
ವಾಷಿಂಗ್ಟನ್ ಡಿಸಿ (ಅಮೆರಿಕ): ಅಮೆರಿಕದ ಸರ್ವೋಚ್ಛ ನ್ಯಾಯಾಲಯವು ಅಧ್ಯಕ್ಷ ಟ್ರಂಪ್ ಅವರಿಗೆ ಹಿನ್ನಡೆ ನೀಡುವ ಮೂಲಕ ಆಮದು ಸುಂಕವನ್ನು ರದ್ದುಗೊಳಿಸಲು ತೀರ್ಪು ನೀಡಿದ ನಂತರ, ಫೆಬ್ರವರಿ ೨೪ ರಿಂದ ‘ಅಂತರರಾಷ್ಟ್ರೀಯ ತುರ್ತು ಆರ್ಥಿಕ ಶಕ್ತಿ ಕಾಯ್ದೆ (ಐಇಪಿಎ)’ ಅಡಿಯಲ್ಲಿ ವಿಧಿಸಲಾದ ಸುಂಕಗಳನ್ನು ವಸೂಲಿ ಮಾಡುವುದನ್ನು ನಿಲ್ಲಿಸಲಾಗುವುದು ಎಂದು ಅಮೆರಿಕದ ‘ಕಸ್ಟಮ್ಸ್ ಅಂಡ್ ಬಾರ್ಡರ್ ಪ್ರೊಟೆಕ್ಷನ್’ (ಸಿಬಿಪಿ) ಮಾಹಿತಿ ನೀಡಿದೆ.
‘ಕಾರ್ಗೋ ಸಿಸ್ಟಮ್ಸ್ ಮೆಸೇಜಿಂಗ್ ಸರ್ವಿಸ್’ ಮೂಲಕ ಕಳುಹಿಸಲಾದ ನೋಟಿಸ್‌ನಲ್ಲಿ, ‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐಇಪಿಎ ಹಿಂದಿನ ಆದೇಶಗಳಿಗೆ ಸಂಬಂಧಿಸಿದ ಎಲ್ಲಾ ಸುಂಕಗಳನ್ನು ನಿಷ್ಕ್ರಿಯಗೊಳಿಸಲಾಗುವುದು’ ಎಂದು ತಿಳಿಸಲಾಗಿದೆ. ಅಮೆರಿಕದ ಸುಪ್ರೀಂ ಕೋರ್ಟ್ ಈ ಸುಂಕಗಳನ್ನು ಕಾನೂನುಬಾಹಿರ ಎಂದು ಘೋಷಿಸಿದ ಮೂರು ದಿನಗಳ ನಂತರ ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ನ್ಯಾಯಾಲಯದ ಈ ತೀರ್ಪಿನಿಂದಾಗಿ ಆಮದುದಾರರಿಂದ ದೊಡ್ಡ ಮೊತ್ತದ ಮರುಪಾವತಿ ಹಕ್ಕುಗಳು ಬರುವ ಸಾಧ್ಯತೆಯಿದೆ.
ಹೊಸ ಶೇಕಡಾ ೧೫% ರಷ್ಟು ಆಮದು ಸುಂಕ ಮುಂದುವರಿಕೆ
ಈ ತಡೆಯಾಜ್ಞೆಯು ಕೇವಲ ‘ಐಇಪಿಎ’ ಅಡಿಯಲ್ಲಿ ವಿಧಿಸಲಾದ ಸುಂಕಗಳಿಗೆ ಮಾತ್ರ ಸೀಮಿತವಾಗಿದೆ ಎಂದು ‘ಸಿಬಿಪಿ’ ಸ್ಪಷ್ಟಪಡಿಸಿದೆ. ಪ್ರಸ್ತುತ ಅಧ್ಯಕ್ಷರು ಇತರ ಕಾಯ್ದೆಗಳ ಅಡಿಯಲ್ಲಿ ಜಾರಿಗೆ ತಂದಿರುವ ಶೇಕಡಾ ೧೫% ರಷ್ಟು ಆಮದು ಸುಂಕದ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಇದರಲ್ಲಿ ರಾಷ್ಟ್ರೀಯ ಭದ್ರತೆಯ ಆಧಾರದ ಮೇಲೆ ವ್ಯಾಪಾರ ವಿಸ್ತರಣೆ ಕಾಯ್ದೆಯ ಕಲಂ ೨೩೨ ರ ಅಡಿಯಲ್ಲಿ ವಿಧಿಸಲಾದ ಸುಂಕಗಳು ಮತ್ತು ಅನ್ಯಾಯದ ವ್ಯಾಪಾರ ಪದ್ಧತಿಗಳ ವಿರುದ್ಧ ಕ್ರಮ ಕೈಗೊಳ್ಳುವ ವ್ಯಾಪಾರ ಕಾಯ್ದೆಯ ಕಲಂ ೩೦೧ ರ ಅಡಿಯಲ್ಲಿ ವಿಧಿಸಲಾದ ಸುಂಕಗಳು ಮುಂದುವರಿಯಲಿವೆ.
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation