|

ತಿರುವನಂತಪುರಂ (ಕೇರಳ) – ಶಬರಿಮಲೆ ದೇಗುಲದ ಚಿನ್ನದ ಕಳ್ಳತನ ಪ್ರಕರಣದಲ್ಲಿ ಅರ್ಚಕ (ತಂತ್ರಿ) ಕಂದಾರಾರು ರಾಜೀವರು ಅವರಿಗೆ 41 ದಿನಗಳ ಜೈಲುವಾಸದ ನಂತರ ಜಾಮೀನು ಮಂಜೂರಾಗಿದೆ. ಈ ಪ್ರಕರಣದಲ್ಲಿ ತಂತ್ರಿಗಳಿಗೂ ಯಾವುದೇ ಸಂಬಂಧವಿರುವ ಬಗ್ಗೆ ಕಿಂಚಿತ್ತೂ ಪುರಾವೆಗಳಿಲ್ಲ ಎಂದು ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯವು ನಮೂದಿಸಿದೆ. ವಿಶೇಷ ತನಿಖಾ ತಂಡವು (SIT) सादर ಪಡಿಸಿದ ಪುರಾವೆಗಳನ್ನು ನ್ಯಾಯಾಲಯವು ತಿರಸ್ಕರಿಸಿದ್ದು, ತಂಡವು ಈಗ ಹೈಕೋರ್ಟ್‌ಗೆ ಹೋಗಲು ಸಿದ್ಧತೆ ನಡೆಸುತ್ತಿದೆ.
🚩 Sabarimala Gold Row Update
Hereditary Tantri Kandararu Rajeevaru granted bail in the alleged gold theft case.
The Court clarifies – no evidence found against him.
Serious questions now arise: Was this an attempt by Kerala’s Communist govt to frame the priest?
Hindus feel… https://t.co/k2l8MbasUo pic.twitter.com/EsJopOSame
— Sanatan Prabhat (@SanatanPrabhat) February 26, 2026
ತಂತ್ರಿಗಳನ್ನು ಗುರಿ ಮಾಡುವ ಪ್ರಯತ್ನ
ತಂತ್ರಿಗಳ ಬಂಧನಕ್ಕೆ ಆರಂಭದಿಂದಲೂ ವಿರೋಧ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳು ರಾಜ್ಯ ಸರಕಾರದ ಮೇಲೆ ರಾಜಕೀಯ ದುರುದ್ದೇಶದ ಆರೋಪ ಮಾಡಿದ್ದವು. ಮಾಜಿ ಮತ್ತು ಹಾಲಿ ದೇವಸ್ವಂ ಸಚಿವರು ಹಾಗೂ ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷರನ್ನು ರಕ್ಷಿಸಲು ತಂತ್ರಿಗಳನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಹೇಳಲಾಗಿತ್ತು.
ಸೇಡಿನ ಕ್ರಮ ಎಂದು ದಾವೆ
ದೇವಾಲಯದ ಸಂಪ್ರದಾಯ ಮತ್ತು ವಿಧಿವಿಧಾನಗಳನ್ನು ರಕ್ಷಿಸಲು ತಾವು ಋತುಸ್ರಾವದ ವಯಸ್ಸಿನ ಮಹಿಳೆಯರ ಪ್ರವೇಶದ ಬಗ್ಗೆ ಕಠಿಣ ನಿಲುವು ತಳೆದಿದ್ದಾಗಿ ತಂತ್ರಿಗಳು ತಿಳಿಸಿದ್ದಾರೆ. ರಾಜಕೀಯ ಹಸ್ತಕ್ಷೇಪವನ್ನು ನಿರಾಕರಿಸಿದ್ದಲ್ಲದೆ, ಸಂಪ್ರದಾಯದಲ್ಲಿ ಹಸ್ತಕ್ಷೇಪವಾದರೆ ಪೂಜೆ ಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ದೇವಸ್ಥಾನವನ್ನು ಪ್ರತಿದಿನ ತೆರೆಯುವುದಕ್ಕೂ ಅವರು ವಿರೋಧಿಸಿದ್ದರು. ಇದರಿಂದ ಪ್ರಭಾವಿ ವ್ಯಕ್ತಿಗಳು ಅಸಮಾಧಾನಗೊಂಡು, ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಆರ್ಥಿಕ ಅವ್ಯವಹಾರದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೋಟಿ ಜೊತೆ ತಂತ್ರಿಗಳ ಹೆಸರನ್ನು ಜೋಡಿಸಲು ಪ್ರಯತ್ನಿಸಲಾಗಿತ್ತು, ಎಂದು ಹೇಳಿದರು.
ಆರೋಪಗಳನ್ನು ತಳ್ಳಿಹಾಕಿದ ನ್ಯಾಯಾಲಯ
18 ಜೂನ್ 2019 ರಂದು ದೇವಸ್ಥಾನದ ಪ್ರವೇಶದ್ವಾರದ ಮೂರ್ತಿ ಮತ್ತು ಆವರಣದ ಚಿನ್ನದ ಲೇಪನದ ದುಸ್ತಿಗೆ ತಂತ್ರಿಗಳ ಶಿಫಾರಸು ಇತ್ತು ಎಂದು ವಿಶೇಷ ತನಿಖಾ ತಂಡವು ವಾದಿಸಿತ್ತು; ಆದರೆ ದಾಖಲೆಗಳಲ್ಲಿ ಅಂತಹ ಯಾವುದೇ ಉಲ್ಲೇಖವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 20 ಜುಲೈ 2019 ಮತ್ತು 18 ಮೇ 2019 ರ ಪ್ರಸ್ತಾವನೆಗಳ ಮೇಲೆ ತಂತ್ರಿಗಳ ಸಹಿ ಇಲ್ಲದಿರುವುದನ್ನೂ ನ್ಯಾಯಾಲಯ ನಮೂದಿಸಿದೆ. 10 ಜುಲೈ 2019 ರ ಪ್ರಸ್ತಾವನೆಯ ಮೇಲಿನ ಸಹಿಯು ಮಂಡಳಿಯು ಕೇಳಿದ ಅಭಿಪ್ರಾಯಕ್ಕೆ ಮಾತ್ರ ಸೀಮಿತವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ನಿಯಮಗಳ ಪ್ರಕಾರ ತಂತ್ರಿಗಳ ಜವಾಬ್ದಾರಿ ಕೇವಲ ಪೂಜೆ ಮತ್ತು ಧಾರ್ಮಿಕ ವಿಧಿಗಳಿಗೆ ಸೀಮಿತವಾಗಿದ್ದು, ನಿರ್ವಹಣೆಯ ಜವಾಬ್ದಾರಿ ತಿರುವಾಂಕೂರು ದೇವಸ್ವಂ ಮಂಡಳಿಯ ಅಧಿಕಾರಿಗಳದ್ದಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ರಾಜಕೀಯ ಆರೋಪ-ಪ್ರತ್ಯಾರೋಪ
ತಂತ್ರಿಗಳ ವಿರುದ್ಧ ಪುರಾವೆಗಳಿಲ್ಲದಿದ್ದರೂ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕರು ಅವರ ಮೇಲೆ ಟೀಕೆ ಮಾಡಿದ್ದರು. ರಾಜ್ಯ ಕಾರ್ಯದರ್ಶಿ ಎಂ. ವಿ. ಗೋವಿಂದನ್ ಅವರು ಅವರನ್ನು ‘ಪ್ರಮುಖ ಕಳ್ಳ’ ಎಂದು ಕರೆದಿದ್ದರು. ಇನ್ನೊಂದೆಡೆ ‘ಜಾರಿ ನಿರ್ದೇಶನಾಲಯ (ED) ಈ ಬಗ್ಗೆ ಏಕೆ ತನಿಖೆ ನಡೆಸಲಿಲ್ಲ?’ ಎಂಬ ಪ್ರಶ್ನೆಯೂ ಕೇಳಿಬಂದಿದೆ. ಈ ಪ್ರಕರಣದಲ್ಲಿ ಮಾಜಿ ಶಾಸಕ ಎ. ಪದ್ಮಕುಮಾರ್ ಸೇರಿದಂತೆ ಮೂವರು ಮತ್ತು ಮುಖ್ಯ ಆರೋಪಿ ಉನ್ನಿಕೃಷ್ಣನ್ ಪೋಟಿ ಅವರನ್ನು ಬಂಧಿಸಲಾಗಿದೆ.
ಮಾರ್ಚ್ 2019 ರಲ್ಲಿ ಚಿನ್ನದ ಆಭರಣಗಳನ್ನು ಕರಗಿಸುವ ಕೆಲಸವು ಸಂಬಂಧಿತ ತಿರುವಾಂಕೂರು ದೇವಸ್ವಂ ಅಧ್ಯಕ್ಷರ ತಿಳುವಳಿಕೆ ಮತ್ತು ಸಮ್ಮತಿಯೊಂದಿಗೆ ನಡೆದಿದೆ ಎಂದು ಹೇಳಲಾಗುತ್ತಿದೆ. ನಂತರ ಆ ಚಿನ್ನವು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಇದರಿಂದಾಗಿ ಈ ಪ್ರಕರಣದಲ್ಲಿ ರಾಜಕೀಯ ಸಂಘರ್ಷ ತೀವ್ರಗೊಂಡಿದ್ದು, ತಂತ್ರಿಗಳ ಬಂಧನವು ಮೂಲ ಘಟನೆಯಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಲಾಗಿದೆ.
ಸಂಪಾದಕೀಯ ನಿಲುವುಅರ್ಚಕರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದವರ ವಿರುದ್ಧ ನ್ಯಾಯಾಲಯ ಕ್ರಮಕ್ಕೆ ಆದೇಶಿಸಲಿ ಎಂದು ಸಾರ್ವಜನಿಕರು ಆಶಿಸುತ್ತಿದ್ದಾರೆ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”