• ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ ನಂತರ ಅಫಘಾನಿಸ್ತಾನ ಘೋಷಣೆ• ಅಫಘಾನ್ ಸೈನ್ಯದ ದಾಳಿಯಲ್ಲಿ ೫೫ ಪಾಕ್ ಸೈನಿಕರ ಸಾವು• ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಿದ ಅಫಘಾನ್ |

ಕಾಬೂಲ್ (ಅಫಘಾನಿಸ್ತಾನ) / ಇಸ್ಲಾಮಾಬಾದ್ (ಪಾಕಿಸ್ತಾನ) – ಅಫಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವೆ ಯುದ್ಧ ಆರಂಭವಾಗಿರುವುದಾಗಿ ಪಾಕಿಸ್ತಾನವು ಅಧಿಕೃತವಾಗಿ ಘೋಷಿಸಿದೆ. ಪಾಕಿಸ್ತಾನವು ಕಾಬೂಲ್ ಮತ್ತು ಕಂದಹಾರ್ ನಗರಗಳ ಮೇಲೆ ವೈಮಾನಿಕ ದಾಳಿ ನಡೆಸುವ ಮೂಲಕ ಯುದ್ಧವನ್ನು ಸಾರಿದೆ.
ಪಾಕಿಸ್ತಾನವು ಈ ವಾರದ ಆರಂಭದಲ್ಲಿ ಅಫಘಾನ್ ಮೇಲೆ ವೈಮಾನಿಕ ದಾಳಿ ನಡೆಸಿ ೮೦ಕ್ಕೂ ಹೆಚ್ಚು ಜನರ ಹತ್ಯೆ ಮಾಡಿತ್ತು. ಈ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಅಡಗುತಾಣಗಳ ಮೇಲೆ ದಾಳಿ ಮಾಡಿರುವುದಾಗಿ ಪಾಕ್ ಹೇಳಿತ್ತು; ಆದರೆ ‘ಸತ್ತವರು ನಿರಪರಾಧಿ ನಾಗರಿಕರು’ ಎಂದು ತಾಲಿಬಾನ್ ಸರಕಾರ ಹೇಳಿದೆ. ‘ಇದಕ್ಕೆ ಸೇಡು ತೀರಿಸಿಕೊಳ್ಳಲಾಗುವುದು’ ಎಂದು ಹೇಳುತ್ತಾ ತಾಲಿಬಾನ್, ಪಾಕ್ ಸೈನ್ಯದ ಮೇಲೆ ದಾಳಿ ಆರಂಭಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಫೆಬ್ರವರಿ ೨೬ರ ರಾತ್ರಿ ಮತ್ತೆ ಅಫಘಾನಿಸ್ತಾನದ ಮೇಲೆ ದಾಳಿ ಮಾಡಲು ಪ್ರಯತ್ನಿಸಿತು. ಆಗ ಅಫಘಾನ್ ಸೈನ್ಯವು ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಿತು ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿತು. ಈ ದಾಳಿಯಲ್ಲಿ ೫೫ಕ್ಕೂ ಹೆಚ್ಚು ಪಾಕ್ ಸೈನಿಕರು ಸಾವನ್ನಪ್ಪಿದ ನಂತರ ರೊಚ್ಚಿಗೆದ್ದ ಪಾಕಿಸ್ತಾನವು ಯುದ್ಧ ಘೋಷಿಸಿ ಅಫಘಾನಿಸ್ತಾನದ ಮೇಲೆ ಪುನಃ ದಾಳಿ ಆರಂಭಿಸಿದೆ. ಈ ಮೊದಲು ಉಭಯ ದೇಶಗಳ ನಡುವಿನ ಸಂಘರ್ಷ ತಾರಕಕ್ಕೇರಿದಾಗ ಕತಾರ್ ದೇಶವು ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿತ್ತು; ಆದರೆ ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.
ಅಫಘಾನಿಸ್ತಾನ ಹೇಳಿದ್ದೇನು ?
ತಾಲಿಬಾನ್ ಸರಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಮಾತನಾಡಿ, ಪಾಕಿಸ್ತಾನವು ದಕ್ಷಿಣದ ಕಂದಹಾರ್ ಮತ್ತು ಆಗ್ನೇಯ ಪ್ರಾಂತ್ಯದ ಪಕ್ತಿಯಾದಲ್ಲಿ ವೈಮಾನಿಕ ದಾಳಿ ನಡೆಸಿತು. ಕಾಬೂಲ್ ನಲ್ಲಿ ಕನಿಷ್ಠ ೩ ಸ್ಫೋಟದ ಶಬ್ದಗಳು ಕೇಳಿಬಂದಿವೆ; ಆದರೆ ಅಫಘಾನಿಸ್ತಾನದ ರಾಜಧಾನಿಯಲ್ಲಿ ನಡೆದ ದಾಳಿಯ ನಿಖರ ಸ್ಥಳ ಅಥವಾ ಸಂಭವನೀಯ ಸಾವುನೋವುಗಳ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ನಮ್ಮ ಸೈನ್ಯವು ನಡೆಸಿದ ದಾಳಿಯಲ್ಲಿ ೫೫ ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಅನೇಕರನ್ನು ಜೀವಂತವಾಗಿ ಸೆರೆ ಹಿಡಿಯಲಾಗಿದೆ. ಪಾಕಿಸ್ತಾನಿ ಸೈನ್ಯದಿಂದ ಪದೇ-ಪದೇ ನಡೆಯುತ್ತಿರುವ ಉಲ್ಲಂಘನೆಗಳಿಗೆ ಪ್ರತಿಯಾಗಿ ಪಾಕಿಸ್ತಾನಿ ಸೇನಾ ನೆಲೆಗಳು ಮತ್ತು ಸೇನಾ ಚೌಕಿಗಳ ಮೇಲೆ ದೊಡ್ಡ ಆಕ್ರಮಣಕಾರಿ ಕಾರ್ಯಾಚರಣೆ ನಡೆಸಲಾಗಿದೆ. ಡ್ಯುರಾಂಡ್ ರೇಖೆಯ ಮೇಲಿರುವ ಪಾಕಿಸ್ತಾನದ ೧೯ ಸೇನಾ ನೆಲೆಗಳು ಮತ್ತು ಚೌಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ೪ ಹೆಚ್ಚುವರಿ ಚೌಕಿಗಳಲ್ಲಿದ್ದ ಪಾಕಿಸ್ತಾನಿ ಸೈನಿಕರು ಓಡಿಹೋಗಿದ್ದಾರೆ. ಅಫಘಾನ್ ಸೈನ್ಯವು ಅನೇಕ ಹಗುರ ಮತ್ತು ಭಾರೀ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಮಿಲಿಟರಿ ಸಾಮಗ್ರಿಗಳು ಮತ್ತು ದೊಡ್ಡ ಮಿಲಿಟರಿ ಸಾರಿಗೆ ವಾಹನವನ್ನು ವಶಪಡಿಸಿಕೊಂಡಿದೆ, ಜೊತೆಗೆ ಒಂದು ಪಾಕಿಸ್ತಾನಿ ಟ್ಯಾಂಕ್ ಅನ್ನು ನಾಶಪಡಿಸಿದೆ. ಕೆಲವು ಪಾಕಿಸ್ತಾನಿ ಸೈನಿಕರ ಮೃತದೇಹಗಳನ್ನು ಅಫಘಾನಿಸ್ತಾನಕ್ಕೆ ತರಲಾಗಿದೆ ಎಂದು ತಿಳಿಸಿದರು.
ನಮ್ಮಲ್ಲಿ ಶತ್ರುವನ್ನು ಹತ್ತಿಕ್ಕುವ ಸಾಮರ್ಥ್ಯವಿದೆ! – ಪಾಕ್ ಪ್ರಧಾನಿ ಶರೀಫ್
ನಮ್ಮ ಸೈನ್ಯವು ಯಾವುದೇ ಆಕ್ರಮಣಕಾರಿ ಮಹತ್ವಾಕಾಂಕ್ಷೆಗಳನ್ನು ಹತ್ತಿಕ್ಕುವ ಪೂರ್ಣ ಸಾಮರ್ಥ್ಯವನ್ನು ಹೊಂದಿದೆ. ಇಡೀ ದೇಶವು ಪಾಕಿಸ್ತಾನದ ಸಶಸ್ತ್ರ ಪಡೆಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಎಂದು ಪಾಕ್ ಪ್ರಧಾನಿ ಶಹಬಾಜ್ ಶರೀಫ್ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಮ್ಮ ತಾಳ್ಮೆಯ ಮಿತಿ ಮೀರಿದೆ, ಈಗ ನಿರ್ಣಾಯಕ ಕ್ರಮ ಜರುಗಲಿದೆ! – ಪಾಕ್ ರಕ್ಷಣಾ ಸಚಿವ ಖ್ವಾಜಾ ಆಸಿಫ್
ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಆರೋಪ ಮಾಡುತ್ತಾ, ‘ನಾಟೋ’ ಪಡೆಗಳು ಹಿಂತೆಗೆದ ನಂತರ ಅಫಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಯಾಗಲಿದೆ ಮತ್ತು ತಾಲಿಬಾನ್ ಅಫಘಾನ್ ಸರಕಾರವು ಜನರ ಹಿತಾಸಕ್ತಿ ಹಾಗೂ ಪ್ರಾದೇಶಿಕ ಸ್ಥಿರತೆಯ ಮೇಲೆ ಗಮನ ಹರಿಸಲಿದೆ ಎಂದು ನಿರೀಕ್ಷಿಸಲಾಗಿತ್ತು; ಆದರೆ ತಾಲಿಬಾನ್ ಅಫಘಾನಿಸ್ತಾನವನ್ನು ಭಾರತದ ವಸಾಹತುವನ್ನಾಗಿ ಮಾಡಿದೆ. (ಒಮ್ಮೆ ಅಮೇರಿಕಾ, ಇನ್ನೊಮ್ಮೆ ಚೀನಾದ ವಸಾಹತುವನ್ನಾಗಿ ಮಾಡಿಕೊಂಡಿರುವ ಪಾಕಿಸ್ತಾನಕ್ಕೆ ಇಂತಹ ಆರೋಪ ಮಾಡುವ ನೈತಿಕ ಹಕ್ಕಿದೆಯೇ? – ಸಂಪಾದಕರು) ತಾಲಿಬಾನ್ ಪಾಕಿಸ್ತಾನವನ್ನು ಗುರಿಯಾಗಿಸುವ ಪ್ರಯತ್ನ ಮಾಡಿದೆ, ಇದಕ್ಕೆ ನಮ್ಮ ಸಶಸ್ತ್ರ ಪಡೆಗಳು ನಿರ್ಣಾಯಕ ಪ್ರತಿಕ್ರಿಯೆ ನೀಡುತ್ತಿವೆ. ನಮ್ಮ ತಾಳ್ಮೆಯ ಮಿತಿ ಮೀರಿದ್ದು, ಇದು ಬಹಿರಂಗ ಸಂಘರ್ಷವಾಗಿದೆ. ಈಗ ನಿರ್ಣಾಯಕ ಕಾರ್ಯಾಚರಣೆ ನಡೆಯಲಿದೆ. ನಾವು ನಿಮ್ಮ ನೆರೆಯವರಾಗಿದ್ದು ನಮಗೆ ನಿಮ್ಮ ವಾಸ್ತವ ಚೆನ್ನಾಗಿ ತಿಳಿದಿದೆ ಎಂದು ಆಸಿಫ್ ಬೆದರಿಕೆ ಹಾಕಿದ್ದಾರೆ.
ಪಾಕಿಸ್ತಾನವು ಅಫಘಾನಿಸ್ತಾನದ ತಾಲಿಬಾನ್ ವಿರುದ್ಧ ‘ಆಪರೇಷನ್ ಗಜಬ್ ಲಿಲ್-ಹಕ್’ ಆರಂಭಿಸಿದೆ ಎಂದು ಪಾಕಿಸ್ತಾನಿ ಸಚಿವ ಅತ್ತಾವುಲ್ಲಾ ತರಾರ್ ‘ಎಕ್ಸ್’ ಪೋಸ್ಟ್ ನಲ್ಲಿ ತಿಳಿಸಿದರು. ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ ತಾಲಿಬಾನ್ ಈ ದಾಳಿಯನ್ನು ಖಂಡಿಸಿದ್ದಾರೆ. ಪಾಕಿಸ್ತಾನಿ ಮಾಧ್ಯಮಗಳು ಅಫಘಾನಿಸ್ತಾನದ ದಾಳಿಯಲ್ಲಿ ಕೇವಲ ಇಬ್ಬರು ಸೈನಿಕರು ಮಾತ್ರ ಮೃತಪಟ್ಟಿದ್ದಾರೆ ಎಂದು ಹೇಳಿಕೊಂಡಿವೆ.
ಸಂಪಾದಕೀಯ ನಿಲುವುಜಗತ್ತಿನ ೮ ಯುದ್ಧಗಳನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿರುವ ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಈ ಯುದ್ಧವನ್ನು ನಿಲ್ಲಿಸುವರೇ? ಅಥವಾ ಅವರ ಇಚ್ಛೆಯಂತೆಯೇ ಪಾಕಿಸ್ತಾನ ಈ ಯುದ್ಧವನ್ನು ಆರಂಭಿಸಿದೆ ಎಂದು ಭಾವಿಸಬೇಕೇ ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation