
ನವ ದೆಹಲಿ – ಕಳೆದ ವರ್ಷ ದೆಹಲಿಯ ಕೆಂಪು ಕೋಟೆಯ ಸಮೀಪ ನಡೆದ ಭೀಕರ ಬಾಂಬ್ ಸ್ಫೋಟವು ಒಂದು ದೊಡ್ಡ ದೇಶವ್ಯಾಪಿ ಪಿತೂರಿಯ ಭಾಗವಾಗಿದ್ದು, ಅದರ ಹಿಂದೆ ‘ವೈಟ್ ಕಾಲರ್’ ಭಯೋತ್ಪಾದಕ ಮಾಡ್ಯೂಲ್‌ನ (ಇದರಲ್ಲಿ ಭಯೋತ್ಪಾದಕರು ಸಾಮಾನ್ಯ ಜನರಂತೆ ಜನರ ಮಧ್ಯೆ ವಾಸಿಸುತ್ತಾರೆ ಮತ್ತು ಜನನಿಬಿಡ ಪ್ರದೇಶಗಳಲ್ಲಿ ದಾಳಿ ನಡೆಸಿ ಪರಾರಿಯಾಗುತ್ತಾರೆ) ಕೈವಾಡ ಇರುವುದು ಸ್ಪಷ್ಟವಾಗಿದೆ. ಸುಶಿಕ್ಷಿತ ಮತ್ತು ವೃತ್ತಿಪರ ಹಿನ್ನೆಲೆಯುಳ್ಳ ವೈದ್ಯರು ಒಂದಾಗಿ ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ‘ಅನ್ಸಾರ್ ಅಂತರಿಮ್’ ಎಂಬ ಹೊಸ ಭಯೋತ್ಪಾದಕ ಸಂಘಟನೆಯನ್ನು ಹುಟ್ಟುಹಾಕಿದ್ದರು. ಈ ಮಾಡ್ಯೂಲ್‌ನ ಮುಖ್ಯ ಸೂತ್ರಧಾರಿ ಪುಲ್ವಾಮಾದ ಡಾ. ಉಮರ್-ಉನ್-ನಬಿ ಎಂದು ತಿಳಿದುಬಂದಿದೆ.
1. ಉಮರ್ ಕಳೆದ ನವೆಂಬರ್ 10, 2025 ರಂದು ಕೆಂಪು ಕೋಟೆಯ ಹೊರಗಡೆ ಸ್ಫೋಟಕ ತುಂಬಿದ ನಾಲ್ಕು ಚಕ್ರದ ವಾಹನದ ಮೂಲಕ ಸ್ಫೋಟ ನಡೆಸಿದ್ದನು, ಇದರಲ್ಲಿ 10 ನಿರಪರಾಧಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ಉಮರ್ 2016 ರಿಂದ ಕಟ್ಟರ್ ವಿಚಾರಧಾರೆಯಿಂದ ಪ್ರೇರಿತನಾಗಿದ್ದನು ಮತ್ತು ಈ ಮೊದಲು ಎರಡು ಬಾರಿ ಭಯೋತ್ಪಾದಕ ಗುಂಪುಗಳನ್ನು ಸೇರಲು ಪ್ರಯತ್ನಿಸಿದ್ದನು.
2. ಏಪ್ರಿಲ್ 2022 ರಲ್ಲಿ ಶ್ರೀನಗರದಲ್ಲಿ ನಡೆದ ರಹಸ್ಯ ಸಭೆಯಲ್ಲಿ ಈ ಪಿತೂರಿಯ ಬೀಜ ಬಿತ್ತಲಾಗಿತ್ತು. ಈ ಸಭೆಯಲ್ಲಿ ಮುಜಮ್ಮಿಲ್ ಗನಿ, ಉಮರ್-ಉನ್-ನಬಿ, ಆದಿಲ್ ರಾಥೆರ್ ಮತ್ತು ಮೌಲ್ವಿ ಇರ್ಫಾನ್ ಅವರಂತಹ ಸಂಶಯಿತರು ಸೇರಿ ‘ಅನ್ಸಾರ್ ಅಂತರಿಮ್’ ಸ್ಥಾಪಿಸಲು ನಿರ್ಧರಿಸಿದ್ದರು. ಇದರಲ್ಲಿ ಆದಿಲ್‌ನನ್ನು ‘ಅಮೀರ್’ ಅಂದರೆ ಪ್ರಮುಖನನ್ನಾಗಿ, ಇರ್ಫಾನ್‌ನನ್ನು ಉಪಪ್ರಮುಖ ಮತ್ತು ಮುಜಮ್ಮಿಲ್ ಗನಿಯನ್ನು ಖಜಾಂಚಿಯಾಗಿ ನೇಮಿಸಲಾಗಿತ್ತು.
3. ಹಳೆಯ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಕಡಿತಗೊಂಡಿದ್ದರಿಂದ ಈ ಸುಶಿಕ್ಷಿತ ಯುವಕರು ತಮ್ಮದೇ ಆದ ಹೊಸ ಮಾಡ್ಯೂಲ್ ರೂಪಿಸಿದ್ದರು. ಅಲ್-ಖೈದಾಗೆ ಸಂಬಂಧಿಸಿದ ‘ಅನ್ಸಾರ್’ ಎಂಬ ಪದವನ್ನು ಬಳಸಿಕೊಂಡು ಅವರು ಭೀತಿ ಹರಡಲು ಪ್ರಯತ್ನಿಸಿದ್ದರು.
ಸಂಪಾದಕೀಯ ನಿಲುವುಯಾವುದಾದರೊಂದು ಭಯೋತ್ಪಾದಕ ಸಂಘಟನೆಯನ್ನು ಹತ್ತಿಕ್ಕಿದಾಗ ಹೊಸ ಭಯೋತ್ಪಾದಕ ಸಂಘಟನೆಯು ಉದಯಿಸುತ್ತದೆ. ಇದನ್ನು ತಡೆಯಬೇಕಾದರೆ, ಪಾಕಿಸ್ತಾನಕ್ಕೆ ಪಾಠ ಕಲಿಸುವುದರ ಜೊತೆಗೆ ಭಾರತದಲ್ಲಿನ ಮತಾಂಧರಿಗೆ ಅರ್ಥವಾಗುವ ಭಾಷೆಯಲ್ಲಿ ತಕ್ಕ ಶಿಕ್ಷೆ ನೀಡುವುದು ಅಗತ್ಯ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”