‘ಐ.ಐ.ಎಮ್. ಲಕ್ನೋ’ ವರದಿ ಪ್ರಸಾರ

ಲಕ್ಷ್ಮಣಪುರಿ (ಉತ್ತರಪ್ರದೇಶ) – ಶ್ರೀರಾಮಮಂದಿರದ ಪ್ರಾಣಪ್ರತಿಷ್ಠೆಯ ನಂತರ ಅಯೋಧ್ಯೆಯ ಆರ್ಥಿಕತೆಯಲ್ಲಿ ಐತಿಹಾಸಿಕ ಬೆಳವಣಿಗೆ ಕಂಡುಬರುತ್ತಿದೆ. ‘ಐ.ಐ.ಎಮ್. ಲಕ್ನೋ’ ಎಂಬ ಪ್ರತಿಷ್ಠಿತ ವಿಶ್ವವಿದ್ಯಾಲಯವು ಒಂದು ಅಧ್ಯಯನ ವರದಿಯನ್ನು ಪ್ರಸಾರ ಮಾಡಿದೆ. ‘ದಿ ಎಕನಾಮಿಕ್ ರೆನೆಸಾನ್ಸ್ ಆಫ್ ಅಯೋಧ್ಯಾ, ಇಂಡಿಯಾ – ಎ ಕೇಸ್ ಸ್ಟಡಿ ಆನ್ ರಾಮಮಂದಿರ್’ ಹೆಸರಿನ ಈ ವರದಿಯಲ್ಲಿ ಶ್ರೀರಾಮಮಂದಿರದಿಂದಾಗಿ ಪ್ರವಾಸೋದ್ಯಮ ಆಧಾರಿತ ವಾರ್ಷಿಕ ವಹಿವಾಟು 100 ಬಿಲಿಯನ್ (ಅಬ್ಜ) ರೂಪಾಯಿಗಳ ಹತ್ತಿರ ತಲುಪಲಿದೆ. ಹಾಗೆಯೇ ದೇಶಾದ್ಯಂತದ ಆರ್ಥಿಕ ವಹಿವಾಟು 1 ಲಕ್ಷ ಕೋಟಿ ರೂಪಾಯಿಗಳ ಗಡಿ ದಾಟುವ ಸಾಧ್ಯತೆಯಿದೆ. ಮಂದಿರ ನಿರ್ಮಾಣಕ್ಕೂ ಮುನ್ನ ಅಯೋಧ್ಯೆಯ ಗುರುತು ಪ್ರಮುಖವಾಗಿ ಪವಿತ್ರ ತೀರ್ಥಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿತ್ತು; ಆದರೆ ಪ್ರಾಣಪ್ರತಿಷ್ಠೆಯ ನಂತರ ಇಲ್ಲಿ ಆರ್ಥಿಕ ಚಟುವಟಿಕೆಗಳಲ್ಲಿ ಅಭೂತಪೂರ್ವ ಏರಿಕೆ ಕಂಡುಬಂದಿದೆ.
🚩 Historic Impact of Shri Ram Mandir Pran Pratistha 🚩
Report by IIM Lucknow:
– 18 crore devotees
– 1.2 lakh jobs created
– ₹400+ crore in tax revenue
– ₹1 Lakh Crore+ nationwide business turnover 📈 – with Ayodhya at the heart of this transformation.The rise of the Shri… pic.twitter.com/ewrRpzCri0
— Sanatan Prabhat (@SanatanPrabhat) February 19, 2026
ವರದಿಯಲ್ಲಿನ ಪ್ರಮುಖ ಸಾಂಖ್ಯಿಕ ವಿಶ್ಲೇಷಣೆ ಹೀಗಿದೆ…!
1. ಪ್ರವಾಸೋದ್ಯಮ, ಹೂಡಿಕೆ, ಉದ್ಯೋಗ ಮತ್ತು ಆದಾಯದಲ್ಲಿ ದೊಡ್ಡ ಮಟ್ಟದ ಏರಿಕೆ.
2. ಮುಂದಿನ 4-5 ವರ್ಷಗಳಲ್ಲಿ ಪ್ರವಾಸೋದ್ಯಮ, ಸಾರಿಗೆ ಮತ್ತು ಅತಿಥ್ಯ ಕ್ಷೇತ್ರಗಳಲ್ಲಿ ಅಂದಾಜು 1 ಲಕ್ಷ 20 ಸಾವಿರ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಯ ಸಾಧ್ಯತೆ.
3. ಪ್ರತಿದಿನ 2 ಲಕ್ಷಕ್ಕೂ ಅಧಿಕ ಭಕ್ತರಿಂದ ದರ್ಶನ, ವರ್ಷಕ್ಕೆ 5-6 ಕೋಟಿ ಭಕ್ತರು ಅಯೋಧ್ಯೆ ಯಾತ್ರೆ ಮಾಡುತ್ತಾರೆ.
4. ಸ್ಥಳೀಯ ಕರಕುಶಲ ವಸ್ತುಗಳು, ಧಾರ್ಮಿಕ ಸ್ಮರಣಿಕೆಗಳು ಮತ್ತು ವಿಗ್ರಹಗಳ ಬೇಡಿಕೆಯಲ್ಲಿ ಭಾರಿ ಏರಿಕೆಯಾಗಿದ್ದರಿಂದ ಕುಶಲಕರ್ಮಿಗಳು ಮತ್ತು ಸ್ಥಳೀಯ ಉತ್ಪಾದಕರಿಗೆ ನೇರ ಲಾಭ.
5. ಅಂದಾಜು 6 ಸಾವಿರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (MSME) ಪ್ರಾರಂಭ.
6. ಅಂಗಡಿಕಾರರು ಮತ್ತು ಬೀದಿ ಬದಿ ವ್ಯಾಪಾರಿಗಳ ದೈನಂದಿನ ಆದಾಯದಲ್ಲಿ ಐದು ಪಟ್ಟು ಹೆಚ್ಚಳ.
ಸಂಪಾದಕೀಯ ನಿಲುವು
|
ಮಹಿಳಾ ಸದಸ್ಯರ ಸಮಿತಿಯ ಮೂಲಕ ಲೈಂಗಿಕ ಶೋಷಣೆ ವಿರೋಧಿ ಕಾಯ್ದೆಗಳ ಮರುಪರಿಶೀಲನೆ ನಡೆಸಬೇಕು!
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!