
ಮೋದಿ ಸರಕಾರ ಬರುವ ಮೊದಲು ದೇಶದಲ್ಲಿ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಸರಕಾರಗಳು ಬಂದಿದ್ದವು; ಆದರೆ ಯಾರೂ ವಂದೇ ಮಾತರಮ್ ಅನ್ನು ಕಡ್ಡಾಯಗೊಳಿಸಿರಲಿಲ್ಲ ಮತ್ತು ಮೋದಿ ಸರಕಾರ ಬಂದ ೧೧ ವರ್ಷಗಳ ನಂತರ ಇದನ್ನು ಕಡ್ಡಾಯಗೊಳಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಇದಕ್ಕೆ ರಾಷ್ಟ್ರೀಯ ಗೀತೆಯ ಸ್ಥಾನಮಾನ ನೀಡಲಾಗಿತ್ತು; ಆದರೆ ಈಗಿನ ನಿರ್ಧಾರದಿಂದ, ಯಾವ ವಂದೇ ಮಾತರಮ್ ಭಾರತದ ಸ್ವಾತಂತ್ರ್ಯಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳ ಮಂತ್ರಘೋಷವಾಗಿತ್ತೋ, ಅದರ ಕಾರ್ಯ ಇಂದು ನಿಜವಾದ ಅರ್ಥದಲ್ಲಿ ಪೂರ್ಣಗೊಂಡಿದೆ ಎಂದು ಹೇಳಬೇಕಾಗುತ್ತದೆ. ಪ್ರಸ್ತುತ ವರ್ಷವು ಈ ಗೀತೆಯ ೧೫೦ ನೇ ವರ್ಷವೆಂದು ಆಚರಿಸಲಾಗುತ್ತಿದೆ. ಆದ್ದರಿಂದ ಇದೊಂದು ಉತ್ತಮ ನಿರ್ಧಾರವಾಗಿದೆ. ಮೂಲತಃ ವಂದೇ ಮಾತರಮ್ ಭಾರತದ ರಾಷ್ಟ್ರಗೀತೆಯಾಗುವುದು ಅಗತ್ಯವಾಗಿತ್ತು; ಆದರೆ ಅಂದಿನ ಕಾಂಗ್ರೆಸ್ ಸರಕಾರ ಮತ್ತು ನೆಹರೂ ಅವರು ಮುಸಲ್ಮಾನರ ಓಲೈಕೆಯಿಂದಾಗಿ ಹಾಗೂ ಕ್ರಾಂತಿಕಾರಿಗಳ ಬಗೆಗಿನ ದ್ವೇಷದಿಂದಾಗಿ ಈ ಗೀತೆಗೆ ರಾಷ್ಟ್ರಗೀತೆಯ ಸ್ಥಾನಮಾನ ನೀಡಲಿಲ್ಲ. ‘ವಂದೇ ಮಾತರಮ್ ಸರಿಯಾಗಿ ಹಾಡಲು ಬರುವುದಿಲ್ಲ, ಅದಕ್ಕೆ ರಾಗ ಸಂಯೋಜಿಸಲು ಸಾಧ್ಯವಿಲ್ಲ’ ಎಂದು ಹೇಳಿ ನೆಹರೂ ಅವರು ಆ ಸಮಯದಲ್ಲಿ ವಿರೋಧಿಸಿದ್ದರು. ಈ ಸವಾಲನ್ನು ಪಂಡಿತ್ ಪಲುಸ್ಕರ್ ಅವರು ಸ್ವೀಕರಿಸಿ ಅದಕ್ಕೆ ಸುಂದರವಾದ ರಾಗವನ್ನು ಸಂಯೋಜಿಸಿ ದೇಶದ ಮುಂದೆ ಮಂಡಿಸಿದರು; ಆದರೆ ಹಿಂದೂದ್ವೇಷಿ ನೆಹರೂ ಅವರಿಗೆ ಏನಾದರೊಂದು ಕಾರಣ ಹೇಳಬೇಕೆಂಬುದಕ್ಕಾಗಿ ರಾಗದ ವಿಷಯವನ್ನು ಮುಂದಿಟ್ಟಿದ್ದರಿಂದ ಅವರ ವಿರೋಧವು ಹಾಗೆಯೇ ಉಳಿದಿತ್ತು. ‘ಜನ ಗಣ ಮನ’ ಬ್ರಿಟನ್ ರಾಜನ ಸ್ವಾಗತಕ್ಕಾಗಿ ಬರೆದ ಗೀತೆಯಾಗಿದೆ ಎಂಬ ಆರೋಪ ಮಾಡಿ ಅದನ್ನು ರಾಷ್ಟ್ರಗೀತೆ ಮಾಡುವುದಕ್ಕೆ ಆ ಸಮಯದಲ್ಲಿ ವಿರೋಧ ವ್ಯಕ್ತವಾಗಿತ್ತು. ಅಂತಹ ಸಮಯದಲ್ಲಿ ವಂದೇ ಮಾತರಮ್ ಅನ್ನು ರಾಷ್ಟ್ರಗೀತೆ ಮಾಡಬಹುದಿತ್ತು; ಆದರೆ ಹಾಗೆ ಆಗಲಿಲ್ಲ. ‘ಇಷ್ಟು ವರ್ಷಗಳ ನಂತರ ಅದನ್ನು ಬದಲಾಯಿಸಿ ವಂದೇ ಮಾತರಮ್ ಅನ್ನು ರಾಷ್ಟ್ರಗೀತೆ ಎಂದು ಘೋಷಿಸಲು ಸಾಧ್ಯವಿತ್ತೇ ?’ ಎಂದು ಯಾರ ಮನಸ್ಸಿನಲ್ಲಾದರೂ ಬರಬಹುದು; ಆದರೆ ಅಂತಹ ಚರ್ಚೆ ದೇಶದಲ್ಲಿ ನಡೆಯಬೇಕು. ಇನ್ನೊಂದೆಡೆ ಇಷ್ಟು ವರ್ಷಗಳಲ್ಲಿ ಸರಕಾರಿ ಮಟ್ಟದಲ್ಲಿ ವಂದೇ ಮಾತರಮ್‌ಗೆ ಯೋಗ್ಯ ಗೌರವ ನೀಡದಿದ್ದರೂ, ಪ್ರತಿಯೊಬ್ಬ ಭಾರತೀಯನ (ಮುಸಲ್ಮಾನರು ಮತ್ತು ಇತರ ಕೆಲವು ಧರ್ಮೀಯರನ್ನು ಹೊರತುಪಡಿಸಿ) ಮನಸ್ಸಿನಲ್ಲಿ ವಂದೇ ಮಾತರಮ್ ಕೆತ್ತಲ್ಪಟ್ಟಿರುವುದರಿಂದ ಅದು ಅವರ ತುಟಿಗಳ ಮೇಲೆ ಯಾವಾಗಲೂ ಬರುತ್ತಲೇ ಇತ್ತು ಮತ್ತು ಅದನ್ನು ಜೀವಂತವಾಗಿ ಇಡಲಾಯಿತು.
ಶ್ರೀ ದುರ್ಗಾದೇವಿಗೆ ವಿರೋಧ
ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಕಾಂಗ್ರೆಸ್ ಅಧಿವೇಶನಗಳಲ್ಲಿ ಮತ್ತು ಇತರ ಸಭೆಗಳ ಸಮಯದಲ್ಲಿಯೂ ವಂದೇ ಮಾತರಮ್ ಹಾಡಲಾಗುತ್ತಿತ್ತು; ಆದರೆ ಅದರಲ್ಲಿ ಒಂದು ಚರಣದಲ್ಲಿ ಶ್ರೀ ದುರ್ಗಾದೇವಿಯ ಉಲ್ಲೇಖವಿರುವುದರಿಂದ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು ಪ್ರಾರಂಭಿಸಲಾಯಿತು. ‘ಮುಸಲ್ಮಾನರ ಭಾವನೆಗಳಿಗೆ ಧಕ್ಕೆಯಾಗುವುದು’ ಎಂಬ ಕಾರಣದಿಂದ ಇತರ ಚರಣಗಳನ್ನು ಹಾಡದಿರುವ ನಿರ್ಧಾರವನ್ನು ಕಾಂಗ್ರೆಸ್ ತೆಗೆದುಕೊಂಡಿತು. ಇದನ್ನು ಕೆಲವರು ವಿರೋಧಿಸಿದರು; ಆದರೆ ಅದರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಶ್ರೀ ದುರ್ಗಾದೇವಿಯ ಉಲ್ಲೇಖವಿರುವುದು ಕೂಡ ಅದನ್ನು ರಾಷ್ಟ್ರಗೀತೆ ಮಾಡದಿರಲು ಒಂದು ಕಾರಣ ಎಂದು ಹೇಳಲಾಗುತ್ತದೆ. 
ಮುಸಲ್ಮಾನರ ವಿರೋಧ
ಮುಸಲ್ಮಾನರು ಯಾವಾಗಲೂ ವಂದೇ ಮಾತರಮ್ ಅನ್ನು ವಿರೋಧಿಸುತ್ತಾ ಬಂದಿದ್ದಾರೆ ಮತ್ತು ಇಂದಿಗೂ ಮಾಡುತ್ತಿದ್ದಾರೆ. ಮುಸಲ್ಮಾನರು ‘ವಂದೇ ಮಾತರಮ್’ ಹೇಳಲು ನಿರಾಕರಿಸುತ್ತಾರೆ. ಈಗ ಸರಕಾರದ ನಿರ್ಧಾರದ ನಂತರವೂ ಓವೈಸಿಯಂತಹ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ; ಆದರೆ ಮುಸಲ್ಮಾನರನ್ನು ಓಲೈಸುವ ಸಮಾಜವಾದಿ ಪಕ್ಷದಂತಹ ಪಕ್ಷಗಳೂ ಇದನ್ನು ವಿರೋಧಿಸಿವೆ. ಇದರಿಂದ ಈ ರಾಜಕೀಯ ಪಕ್ಷಗಳಲ್ಲಿ ದೇಶಕ್ಕಿಂತ ರಾಜಕೀಯ ಸ್ವಾರ್ಥವು ಎಷ್ಟು ತುಂಬಿದೆ ಎಂದು ತಿಳಿಯುವುದು. ‘ಇಂತಹ ಪಕ್ಷಗಳು ಎಂದಾದರೂ ಭಾರತಮಾತೆಯ ಬಗ್ಗೆ ನಿಷ್ಠೆ ಹೊಂದಲು ಸಾಧ್ಯವೇ ?’ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈಗ ಮುಂದಿನ ಪ್ರಶ್ನೆಯೆಂದರೆ, ವಂದೇ ಮಾತರಮ್ ಹಾಡುವುದನ್ನು ಕಡ್ಡಾಯಗೊಳಿಸಿದ್ದರಿಂದ ಮುಸಲ್ಮಾನರು ಹೇಗೆ ಪ್ರತಿಕ್ರಿಯಿಸುತ್ತಾರೆ ? ಎಂಬುದನ್ನು ನೋಡಬೇಕಾಗಿದೆ ಮತ್ತು ಅವರು ಅದನ್ನು ಹಾಡದಿದ್ದರೆ, ಗೌರವ ನೀಡದಿದ್ದರೆ ದೇಶದಲ್ಲಿ ಯಾವ ಘಟನೆಗಳು ನಡೆಯುತ್ತವೆ ಎಂಬುದನ್ನೂ ನೋಡಬೇಕಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡುವ ಪ್ರಯತ್ನ ಮಾಡಬಹುದು, ಆದ್ದರಿಂದ ಹಿಂದೂಗಳೊಂದಿಗೆ ಪೊಲೀಸರೂ ಜಾಗರೂಕರಾಗಿರಬೇಕಾದ ಅವಶ್ಯಕತೆಯಿದೆ.
ಕಡ್ಡಾಯಗೊಳಿಸುವುದರ ಲಾಭಗಳು !
ಭಾರತೀಯ ರಾಜಕೀಯ ಮತ್ತು ಸಮಾಜದ ಮನಸ್ಸಿನಲ್ಲಿ ‘ವಂದೇ ಮಾತರಮ್’ ಎಂಬ ಶಬ್ದಗಳನ್ನು ಕೇವಲ ಅಕ್ಷರಗಳ ಗುಂಪು ಎಂದು ಪರಿಗಣಿಸದೆ ಒಂದು ಜೀವಂತ ಶಕ್ತಿಯ ಮೂಲವೆಂದು ಪರಿಗಣಿಸಲಾಗಿದೆ. ಅದನ್ನು ಕಡ್ಡಾಯಗೊಳಿಸುವ ಸರಕಾರದ ನಿರ್ಧಾರವು ಕೇವಲ ಒಂದು ಆಡಳಿತಾತ್ಮಕ ಆದೇಶವಲ್ಲ, ಬದಲಿಗೆ ಅದು ಭಾರತದ ಸಾಂಸ್ಕೃತಿಕ ಅಡಿಪಾಯವನ್ನು ಸ್ಪರ್ಶಿಸುವ ಒಂದು ಧೈರ್ಯದ ಪ್ರಯತ್ನವಾಗಿದೆ. ಕ್ರಾಂತಿಕಾರಿಗಳಿಗೆ ‘ವಂದೇ ಮಾತರಮ್’ ಎಂಬುದು ಗಲ್ಲಿಗೇರುವಾಗ ಹೇಳುತ್ತಿದ್ದ ಮಂತ್ರವಾಗಿತ್ತು. ಅದು ಅವರ ರಕ್ತದಲ್ಲಿತ್ತು, ಕೇವಲ ತುಟಿಗಳ ಮೇಲಲ್ಲ. ಅದು ಅವರ ಬದುಕಿನ ಮತ್ತು ಮರಣದ ಆಧಾರವಾಗಿತ್ತು. ಭಗತ್ ಸಿಂಗ್, ಸುಖದೇವ್, ರಾಜಗುರು ಇರಲಿ ಅಥವಾ ಮದನಲಾಲ್ ಧಿಂಗ್ರಾ ಇರಲಿ, ಇವರು ಕುಣಿಕೆಯ ಹಗ್ಗದ ಬಳಿ ಹೋಗುವಾಗ ಅವರ ತುಟಿಗಳ ಮೇಲೆ ‘ವಂದೇ ಮಾತರಮ್’ ಜಯಘೋಷವಿರುತ್ತಿತ್ತು. ಬಂಗಾಳದ ವಿಭಜನೆಯ ಸಮಯದಲ್ಲಿ (ವರ್ಷ ೧೯೦೫) ಬ್ರಿಟಿಷರು ‘ವಂದೇ ಮಾತರಮ್’ ಘೋಷಣೆಯ ಮೇಲೆ ನಿಷೇಧ ಹೇರಿದ್ದರು. ಆದರೂ ಮೈಮೇಲೆ ಬೀಳುತ್ತಿದ್ದ ಪ್ರತಿಯೊಂದು ಲಾಠಿ ಹೊಡೆತದೊಂದಿಗೆ ಕ್ರಾಂತಿಕಾರಿಗಳ ಧ್ವನಿ ಇನ್ನಷ್ಟು ಬಲವಾಗುತ್ತಿತ್ತು. ಶಾಲೆಗಳಲ್ಲಿ ಅಥವಾ ಕಚೇರಿಗಳಲ್ಲಿ ವಂದೇ ಮಾತರಮ್ ಹೇಳುವಾಗ ಭಾವವನ್ನೂ ತರುವುದು ಅಗತ್ಯವಾಗಲಿದೆ. ಆ ಭಾವವು ಈ ಗೀತೆಯ ಶಬ್ದಗಳಿಂದಲೇ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ರಾಷ್ಟ್ರಭಕ್ತಿಯು ಒಂದು ಬೀಜದಂತೆ ಇರುತ್ತದೆ, ಅದು ಅಂತಃಕರಣದ ಮಣ್ಣಿನಲ್ಲಿ ತಾನಾಗಿಯೇ ಮೊಳೆಯಬೇಕು. ಯಾವುದಾದರೂ ವಿಷಯವನ್ನು ಒತ್ತಾಯಿಸಿದರೆ ಅದನ್ನು ಜನರು ಸ್ವೀಕರಿಸುವುದಿಲ್ಲ, ವ್ಯಕ್ತಿಗಳು ಸ್ವೀಕರಿಸುವುದಿಲ್ಲ; ಆದರೆ ಇಲ್ಲಿ ‘ವಂದೇ ಮಾತರಮ್ ಕಡ್ಡಾಯಗೊಳಿಸಬೇಕು’ ಎಂಬುದು ಕೋಟ್ಯಂತರ ಹಿಂದೂಗಳ ದಶಕಗಳ ಬೇಡಿಕೆಯಾಗಿತ್ತು. ಜಗತ್ತಿನ ಇತಿಹಾಸದಲ್ಲಿ ಇಷ್ಟು ವರ್ಷಗಳ ಕಾಲ ಜನರ ಮನಸ್ಸಿನಲ್ಲಿ ಮತ್ತು ತುಟಿಗಳಲ್ಲಿ ದೇಶದ ಬಗ್ಗೆ ಉತ್ಕಟ ಭಾವವನ್ನು ಮೂಡಿಸುವ ಮತ್ತು ಅದನ್ನು ಕಡ್ಡಾಯಗೊಳಿಸಲು ಪ್ರಯತ್ನಿಸುತ್ತಿರುವ ಬೇರೆ ಯಾವುದೇ ಗೀತೆ ಇರಲಿಕ್ಕಿಲ್ಲ. ‘ವಂದೇ ಮಾತರಮ್’ ಸಂಸ್ಕೃತ ಮಿಶ್ರಿತ ಬಂಗಾಳಿ ಭಾಷೆಯಲ್ಲಿದೆ. ಆದರೂ ದೇಶದ ಜನತೆಗೆ ಅದರ ವಿಭಿನ್ನತೆ ಅನಿಸುವುದಿಲ್ಲ; ಏಕೆಂದರೆ ದೇಶದ ಪ್ರತಿಯೊಬ್ಬ ವ್ಯಕ್ತಿಯು (ಮುಸಲ್ಮಾನರನ್ನು ಹೊರತುಪಡಿಸಿ) ಈ ಮಣ್ಣಿನೊಂದಿಗೆ ಸಂಬಂಧ ಹೊಂದಿದ್ದಾನೆ ಮತ್ತು ಈ ಮಣ್ಣಿನ ಬಗೆಗಿನ ಕೃತಜ್ಞತೆಯು ಯಾವುದಾದರೂ ಗೀತೆಯಿಂದ ವ್ಯಕ್ತವಾಗುತ್ತಿದ್ದರೆ ಅಲ್ಲಿ ಪ್ರತಿಯೊಬ್ಬರೂ (ಮುಸಲ್ಮಾನರನ್ನು ಹೊರತುಪಡಿಸಿ) ನಮಸ್ಕರಿಸುತ್ತಾರೆ. ಅಲ್ಲಿ ಭಾಷೆಯ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ‘ವಂದೇ ಮಾತರಮ್’ ಕೇವಲ ಶಬ್ದಗಳ ಸಂಗ್ರಹವಲ್ಲ, ಬದಲಿಗೆ ನಮ್ಮ ಪೂರ್ವಜರ ಬಲಿದಾನದ ಇತಿಹಾಸವಾಗಿದೆ.
ಗೀತೆಯ ಭಾವವನ್ನು ಕಲಿಸಿ !
ಬಂಕಿಮಚಂದ್ರ ಚಟ್ಟೋಪಾಧ್ಯಾಯ ಅವರು ೧೮೮೨ ರಲ್ಲಿ ‘ಆನಂದಮಠ’ ಕಾದಂಬರಿಯ ಮೂಲಕ ವಂದೇ ಮಾತರಮ್ ಗೀತೆಯನ್ನು ಜಗತ್ತಿನ ಮುಂದೆ ತಂದರು. ಆ ಕಾಲದಲ್ಲಿ ಸಮಾಜವು ನಿರಾಶೆಗೊಂಡಿತ್ತು, ಆರ್ಥಿಕವಾಗಿ ಪೀಡಿತವಾಗಿತ್ತು ಮತ್ತು ಮಾನಸಿಕವಾಗಿ ಗುಲಾಮಗಿರಿಯ ಹೊರೆಯ ಕೆಳಗೆ ಸಿಲುಕಿತ್ತು. ಅಂತಹ ಸಮಯದಲ್ಲಿ ವಂದೇ ಮಾತರಮ್ ಗೀತೆಯು ಭಾರತೀಯರ ಅಂತಃಕರಣದಲ್ಲಿ ಸುಪ್ತವಾಗಿದ್ದ ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸಿತು. ಇಂದು ಈ ಗೀತೆಯನ್ನು ಕಡ್ಡಾಯಗೊಳಿಸುವಾಗ ಈ ಗೀತೆಯ ಅರ್ಥವನ್ನು ಶಾಲೆಗಳಲ್ಲಿ ಕಲಿಸಿಕೊಡಬೇಕು. ಪ್ರತಿಯೊಂದು ಚರಣದಿಂದ ಭಾರತಮಾತೆಯ ಬಗ್ಗೆ ಯಾವ ಭಾವ ವ್ಯಕ್ತವಾಗಿದೆ ಎಂಬುದನ್ನು ತಿಳಿಸಿಕೊಡಬೇಕು, ಇದರಿಂದ ಭಾರತದ ಮುಂದಿನ ಪೀಳಿಯಲ್ಲಿ ದೇಶಭಕ್ತಿಯ ಜ್ಯೋತಿಯು ಅಖಂಡವಾಗಿ ಬೆಳಗುತ್ತಿರುತ್ತದೆ. ‘ವಂದೇ ಮಾತರಮ್ !’
ಆರ್ಥಿಕ ಶಿಸ್ತು
ಸಂಪಾದಕೀಯ : ಜಿರಳೆ ಮತ್ತು ಬೋಧನೆ
ಬಂಗಾಳದಲ್ಲಿ ಅನಿವಾರ್ಯ ಸಂಘರ್ಷ !
ಬಹಿರಂಗ ಸತ್ಯ: ಭೋಜಶಾಲೆ ಮುಕ್ತ!
ಗೋಹತ್ಯೆ ಮತ್ತು ಸರ್ವೋಚ್ಚ ನ್ಯಾಯಾಲಯ !
ಥಾಪರ್ ಅವರ ‘ವೋಕಿಸಂ’ !