
ಪ್ರಯಾಗ್‌ರಾಜ್ (ಉತ್ತರ ಪ್ರದೇಶ) – ಜಾತಿಯು ಜನ್ಮದಿಂದಲೇ ನಿರ್ಧರಿಸಲ್ಪಡುತ್ತದೆ ಮತ್ತು ಅಂತರ್ಜಾತಿ ವಿವಾಹ ಅಥವಾ ಮತಾಂತರದ ನಂತರವೂ ಅದು ಬದಲಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ’ಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ನಿರೀಕ್ಷಣೆಯನ್ನು ಮಾಡಿದೆ. ಈ ಪ್ರಕರಣವು ಬೇರೆ ಜಾತಿಯ ವ್ಯಕ್ತಿಯನ್ನು ವಿವಾಹವಾಗಿದ್ದ ಪರಿಶಿಷ್ಟ ಜಾತಿಯ ಮಹಿಳೆಗೆ ಸಂಬಂಧಿಸಿದ್ದಾಗಿದೆ.
ಏನಿದು ಪ್ರಕರಣ?
೧. ಆರೋಪಿಗಳು ತನಗೆ ಥಳಿಸಿದ್ದಾರೆ, ನಿಂದಿಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಮಹಿಳೆಯು ಆರೋಪಿಸಿದ್ದರು. ಈ ಘಟನೆಯಲ್ಲಿ ಮಹಿಳೆ ಸೇರಿದಂತೆ ಒಟ್ಟು ಮೂವರು ಗಾಯಗೊಂಡಿದ್ದರು. ಈ ಘಟನೆಯು ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿತ್ತು.
೨. ದೂರಿನಲ್ಲಿ ಹಲ್ಲೆ ಮತ್ತು ಜಾತಿ ನಿಂದನೆಯ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಹಾಗೂ ಮೂವರು ಗಾಯಗೊಂಡಿರುವುದು ದಾಖಲಾಗಿದೆ ಎಂದು ನ್ಯಾಯಾಲಯ ಗಮನಿಸಿದೆ. ಆದ್ದರಿಂದ ಮೇಲ್ಮನವಿಯಲ್ಲಿ ಯಾವುದೇ ಸಾರವಿಲ್ಲ ಮತ್ತು ಅದನ್ನು ವಜಾಗೊಳಿಸುವುದು ಸೂಕ್ತ ಎಂದು ನ್ಯಾಯಾಲಯ ಹೇಳಿದೆ.
೩. ಮೇಲ್ಮನವಿದಾರರು (ಆರೋಪಿಗಳು) ವಾದ ಮಂಡಿಸುತ್ತಾ, “ಸದರಿ ಮಹಿಳೆಯು ಮೂಲತಃ ಬಂಗಾಳದ ನಿವಾಸಿಯಾಗಿದ್ದು, ಅಲ್ಲಿ ಆಕೆ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ್ದಳು; ಆದರೆ ಈಗ ಆಕೆ ಜಾಟ್ ಸಮುದಾಯದ ವ್ಯಕ್ತಿಯನ್ನು ವಿವಾಹವಾಗಿದ್ದಾಳೆ. ಈ ವಿಷಯವನ್ನು ಮರೆಮಾಚಿ ಆಕೆ ಇನ್ನೂ ತನ್ನನ್ನು ಪರಿಶಿಷ್ಟ ಸಮುದಾಯದ ಸದಸ್ಯೆ ಎಂದು ಬಿಂಬಿಸಿಕೊಂಡು ದೂರು ದಾಖಲಿಸಿದ್ದಾಳೆ,” ಎಂದು ವಾದಿಸಿದರು. ಅವರ ಪ್ರಕಾರ, ಜಾಟ್ ಸಮುದಾಯದ ವ್ಯಕ್ತಿಯನ್ನು ವಿವಾಹವಾದ ನಂತರ ಆಕೆ ತನ್ನ ಮೂಲ ಜಾತಿಯನ್ನು ಕಳೆದುಕೊಂಡು ಪತಿಯ ಜಾತಿಗೆ ಸೇರ್ಪಡೆಯಾಗುತ್ತಾಳೆ. ಆದ್ದರಿಂದ ಆಕೆಯ ದೂರಿನ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಕ್ರಮ ಕೈಗೊಳ್ಳುವುದು ಕಾನೂನುಬದ್ಧವಲ್ಲ ಮತ್ತು ಅದನ್ನು ರದ್ದುಗೊಳಿಸಬೇಕು ಎಂದು ಅವರು ಕೋರಿದರು.
೪. ನ್ಯಾಯಾಲಯವು ಈ ಎಲ್ಲಾ ವಾದಗಳನ್ನು ತಳ್ಳಿಹಾಕಿತು. ಜಾಟ್ ಸಮುದಾಯದ ವ್ಯಕ್ತಿಯನ್ನು ವಿವಾಹವಾದ ನಂತರ ಮಹಿಳೆ ತನ್ನ ಜಾತಿಯನ್ನು ಕಳೆದುಕೊಂಡಳು ಎಂಬ ವಾದವು ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಒಬ್ಬ ವ್ಯಕ್ತಿಯು ಮತಾಂತರ ಹೊಂದಬಹುದು, ಆದರೆ ಆತನ ಜಾತಿ ಬದಲಾಗುವುದಿಲ್ಲ. ವಿವಾಹದಿಂದಲೂ ಜಾತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಆದ್ದರಿಂದ ಆರೋಪಿಗಳ ಈ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದ ಹೈಕೋರ್ಟ್, ಅವರ ಮೇಲ್ಮನವಿಯನ್ನು ವಜಾಗೊಳಿಸಿತು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!