|

ಪುಣೆ – ಇಲ್ಲಿನ ಪೈಗಂಬರ್ ನದಾಫ್ ಎಂಬಾತನು ಕ್ರೈಸ್ತ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ, ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒತ್ತಾಯಿಸಿದ್ದಾನೆ. ಮದುವೆಯ ಆಮಿಷವೊಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಅಷ್ಟೇ ಅಲ್ಲದೆ, ಮದುವೆಯ ಬಗ್ಗೆ ವಿಚಾರಿಸಲು ಹೋದಾಗ ಆಕೆಯ ಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಪೈಗಂಬರ್ ಮತ್ತು ಆತನ ಕುಟುಂಬಸ್ಥರು ಪ್ರಯತ್ನಿಸಿದ್ದಾರೆ. ಈ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳಲು ಪೊಲೀಸರು ಆರಂಭದಲ್ಲಿ ಮೀನಾಮೇಷ ಮಾಡಿದರು.
Love Jihad in Kondhwa, Pune. 📉
An attempt was made to set a Christian girl on fire for resisting forced conversion. 🔥✝️
🚨 FIR registered only after Hindu organisations intervened.
Accused: Paigambar Nadaf
❓ Why do police act only after protests?pic.twitter.com/pEhk4bERjs
— Sanatan Prabhat (@SanatanPrabhat) February 10, 2026
೧. ೩ ವರ್ಷಗಳ ಹಿಂದೆ ಯುವತಿಗೆ ‘ಇನ್‌ಸ್ಟಾಗ್ರಾಮ್’ ಮೂಲಕ ಪೈಗಂಬರ್ ನದಾಫ್ ಎಂಬ ಮತಾಂಧನ ಪರಿಚಯವಾಗಿತ್ತು. ಆತ ಮದುವೆಯ ಆಮಿಷವೊಡ್ಡಿ ಆಕೆಯ ವಿಶ್ವಾಸ ಗಳಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದನು. ನಂತರ ಮತಾಂತರಕ್ಕಾಗಿ ಒತ್ತಡ ಹೇರಲಾರಂಭಿಸಿದನು.
೨. ‘ನೀನು ಮದುವೆಯಾಗಬೇಕೆಂದರೆ ಇಸ್ಲಾಂ ಧರ್ಮವನ್ನೇ ಸ್ವೀಕರಿಸಬೇಕು, ಬುರ್ಖಾ ಧರಿಸಬೇಕು ಮತ್ತು ನಮ್ಮ ಧಾರ್ಮಿಕ ಪದ್ಧತಿಗಳನ್ನೇ ಅನುಸರಿಸಬೇಕು’ ಎಂದು ಆಕೆಗೆ ಒತ್ತಾಯಿಸುತ್ತಿದ್ದನು. ಆಕೆ ಬುರ್ಖಾ ಧರಿಸದಿದ್ದಾಗ ಆಕೆಗೆ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು.
೩. ಕೆಲವು ದಿನಗಳ ಹಿಂದೆ ಸಂತ್ರಸ್ತೆಯು ಮದುವೆಯ ಬಗ್ಗೆ ಚರ್ಚಿಸಲು ಆರೋಪಿಯ ಮನೆಗೆ ಹೋದಾಗ, ಪೈಗಂಬರ್ ನದಾಫ್ ಮತ್ತು ಆತನ ಮನೆಯವರು ಆಕೆಯನ್ನು ಕೊಲ್ಲಲು ಯತ್ನಿಸಿದರು. ‘ನಾನು ನಿನ್ನನ್ನು ಬಿಟ್ಟುಬಿಡುತ್ತೇನೆ, ನಿನಗೆ ಬೇಕಾದುದನ್ನು ಮಾಡಿಕೊ’ ಎಂದು ಬೆದರಿಸುತ್ತಾ ಆಕೆಯ ಕಣ್ಣುಗಳಿಗೆ ಮತ್ತು ಮೈಮೇಲೆ ಪೆಟ್ರೋಲ್ ಸುರಿದು ಜೀವಂತವಾಗಿ ಸುಡಲು ಯತ್ನಿಸಿದನು. ಸಂತ್ರಸ್ತೆಯು ಸಮಯಪ್ರಜ್ಞೆಯಿಂದ ತನ್ನನ್ನು ತಾನು ರಕ್ಷಿಸಿಕೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಪೊಲೀಸರ ಉದಾಸೀನತೆ!
ಸಂತ್ರಸ್ತೆಯು ಈ ಹಿಂದೆ ಹಲವು ಬಾರಿ ಪೊಲೀಸ್ ಠಾಣೆಗೆ ಹೋಗಿದ್ದರೂ; ಆರಂಭದಲ್ಲಿ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ ಎಂದು ಆಕೆ ಗಂಭೀರ ಆರೋಪ ಮಾಡಿದ್ದಾಳೆ. ಅಂತಿಮವಾಗಿ ಹಿಂದೂ ಸಂಘಟನೆಗಳು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ ನಂತರವೇ ಆರೋಪಿ ಪೈಗಂಬರ್ ನದಾಫ್ ವಿರುದ್ಧ ಕೊಂಡವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಪಾದಕೀಯ ನಿಲುವು
|
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”