
ಲಂಡನ್ (ಬ್ರಿಟನ್) – ನಗರದ ಹ್ಯಾಮರ್‌ಸ್ಮಿತ್‌ನಲ್ಲಿ ಕಳೆದ 16 ವರ್ಷಗಳಿಂದ ತನ್ನದೇ ಆದ ಗುರುತು ಮೂಡಿಸಿದ್ದ ಪ್ರಸಿದ್ಧ ಭಾರತೀಯ ಉಪಾಹಾರ ಮಂದಿರ ‘ರಂಗ್ರೇಜ್’, ಪಾಕಿಸ್ತಾನಿ ನಾಗರಿಕರ ಬೆದರಿಕೆಗಳು ಮತ್ತು ಪೊಲೀಸರಿಂದ ಸಾಕಷ್ಟು ರಕ್ಷಣೆ ಸಿಗದ ಕಾರಣ ಮುಂದಿನ ತಿಂಗಳು ಶಾಶ್ವತವಾಗಿ ಮುಚ್ಚಲ್ಪಡಲಿದೆ. ಉಪಾಹಾರ ಮಂದಿರದ ಮಾಲೀಕ ಹರ್ಮನ್ ಸಿಂಗ್ ಕಪೂರ್ ಈ ಘೋಷಣೆ ಮಾಡಿದ್ದಾರೆ.
1. ಕಪೂರ್ ಅವರು ‘ಎಕ್ಸ್’ (ಟ್ವಿಟರ್) ನಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಾ, ಇಲ್ಲಿನ ಪಾಕಿಸ್ತಾನಿ ನಾಗರಿಕರು ಉಪಾಹಾರ ಮಂದಿರದಲ್ಲಿ ಪದೇ ಪದೇ ಮಾಡುತ್ತಿರುವ ಗಲಾಟೆ ಮತ್ತು ಆನ್‌ಲೈನ್ ಬೆದರಿಕೆಗಳು, ಹಾಗೆಯೇ ಹೆಚ್ಚುತ್ತಿರುವ ವೆಚ್ಚ ಮತ್ತು ಪೊಲೀಸರಿಂದ ಸಾಕಷ್ಟು ಸಹಾಯ ಸಿಗದ ಕಾರಣ ಉಪಾಹಾರ ಮಂದಿರವನ್ನು ಮುಚ್ಚುವ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
2. ಕಪೂರ್ ಅವರ ರೆಸ್ಟೋರೆಂಟ್ ಮೇಲೆ ಪಾಕಿಸ್ತಾನಿ ಕಟ್ಟರವಾದಿಗಳು ದಾಳಿ ನಡೆಸಿದ್ದರು ಮತ್ತು ಅವರ ಮೇಲೆ ‘ಖಲಿಸ್ತಾನ್ ಜಿಂದಾಬಾದ್’ ಘೋಷಣೆಗಳನ್ನು ಕೂಗುವಂತೆ ಒತ್ತಡ ಹೇರಲಾಗಿತ್ತು.
3. ಲಂಡನ್ ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿ ಮತ್ತು ಪುರಾವೆಗಳನ್ನು ನೀಡಿದ್ದರೂ ತಮಗೆ ಸಾಕಷ್ಟು ಭದ್ರತೆ ಒದಗಿಸಲಾಗಿಲ್ಲ ಎಂದು ಕಪೂರ್ ಆರೋಪಿಸಿದ್ದಾರೆ.
4. ರೆಸ್ಟೋರೆಂಟ್ ಮುಚ್ಚುವ ಸುದ್ದಿ ಹೊರಬರುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ವಿಷಾದ ವ್ಯಕ್ತಪಡಿಸಿದ್ದಾರೆ. ಒಬ್ಬರು, ‘ರಂಗ್ರೇಜ್’ ಆಹಾರ ಅದ್ಭುತವಾಗಿತ್ತು. 16 ವರ್ಷಗಳ ಹಳೆಯ ವ್ಯವಹಾರವು ಮುಚ್ಚುತ್ತಿರುವುದು ಲಂಡನ್‌ನ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಮೂಡಿಸುವ ಘಟನೆಯಾಗಿದೆ, ಎಂದಿದ್ದಾರೆ.
ಖಲಿಸ್ತಾನವಾದದ ವಿರುದ್ಧ ಕಪೂರ್ ಅವರ ದೃಢಸಂಕಲ್ಪ!ಇಂತಹ ಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶಕ್ತಿ! ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಇದ್ದೂ ಎಷ್ಟು ಜನರು ಈ ರೀತಿಯಾಗಿ ಧರ್ಮ ರಕ್ಷಣೆಗಾಗಿ ನಿರ್ಧಾರ ಮಾಡುತ್ತಾರೆ? ಕಪೂರ್ ಅವರು ‘ಎಕ್ಸ್’ ನಲ್ಲಿ, ಈಗ ಅವರು ತಮ್ಮ ಪೂರ್ಣ ಸಮಯವನ್ನು ಕಟ್ಟರವಾದದ ವಿರುದ್ಧದ ಹೋರಾಟಕ್ಕೆ ಮೀಸಲಿಡಲಿದ್ದಾರೆ. ಅವರು, ‘ನೀವು ನನ್ನ ವ್ಯವಹಾರವನ್ನು ನಿಲ್ಲಿಸಬಹುದು, ಆದರೆ ನನ್ನ ನಿರ್ಧಾರವನ್ನು ನಾಶಮಾಡಲು ಸಾಧ್ಯವಿಲ್ಲ. ಈಗ ನಾನು ಯಾವುದೇ ಅಡೆತಡೆಗಳಿಲ್ಲದೆ ನಿಮ್ಮ ವಿರುದ್ಧ ಇನ್ನಷ್ಟು ದೃಢವಾಗಿ ಹೋರಾಡುತ್ತೇನೆ’ ಎಂದು ಹೇಳಿದ್ದಾರೆ. |
2023 ರಿಂದ ಖಲಿಸ್ತಾನಿಗಳ ಎದುರು ಎದೆಗುಂದದೆ ನಿಂತ ಕಪೂರ್!
ಕಪೂರ್ ಅವರು ಈ ಹಿಂದೆ ಖಲಿಸ್ತಾನ್ ಚಳವಳಿಯನ್ನು ಟೀಕಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಅದಾದ ನಂತರ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬೆದರಿಕೆಗಳು ಬಂದಿರುವುದಾಗಿ ಅವರು ಬಹಿರಂಗವಾಗಿ ಹೇಳಿದ್ದರು. 2023 ರಲ್ಲಿ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ದಾಳಿ ನಡೆದ ಕೆಲವು ದಿನಗಳ ನಂತರ, ಖಲಿಸ್ತಾನ್ ಬೆಂಬಲಿಗರು ಕಪೂರ್ ಅವರ ಉಪಾಹಾರ ಮಂದಿರದ ಮೇಲೆ ದಾಳಿ ಮಾಡಿದ್ದರು. ಅಲ್ಲದೆ, ಖಲಿಸ್ತಾನ್ ಚಳವಳಿಯನ್ನು ಟೀಕಿಸುವ ವಿಡಿಯೋವನ್ನು ತೆಗೆದುಹಾಕುವಂತೆ ಖಲಿಸ್ತಾನಿಗಳು ಅವರ ಪತ್ನಿ ಮತ್ತು ಮಕ್ಕಳಿಗೆ ಪ್ರಾಣ ಬೆದರಿಕೆ, ಅವಮಾನಕಾರಿ ಫೋನ್ ಕರೆಗಳು ಮತ್ತು ಆನ್‌ಲೈನ್ ಬೆದರಿಕೆಗಳನ್ನು ಹಾಕಿದ್ದರು.
ಸಂಪಾದಕೀಯ ನಿಲುವು
|
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation