಮಾರ್ಗವನ್ನು ಆರಿಸಿಕೊಳ್ಳಬೇಕೆಂದು ಒತ್ತಾಯಿಸಿದರು. ಇದರಿಂದಾಗಿ ಹಿಂದೂ ಭಕ್ತರು ಮತ್ತು ಮುಸಲ್ಮಾನರ ನಡುವೆ ಉದ್ವಿಗ್ನತೆ ನಿರ್ಮಾಣವಾಯಿತು. ಸ್ಥಳೀಯ ಭಾಜಪ ಮತ್ತು ಹಿಂದೂ ಮುನ್ನಾನಿ ಸಂಘಟನೆಯ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದರು.

೨. ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿ ಸೈಯದ್ ಮಹಮ್ಮದ್ ಮತ್ತು ಪೊಲೀಸ್ ಉಪಾಧೀಕ್ಷಕ ಪೊನಾರಾಸು ಅವರು ಮುಸಲ್ಮಾನರೊಂದಿಗೆ ಚರ್ಚಿಸಿ ಪರಸ್ಪರ ಒಪ್ಪಂದ ಮಾಡಿಕೊಂಡರು. ಮಸೀದಿಯಲ್ಲಿ ನಮಾಜ್ ಪಠಣ ಮುಗಿದ ನಂತರ ಮೆರವಣಿಗೆ ಆ ಮಾರ್ಗವಾಗಿ ಸಾಗಬಹುದೆಂದು ಚರ್ಚೆಯ ನಂತರ ನಿರ್ಧರಿಸಲಾಯಿತು. ಪರಿಣಾಮವಾಗಿ ರಾತ್ರಿ ೧೦ ಗಂಟೆ ೩೦ ನಿಮಿಷದ ನಂತರ ಮೆರವಣಿಗೆಗೆ ಆ ಮಾರ್ಗದ ಮೂಲಕ ಹೋಗಲು ಅನುಮತಿ ನೀಡಲಾಯಿತು. ಆದಾಗ್ಯೂ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಮಸೀದಿಯ ಬಳಿ ಘೋಷಣೆಗಳನ್ನು ಕೂಗುವುದು, ವಾದ್ಯಗಳನ್ನು ಬಾರಿಸುವುದು ಮತ್ತು ಪಟಾಕಿಗಳನ್ನು ಸಿಡಿಸುವುದನ್ನು ನಿಷೇಧಿಸಲಾಯಿತು. ಇದರ ನಂತರ ಅಲ್ಲಿಂದ ಹೊರಟ ಮೆರವಣಿಗೆಯು ಶಾಂತಿಯುತವಾಗಿ ಮುಂದೆ ಸಾಗಿತು.

ಸಂಪಾದಕೀಯ ನಿಲುವು

  • ತಮಿಳುನಾಡು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿದೆಯೇ? ಒಂದೆಡೆ ಹಿಂದೂಗಳಿಗೆ ‘ಸರ್ವಧರ್ಮ ಸಮಭಾವ’ದ ಪಾಠ ಮಾಡುವುದು ಮತ್ತು ಇನ್ನೊಂದೆಡೆ ಮುಸಲ್ಮಾನರ ಧಾರ್ಮಿಕ ಭಾವನೆಗಳನ್ನು ಓಲೈಸುತ್ತಾ ಕೂರುವುದು ಭಾರತದಲ್ಲಿ ಕಳೆದ ೮ ದಶಕಗಳಿಂದ ನಡೆಯುತ್ತಿದೆ. ಈ ಸ್ಥಿತಿಯು ‘ಹಿಂದೂ ರಾಷ್ಟ್ರ’ ಅನಿವಾರ್ಯ ಎಂಬುದನ್ನು ಸಾರುತ್ತದೆ!
  • ಹಿಂದೂ ದ್ವೇಷಿ ಡಿಎಂಕೆ ಅಧಿಕಾರದಲ್ಲಿರುವ ರಾಜ್ಯದಲ್ಲಿ ಇದಕ್ಕಿಂತ ಬೇರೆ ಏನು ನಿರೀಕ್ಷಿಸಲು ಸಾಧ್ಯ? ಹಿಂದೂಗಳ ಧಾರ್ಮಿಕ ಮೆರವಣಿಗೆಗಳಿಂದ ಯಾರಿಗೆ ತೊಂದರೆಯಾಗುತ್ತದೆಯೋ, ಅಂತಹವರಿಗೆ ಈಗ ಪಾಕಿಸ್ತಾನಕ್ಕೆ ಕಳುಹಿಸುವ ಸಮಯ ಬಂದಿದೆ!