ವರದಕ್ಷಿಣೆ ಕಿರುಕುಳ ಪ್ರಕರಣ; ಉಚ್ಚ ನ್ಯಾಯಾಲಯದಿಂದ ಆರೋಪಿ ಪತಿಗೆ ಜಾಮೀನು

ಲಕ್ಷ್ಮಣಪುರಿ – ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ಪೀಠದ ನ್ಯಾಯಮೂರ್ತಿ ಪಂಕಜ್ ಭಾಟಿಯಾ ಅವರು ವರದಕ್ಷಿಣೆ ಕಿರುಕುಳದ ಪ್ರಕರಣವೊಂದರಲ್ಲಿ ಆರೋಪಿ ಪತಿಗೆ ಜಾಮೀನು ಮಂಜೂರು ಮಾಡಿದ್ದರು. ಈ- ಆದೇಶವನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಮಾಡಿದ ನಂತರ, ಸರ್ವೋಚ್ಚ ನ್ಯಾಯಾಲಯವು ನ್ಯಾಯಮೂರ್ತಿ ಭಾಟಿಯಾ ಅವರು ನೀಡಿದ್ದ ನಿರ್ಧಾರವನ್ನು ರದ್ದುಗೊಳಿಸಿ ಕೆಲವು ಕಠಿಣ ಮಾತನ್ನು ಹೇಳಿತು. ನಂತರ ನ್ಯಾಯಮೂರ್ತಿ ಭಾಟಿಯಾ ಅವರು ಮಾತನಾಡಿ, ನಮ್ಮ ಬಗ್ಗೆ ಮಾಡಿದ ಟಿಪ್ಪಣಿಗಳಿಂದ ನಮಗೆ ಬೇಸರವಾಗಿದ್ದು, ನಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಹೇಳಿದರು. ಯಾವುದೇ ನ್ಯಾಯಾಧೀಶರ ಆದೇಶವನ್ನು ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸುವುದು ಸಾಮಾನ್ಯ ವಿಷಯವಾಗಿದೆ; ಆದರೆ ಸಂಬಂಧಿತ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನಮ್ಮ ವಿರುದ್ಧ ಮಾಡಿದ ಟಿಪ್ಪಣಿಗಳು ನಮ್ಮ ಮನೋಬಲವನ್ನು ಕುಂದಿಸುವಂತದ್ದು ಮತ್ತು ಭಯ ಹುಟ್ಟಿಸುವಂತದ್ದಾಗಿವೆ ಎಂದು ನ್ಯಾಯಮೂರ್ತಿ ಪಂಕಜ್ ಭಾಟಿಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
೧. ನ್ಯಾಯಮೂರ್ತಿ ಪಂಕಜ್ ಭಾಟಿಯಾ ಅವರು ವರದಕ್ಷಿಣೆ ಕಿರುಕುಳದ ಒಂದು ಪ್ರಕರಣದಲ್ಲಿ ೧೦ ಅಕ್ಟೋಬರ್ ೨೦೨೫ ರಂದು ಆರೋಪಿ ಪತಿಗೆ ಜಾಮೀನು ಮಂಜೂರು ಮಾಡಿದ್ದರು. ಗಂಟಲು ಹಿಸುಕಿದ ಕಾರಣದಿಂದಲೇ ಮಹಿಳೆಯ ಸಾವನ್ನಪ್ಪಿದಳು ಎಂದು ಈ ಪ್ರಕರಣದಲ್ಲಿ ದಾಖಲಾಗಿತ್ತು. ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸಂತ್ರಸ್ತೆಯ ಪರ ವಾದಿಸಿದ ವಕೀಲ ಚೇತರಾಮ ವರ್ಮಾ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಈ ಜಾಮೀನು ಆದೇಶವನ್ನು ಸವಾಲು ಮಾಡಿದರು.
೨. ಸರ್ವೋಚ್ಚ ನ್ಯಾಯಾಲಯವು ಅವಲೋಕನ ಮಾಡಿದ್ದೇನೆಂದರೆ, ನ್ಯಾಯಮೂರ್ತಿ ಭಾಟಿಯಾ ಅವರ ಆದೇಶದಲ್ಲಿ ಜಾಮೀನು ಮಂಜೂರು ಮಾಡಲು ಕೇವಲ ಇಷ್ಟೇ ಕಾರಣವನ್ನು ನಮೂದಿಸಲಾಗಿತ್ತು – ಆರೋಪಿ ಪತಿಯು ೨೭ ಜುಲೈ ೨೦೨೫ ರಿಂದ ಕಾರಾಗೃಹದಲ್ಲಿದ್ದನು ಮತ್ತು ಅವನಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ.
೩. ಇದರ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಸಂಬಂಧಿತ ಜಾಮೀನು ಆದೇಶವನ್ನು ರದ್ದುಗೊಳಿಸುತ್ತಾ ಹೀಗೆ ಹೇಳಿತು, ಈ ಆದೇಶವು ಇತ್ತೀಚಿನ ಕಾಲದಲ್ಲಿ ಸರ್ವೋಚ್ಚ ನ್ಯಾಯಾಲಯವು ಕಂಡ ಅತ್ಯಂತ ನಿರಾಶಾದಾಯಕ ಆದೇಶಗಳಲ್ಲಿ ಒಂದಾಗಿದೆ. ಈ ಆದೇಶದ ಮೂಲಕ ಉಚ್ಚ ನ್ಯಾಯಾಲಯವು ನಿಖರವಾಗಿ ಏನು ಹೇಳಲು ಬಯಸುತ್ತಿದೆ? ನ್ಯಾಯಾಲಯವು ತನ್ನ ವಿವೇಚನೆಯನ್ನು ಎಲ್ಲಿ ಬಳಸಿದೆ?
೪. ಕೇವಲ ಪ್ರತಿವಾದಿಯ ವಾದಗಳ ಮೇಲೆ ಮತ್ತು ಆರೋಪಿಯು ಕಾರಾಗೃಹದಲ್ಲಿ ಕಳೆದ ಕಾಲಾವಧಿಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ, ಎಂದು ಸರ್ವೋಚ್ಚ ನ್ಯಾಯಾಲಯ ಟಿಪ್ಪಣಿ ಮಾಡಿದೆ.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ