|

ಭೋಪಾಲ್ (ಮಧ್ಯಪ್ರದೇಶ) – ಹಿಂದೂ ಯುವತಿಯರಿಗೆ ಕೆಲಸದ ಆಮಿಷ ತೋರಿಸಿ ಅವರನ್ನು ಮತಾಂತರ ಮಾಡುವುದು ಮತ್ತು ವೇಶ್ಯಾವಾಟಿಕೆಯ ದಂಧೆಗೆ ತಳ್ಳುತ್ತಿದ್ದ ಆರೋಪದ ಮೇಲೆ ಒಂದು ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್‌ನ ಸೂತ್ರಧಾರಿ ಅಮ್ರೀನ್ ಅಲಿಯಾಸ್ ಮಾಹಿರಾ, ಆಕೆಯ ಸಹೋದರಿ ಆಫ್ರೀನ್ ಮತ್ತು ಅಮ್ರೀನ್‌ನ ಪ್ರಿಯಕರ ಮತಾಂತರಗೊಂಡ ಚಂದನ ಯಾದವ್ ಎಂಬುವವರನ್ನು ಬಂಧಿಸಲಾಗಿದೆ. ಗ್ಯಾಂಗ್‌ನ ಇತರ ಸದಸ್ಯರಾದ ಬಿಲಾಲ್, ಚಾನು ಮತ್ತು ಯಾಸಿರ್ ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ಈ ಪ್ರಕರಣದಲ್ಲಿ ಇತರ ಸಂತ್ರಸ್ತ ಹುಡುಗಿಯರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1. ಈ ಗ್ಯಾಂಗ್‌ನ ಮುಖ್ಯಸ್ಥೆ ಮಾಹಿರಾ ಐಷಾರಾಮಿ ಜೀವನ ನಡೆಸುತ್ತಿದ್ದಳು. ಆಕೆ ಆರ್ಥಿಕವಾಗಿ ಹಿಂದುಳಿದ ಮತ್ತು ನಿರ್ಗತಿಕ ಹಿಂದೂ ಹುಡುಗಿಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದಳು. 30 ವರ್ಷದ ಒಬ್ಬ ಹಿಂದೂ ಸಂತ್ರಸ್ತೆಗೆ ಮಾಸಿಕ 10 ಸಾವಿರ ರೂಪಾಯಿ ಸಂಬಳದ ಮಕ್ಕಳ ಆರೈಕೆ ಕೆಲಸ ಕೊಡಿಸುವುದಾಗಿ ನಂಬಿಸಿ ತನ್ನ ಬಳಿಯೇ ಇರಿಸಿಕೊಂಡಿದ್ದಳು. ಹಾಗೆಯೇ ಛತ್ತೀಸ್‌ಗಢದ ಒಬ್ಬ ಬ್ಯೂಟಿಷಿಯನ್ ಹಿಂದೂ ಯುವತಿಯನ್ನು, ಆಕೆಯ ಅತ್ತಿಗೆ ಸಂಜನಾ (ಮತಾಂತರಗೊಂಡು ಜನ್ನತ್ ಎಂದು ಹೆಸರು ಬದಲಿಸಿಕೊಂಡಿದ್ದಳು) ಮೂಲಕ ಪ್ರೇಮದ ಬಲೆಯಲ್ಲಿ ಬೀಳಿಸಲಾಗಿತ್ತು.
2. ಸಂತ್ರಸ್ತರು ಪೊಲೀಸರಿಗೆ ನೀಡಿದ ಮಾಹಿತಿಯ ಪ್ರಕಾರ, ಮಾಹಿರಾನ ಪ್ರಿಯಕರ ಚಂದನ ಯಾದವ್ ಮೊದಲು ಅವರಿಗೆ ಅಮಲು ಪದಾರ್ಥ ಬೆರೆಸಿದ ಪಾನೀಯ ನೀಡಿ ಅತ್ಯಾಚಾರ ಎಸಗಿದ್ದನು. ನಂತರ ಮಾಹಿರಾ ಮತ್ತು ಆಕೆಯ ಸಹಚರರು ಆ ಹುಡುಗಿಯರಿಗೆ ಬೆದರಿಕೆ ಹಾಕಿ ಭೋಪಾಲ್, ಕರ್ಣಾವತಿ (ಗುಜರಾತ್) ಮತ್ತು ಮುಂಬಯಿನ ಶ್ರೀಮಂತ ವ್ಯಕ್ತಿಗಳ ಬಳಿ ವೇಶ್ಯಾವಾಟಿಕೆಗಾಗಿ ಕಳುಹಿಸಲು ಆರಂಭಿಸಿದರು. ವಿರೋಧಿಸಿದರೆ ಅಪಪ್ರಚಾರ ಮಾಡುವ ಮತ್ತು ಜೀವ ಬೆದರಿಕೆ ಹಾಕುವ ತಂತ್ರ ಅನುಸರಿಸುತ್ತಿದ್ದರು.
3. ಆರೋಪಿಗಳ ಉದ್ದೇಶ ಕೇವಲ ವೇಶ್ಯಾವಾಟಿಕೆ ಮಾತ್ರವಾಗಿರದೆ, ಮತಾಂತರ ಮಾಡುವುದೂ ಆಗಿತ್ತು. ಚಂದನ ಯಾದವ್ ಸ್ವತಃ ಹಿಂದೂ ಧರ್ಮವನ್ನು ತ್ಯಜಿಸಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದನು. ಆರೋಪಿಗಳು ಸಂತ್ರಸ್ತರಿಗೆ ನಮಾಜ್ ಮಾಡುವುದು, ಬುರ್ಖಾ ಧರಿಸುವುದು ಮತ್ತು ಕುರಾನ್ ಓದುವಂತೆ ಒತ್ತಡ ಹೇರುತ್ತಿದ್ದರು. ‘ಮುಸ್ಲಿಂ ಪುರುಷರು ಒಳ್ಳೆಯವರು, ಅವರು ಮದ್ಯಪಾನ ಮಾಡುವುದಿಲ್ಲ, ನೀವೂ ಇಸ್ಲಾಂ ಧರ್ಮ ಸ್ವೀಕರಿಸಿ ನಿಕಾಹ್ (ವಿವಾಹ) ಮಾಡಿಕೊಳ್ಳಿ’ ಎಂದು ಹೇಳಿ ಅವರನ್ನು ಮತಾಂತರಕ್ಕೆ ಪ್ರಚೋದಿಸಲಾಗುತ್ತಿತ್ತು.
4. ಆರೋಪಿ ಸಹೋದರಿಯರಾದ ಅಮ್ರೀನ್ ಮತ್ತು ಆಫ್ರೀನ್ ಮೊದಲು ಅಬ್ಬಾಸ್ ನಗರದ ಕೊಳೆಗೇರಿಯಲ್ಲಿ ವಾಸವಿದ್ದರು. ಹುಡುಗಿಯರ ಸರಬರಾಜು ಮತ್ತು ಅನೈತಿಕ ಕೃತ್ಯಗಳಿಂದ ಬಂದ ಕಪ್ಪು ಹಣದ ಬಲದಿಂದ ಅವರು ಐಷಾರಾಮಿ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದರು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಗ್ಯಾಂಗ್‌ನ ಸಂಪರ್ಕಗಳು ಹಲವು ದೊಡ್ಡ ನಗರಗಳ ಪ್ರಭಾವಿ ವ್ಯಕ್ತಿಗಳೊಂದಿಗೆ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಂಪಾದಕೀಯ ನಿಲುವುಇಂತಹ ಘಟನೆಗಳಲ್ಲಿ ಈಗ ಗಲ್ಲು ಶಿಕ್ಷೆಯನ್ನೇ ನೀಡುವುದು ಅತ್ಯಂತ ಅಗತ್ಯವಾಗಿದೆ |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!