
ನವದೆಹಲಿ – ವಿವಾಹದ ಸಮಯದಲ್ಲಿ ಕೇವಲ ಸಪ್ತಪದಿಯ ವಿಧಿ ನೆರವೇರಲಿಲ್ಲ ಎಂಬ ಕಾರಣದಿಂದ ಆ ವಿವಾಹವು ಅಸಿಂಧುವಾಗುವುದಿಲ್ಲ ಎಂದು ದೆಹಲಿ ಉಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ‘ದಂಪತಿಗಳು ಕೆಲವು ವಿಧಿಗಳನ್ನು ಪೂರೈಸಿ ಒಟ್ಟಾಗಿ ವಾಸಿಸಲು ಆರಂಭಿಸಿದ್ದರೆ ಮತ್ತು ಅವರ ವಿವಾಹದಿಂದ ಒಂದು ಮಗು ಜನಿಸಿದ್ದರೆ, ಆ ವಿವಾಹವನ್ನು ಅಸಿಂಧು ಎಂದು ನಿರ್ಧರಿಸಲು ಸಾಧ್ಯವಿಲ್ಲ’, ಎಂದು ನ್ಯಾಯಾಲಯವು ಅರ್ಜಿಯೊಂದರ ವಿಚಾರಣೆಯ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
ಯಾವ ಪ್ರಕರಣ ?
ಅರ್ಜಿದಾರರು ಜೂನ್ ೧೯, ೨೦೧೬ ರಂದು ಪರಸ್ಪರ ಹಾರಗಳನ್ನು ಹಾಕಿಕೊಳ್ಳುವ ಮೂಲಕ ವಿವಾಹವಾಗಿದ್ದರು; ಆದರೆ ಈ ಸಮಯದಲ್ಲಿ ಅವರ ವಿವಾಹ ಮಹೋತ್ಸವದಲ್ಲಿ ಸಪ್ತಪದಿ ವಿಧಿ ನಡೆದಿರಲಿಲ್ಲ. ತದನಂತರ ಈ ದಂಪತಿಗಳು ಒಟ್ಟಾಗಿ ವಾಸಿಸತೊಡಗಿದರು. ಅವರ ಸಹಜೀವನದಿಂದ ಅವರಿಗೆ ಒಬ್ಬಳು ಮಗಳೂ ಜನಿಸಿದಳು; ಆದರೆ ಅರ್ಜಿದಾರನು ಅಕ್ಟೋಬರ್ ೨೦೧೬ ರಿಂದ ತಾನು ಪತ್ನಿಯೊಂದಿಗೆ ವಾಸಿಸುತ್ತಿಲ್ಲ ಎಂದು ವಾದ ಮಂಡಿಸಿದನು. ಆ ಇಬ್ಬರ ನಡುವೆ ಸಪ್ತಪದಿಯ ವಿಧಿ ನಡೆಯದ ಕಾರಣ ಆತ ಪತ್ನಿಯೊಂದಿಗೆ ವಾಸಿಸಲು ನಿರಾಕರಿಸಿದನು. ಅರ್ಜಿದಾರನ ಪತ್ನಿಯು, ಅಕ್ಟೋಬರ್ ೨೦೧೭ ರಲ್ಲಿ ತನ್ನನ್ನು ಅತ್ತೆಮನೆಯಿಂದ ಹೊರಹಾಕಲಾಯಿತು ಎಂದು ಪ್ರತಿಪಾದಿಸಿದಳು. ಅಲ್ಲದೆ, ವಿವಾಹ ಮಹೋತ್ಸವದಲ್ಲಿ ಸಪ್ತಪದಿ ಕಾರ್ಯಕ್ರಮ ನಡೆದಿದೆ ಎಂದೂ ಪತ್ನಿಯು ಪ್ರತಿಪಾದಿಸಿದಳು; ಆದರೆ ಈ ಸಮಾರಂಭದ ಛಾಯಾಚಿತ್ರಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಅವಳು ವಿಫಲಳಾದಳು.
ಹಿಂದೂ ವಿವಾಹ ಕಾಯ್ದೆ ಏನಿದೆ ?
ಉಚ್ಚ ನ್ಯಾಯಾಲಯವು ಹಿಂದೂ ವಿವಾಹ ಕಾಯ್ದೆ ೧೯೫೫ ರ ಕಲಂ ೭ ರ ಅಡಿಯಲ್ಲಿನ ಕಾನೂನಿನ ನಿಬಂಧನೆಗಳನ್ನು ವಿಶ್ಲೇಷಿಸಿತು. ಕಲಂ ೭ ರ ಅಡಿಯಲ್ಲಿನ ಉಪಕಲಂ ೧ ರ ಪ್ರಕಾರ ಯಾವುದೇ ವಿಶಿಷ್ಟ ಸಮಾರಂಭದ ಬಂಧನವಿಲ್ಲದೆ ಯಾವುದೇ ಪಕ್ಷದ ರೀತಿರಿವಾಜಗಳ ಪ್ರಕಾರ ಮತ್ತು ಸಮಾರಂಭಗಳ ಪ್ರಕಾರ ವಿವಾಹವಾಗುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ.ಹಾಗೆಯೇ ಉಪಕಲಂ ೨ ರ ಪ್ರಕಾರ ಮಾನ್ಯ ವಿವಾಹವನ್ನು ಸ್ಥಾಪಿಸಲು ಪ್ರತಿಯೊಂದು ಬಾರಿಯೂ ಸಪ್ತಪದಿ ಮಾಡುವುದು ಅನಿವಾರ್ಯವಲ್ಲ. ಅಂದರೆ ಸಪ್ತಪದಿಯು ಸಾಂಪ್ರದಾಯಿಕ ಸಂಸ್ಕಾರಗಳ ಒಂದು ಭಾಗವಾಗಿದೆ; ಆದರೆ ಈ ವಿಧಿಯು ಕಡ್ಡಾಯವಲ್ಲ ಎಂದು ನಮೂದಿಸಿದೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath