ನಾಲಿಗೆ ಹರಿ ಬಿಟ್ಟ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ !

ಬೆಂಗಳೂರು – ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ದೆವ್ವ ಆಗಿದ್ದರೆ, ಭಾಜಪ ಅದರ ನೆರಳಾಗಿದೆ. ನಾವು ನೆರಳಿನೊಂದಿಗೆ ಹೋರಾಡುತ್ತಿದ್ದೇವೆ, ದೆವ್ವದೊಂದಿಗೆ ಹೋರಾಡಿದರೆ ಮಾತ್ರ ದೇಶದ ಉದ್ಧಾರ ಸಾಧ್ಯ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಸಚಿವ ಹಾಗೂ ಕಾಂಗ್ರಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ. ನಗರದ ಗಾಂಧಿ ಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರ ‘ಬ್ಲಡ್ ಅಂಡ್ ಟಿಯರ್ಸ್ ಆಫ್ ದಿ ಕೋಸ್ಟ್’ (ಕರಾವಳಿಯ ರಕ್ತ ಮತ್ತು ಕಣ್ಣೀರು) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ರಾ.ಸ್ವ. ಸಂಘದ ಹಿಂದೆ ದೊಡ್ಡ ಮಟ್ಟದ ಅಕ್ರಮ ‘ಮನಿ ಲಾಂಡರಿಂಗ್’ (ಕಪ್ಪು ಹಣವನ್ನು ಬಿಳಿ ಮಾಡುವ ಪ್ರಕ್ರಿಯೆ) ದಂಧೆಯಿದೆ ಎಂದು ಪ್ರಿಯಾಂಕ್ ಖರ್ಗೆ ಈ ಸಂದರ್ಭದಲ್ಲಿ ಗಂಭೀರ ಆರೋಪ ಮಾಡಿದರು.
ಖರ್ಗೆ ಅವರು ಮಾತನಾಡಿ, ‘ನಾನು ಈಗ ರಾ.ಸ್ವ. ಸಂಘದ ಬಗ್ಗೆ ಸ್ವಲ್ಪ ಆಳವಾದ ಅಧ್ಯಯನ ಮಾಡುತ್ತಿದ್ದೇನೆ. ಸಂಘಕ್ಕೆ ‘ನಿಮ್ಮ ಬಳಿ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ?’ ಎಂದು ಕೇಳಿದರೆ ಅವರ ಬಳಿ ಉತ್ತರವಿಲ್ಲ. ಹಾಗೆಯೇ ‘ಸಂಘವು ನೋಂದಣಿಯಾಗಬೇಕು’ ಎಂದು ಹೇಳಿದರೆ, ‘ನೋಂದಣಿ ಮಾಡುವ ಅಗತ್ಯವಿಲ್ಲ, ಇದು ವ್ಯಕ್ತಿಗಳ ಸಂಘಟನೆ’ ಎಂದು ಸರಸಂಘಚಾಲಕ ಮೋಹನ್ ಭಾಗವತ್ ಹೇಳುತ್ತಾರೆ. ಇಂದು ಅಥವಾ ನಾಳೆ ಸಂಘದ ನೋಂದಣಿ ಆಗಲೇಬೇಕು. ನಾನು ಅದನ್ನು ಮಾಡಿಸುತ್ತೇನೆ,’’ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದುತ್ವನಿಷ್ಠ ಸಂಘಟನೆಯನ್ನು ದ್ವೇಷಿಸುವ ಕಾಂಗ್ರೆಸ್ ಸಚಿವರಿಗೆ ತಮ್ಮ ರಾಜ್ಯದಲ್ಲಿನ ಮತಾಂಧರ ಕೃತ್ಯಗಳ ಬಗ್ಗೆ ಗಮನಹರಿಸಲು ಸಮಯವಿಲ್ಲ. ಸಂಘದ ಹಿಂದೆ ಬೀಳುವ ಬದಲು ಸ್ವಲ್ಪ ಶಕ್ತಿಯನ್ನು ಮತಾಂಧರನ್ನು ಹದ್ದುಬಸ್ತಿನಲ್ಲಿಡಲು ಬಳಸಿದ್ದರೆ, ರಾಜ್ಯದಲ್ಲಿ ಈ ವೇಳೆಗೆ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುತ್ತಿತ್ತು! |
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!