ಯಾರು ಗುರುಗಳಿಗೆ ನಂಬುವುದಿಲ್ಲವೋ, ಅವರು ಮೂರ್ಖರು! – ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸ್ವಾಮಿನಾಥನ್

ಹೊಸೂರು (ತಮಿಳುನಾಡು) – ತಮಿಳುನಾಡಿನಲ್ಲಿ ಕೆಲವರು ತಮ್ಮನ್ನು ತಾವು ತರ್ಕವಾದಿಗಳು ಎಂದು ಕರೆದುಕೊಳ್ಳುತ್ತಾರೆ. ನಾವು ಗುರುಗಳನ್ನು ದೈವಸ್ವರೂಪಿ ಎಂದು ನಂಬುವುದರಿಂದ ಈ ಜನರು ನಮ್ಮನ್ನು ಬದಮಾಶ್‌ಗಳು, ಮೂರ್ಖರು ಮತ್ತು ಕಾಡುಜನರು ಎಂದು ಕರೆಯುತ್ತಾರೆ. ಯಾರು ಹಾಗೆ ಹೇಳುತ್ತಾರೋ ಅವರೇ ನಿಜವಾದ ಬದಮಾಶ್‌ಗಳು, ಮೂರ್ಖರು ಮತ್ತು ಕಾಡುಜನರು. ಈ ಸೂತ್ರವು ತರ್ಕಬದ್ಧ ಪರಿಶೀಲನೆಯದ್ದಲ್ಲ, ಬದಲಿಗೆ ಗುರುಗಳ ಮೇಲೆ ಶ್ರದ್ಧೆ ಇಟ್ಟವರನ್ನು ಅಪಹಾಸ್ಯ ಮಾಡುವಂತದ್ದಾಗಿದೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಇಲ್ಲಿ ನಡೆದ ‘ಗುರು ವಂದನಾ ಉತ್ಸವ’ದಲ್ಲಿ ಮಾತನಾಡುತ್ತಾ ಬುದ್ಧಿಜೀವಿಗಳನ್ನು ತರಾಟೆಗೆ ತೆಗೆದುಕೊಂಡರು.

ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಗುರುಪೂಜೆಯ ತಾತ್ವಿಕ ಆಧಾರವನ್ನು ವಿವರಿಸುತ್ತಾ, ದೇವರು ಪ್ರತ್ಯಕ್ಷವಾಗಿ ಕಾಣದಿದ್ದರೂ, ಗುರುಗಳು ಜೀವಂತ ಆಧ್ಯಾತ್ಮಿಕ ರೂಪವಾಗಿದ್ದಾರೆ. ಮಠಗಳಲ್ಲಿ ಅನೇಕ ಗುರುಗಳಿರಬಹುದು; ಆದರೆ ಅವರ ತಾತ್ವಿಕ ನಿಲುವು ಒಂದೇ ಆಗಿರುತ್ತದೆ ಎಂದು ಹೇಳಿದರು.
ಭಾರತೀಯ ಪರಂಪರೆಯಲ್ಲಿ ಗುರುಗಳನ್ನು ಕೇವಲ ಶಿಕ್ಷಕರನ್ನಾಗಿ ಮಾತ್ರವಲ್ಲದೆ, ಜ್ಞಾನ, ಶಿಸ್ತು ಮತ್ತು ನೈತಿಕ ಮೌಲ್ಯಗಳ ಸಂಸ್ಕಾರ ನೀಡುವ ಮಾಧ್ಯಮವಾಗಿ ನೋಡಲಾಗುತ್ತದೆ.

ವೈಯಕ್ತಿಕ ಅನುಭವದಿಂದ ಶ್ರದ್ಧೆಗೆ ಬಲ

ಒಂದು ವೈಯಕ್ತಿಕ ಪ್ರಸಂಗವನ್ನು ನೆನಪಿಸಿಕೊಂಡ ನ್ಯಾಯಮೂರ್ತಿ ಸ್ವಾಮಿನಾಥನ್ ಅವರು, ಚಂಡೀಗಢದಿಂದ ದೆಹಲಿಗೆ ಪ್ರಯಾಣಿಸುವಾಗ ದಟ್ಟ ಮಂಜಿನಲ್ಲಿ ಕಾರು ಕೆಟ್ಟುಹೋಯಿತು. ಏನೂ ಕಾಣದ ಅಂತಹ ಪರಿಸ್ಥಿತಿಯಲ್ಲಿ ನಾನು ಗುರುಗಳನ್ನು ಸ್ಮರಿಸಿ ಪೂಜೆ ಮಾಡಿದೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಲಿಲ್ಲ. ಕಠಿಣ ಸಂದರ್ಭಗಳಲ್ಲಿ ಶ್ರದ್ಧೆಯು ಮಾನಸಿಕ ಬಲ ನೀಡುತ್ತದೆ ಎಂದು ಅವರು ಉಲ್ಲೇಖಿಸಿದರು.

ಗುರುಗಳ ಆಧಾರದ ಮೇಲೆ ಮುಂದಿನ ಸೇವೆ ಸಲ್ಲಿಸುವೆ!

ನ್ಯಾಯಮೂರ್ತಿ ಸ್ವಾಮಿನಾಥನ್ ಅವರು, ನನ್ನ ಸೇವಾವಧಿಯಲ್ಲಿ ಇನ್ನೂ 4 ವರ್ಷಗಳಿಗಿಂತ ಹೆಚ್ಚು ಸಮಯ ಬಾಕಿ ಇದೆ. ಈ ಅವಧಿಯಲ್ಲಿ ಧೈರ್ಯ ಪಡೆಯಲು ನಾನು ಗುರುಗಳ ಆಧಾರವನ್ನು ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಯಾರು ಈ ನ್ಯಾಯಮೂರ್ತಿ ಸ್ವಾಮಿನಾಥನ್?

ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ಇತ್ತೀಚೆಗೆ ತಮಿಳುನಾಡಿನ ತಿರುಪ್ಪರಂಕುಂದ್ರಂನ ದರ್ಗಾವೊಂದರ ಬಳಿ ಇರುವ ದೀಪಸ್ತಂಭದ ಮೇಲೆ ಸಾಂಪ್ರದಾಯಿಕ ದೀಪವನ್ನು ಹಚ್ಚುವಂತೆ ಹಿಂದೂಗಳಿಗೆ ನಿರ್ದೇಶನ ನೀಡಿದ್ದರು. ರಾಜ್ಯ ಸರಕಾರವು ಈ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು ಮತ್ತು 100 ಕ್ಕೂ ಹೆಚ್ಚು ಸಂಸದರು ಇದು ತಾರತಮ್ಯ ಮತ್ತು ಜಾತ್ಯತೀತ ತತ್ವಗಳಿಂದ ದೂರ ಸರಿದ ನಿರ್ಧಾರ ಎಂದು ಆರೋಪಿಸಿ ಅವರ ವಿರುದ್ಧ ಮಹಾಭಿಯೋಗದ (Impeachment) ಪ್ರಸ್ತಾವನೆಯನ್ನು ಮಂಡಿಸಿದ್ದರು. ಆದರೆ ಪ್ರಖರ ಹಿಂದುತ್ವನಿಷ್ಠರ ಪ್ರಕಾರ ನ್ಯಾಯಮೂರ್ತಿಗಳು ನೀಡಿದ ನಿರ್ಧಾರವು ಸರಿಯಾದದ್ದು ಮತ್ತು ಪರಂಪರೆಗೆ ಅನುಗುಣವಾಗಿತ್ತು.