ಪಾಕಿಸ್ತಾನ ಮತ್ತು ಬಾಂಗ್ಲಾದೇಶಿ ಜಿಹಾದಿ ಮುಸಲ್ಮಾನರಿಂದಾಗಿ ಗ್ರೀಸ್‌ ನಲ್ಲಿ ಅಕ್ರಮ ಮಸೀದಿಗಳ ವಿರುದ್ಧ ಕ್ರಮ ಆರಂಭ ! Greece Mosque Closure

ಮೊದಲ ಹಂತದಲ್ಲಿ ಗ್ರೀಸ್‌ ನ ಅಥೆನ್ಸನಲ್ಲಿನ ೬೦ ಮಸೀದಿಗಳಿಗೆ ಬೀಗ ಜಡಿಯಲಾಗಿದೆ !

ಗ್ರೀಸ್‌ನ ವಲಸೆ ಮತ್ತು ಆಶ್ರಯ ಸಚಿವ ಥಾನೋಸ್ ಪ್ಲೆವ್ರಿಸ್

ಅಥೆನ್ಸ್ (ಗ್ರೀಸ್) – ಹೆಚ್ಚುತ್ತಿರುವ ಭಯೋತ್ಪಾದನಾ ಚಟುವಟಿಕೆಗಳಿಂದಾಗಿ ಗ್ರೀಸ್ ಸರಕಾರವು ರಾಜಧಾನಿ ಅಥೆನ್ಸನಲ್ಲಿನ ಅಕ್ರಮ ಮಸೀದಿಗಳನ್ನು ಮುಚ್ಚುವ ಅಭಿಯಾನವನ್ನು ಕೈಗೆತ್ತಿಕೊಂಡಿದೆ. ಮೊದಲ ಹಂತದಲ್ಲಿ ಅಧಿಕಾರಿಗಳು ರಾಜಧಾನಿಯಲ್ಲಿ ಕನಿಷ್ಠ ೬೦ ಅನಧಿಕೃತ ಮಸೀದಿಗಳನ್ನು ಮುಚ್ಚಿದ್ದಾರೆ ಮತ್ತು ಆ ಮಸೀದಿಗಳನ್ನು ನಡೆಸುತ್ತಿದ್ದವರನ್ನು ದೇಶದಿಂದ ಹೊರಹಾಕಲು ನಿರ್ಧರಿಸಿದ್ದಾರೆ.

ಗ್ರೀಸ್ ಅಧಿಕಾರಿಗಳ ಪ್ರಕಾರ, ಈ ಕ್ರಮವು ಭಯೋತ್ಪಾದಕರ ಆಶ್ರಯತಾಣಗಳಾಗಿ ಮಾರ್ಪಟ್ಟಿದ್ದ ಅನಧಿಕೃತ ಮಸೀದಿಗಳ ವಿರುದ್ಧವಾಗಿದೆ. ಇವುಗಳಲ್ಲಿ ಅನೇಕ ಅಕ್ರಮ ಮಸೀದಿಗಳನ್ನು ಗ್ರೀಕ್ ಕಾನೂನಿನ ಪ್ರಕಾರ ಅಗತ್ಯವಿರುವ ಕಡ್ಡಾಯ ಅನುಮತಿಯಿಲ್ಲದೆ ನಿರ್ಮಿಸಲಾಗಿತ್ತು. ಈ ಕಾನೂನಿನ ಪ್ರಕಾರ ಕೇವಲ ಗ್ರೀಸ್ ಅಥವಾ ಯುರೋಪಿಯನ್ ಯೂನಿಯನ್ ನಾಗರಿಕರ ನೇತೃತ್ವದ ನೋಂದಾಯಿತ ಸಂಸ್ಥೆಗಳು ಮಾತ್ರ ಪ್ರಾರ್ಥನಾ ಮಂದಿರಗಳನ್ನು ನಿರ್ಮಿಸಲು ಅಥವಾ ನಡೆಸಲು ಅರ್ಜಿ ಸಲ್ಲಿಸಬಹುದು.

೧. ಇತ್ತೀಚಿನ ವರ್ಷಗಳಲ್ಲಿ ಗ್ರೀಸ್‌ಗೆ ವಲಸೆ ಬಂದ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ನಾಗರಿಕರು ಅನೇಕ ಅಕ್ರಮ ಮಸೀದಿಗಳನ್ನು ನಡೆಸುತ್ತಿದ್ದಾರೆ ಎಂದು ಗ್ರೀಸ್ ಸರಕಾರದ ತನಿಖೆಯಿಂದ ತಿಳಿದುಬಂದಿದೆ.

೨. ಈ ಸ್ಥಳಗಳನ್ನು ಕಟ್ಟರತಾವಾದಿ ವಿಚಾರಧಾರೆಗಳನ್ನು ಪ್ರಚಾರ ಮಾಡಲು ಬಳಸಲಾಗುತ್ತಿತ್ತು ಮತ್ತು ಅವುಗಳ ಅನಿಯಂತ್ರಿತ ವಿಸ್ತರಣೆಯು ಯುರೋಪಿನ ೩ ಸಾವಿರ ವರ್ಷಗಳಿಗಿಂತಲೂ ಹೆಚ್ಚು ಹಳೆಯ ಇತಿಹಾಸ ಹೊಂದಿರುವ ಅಥೆನ್ಸ್ ನಗರಕ್ಕೆ ಅಪಾಯಕಾರಿಯಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

೩. ಗ್ರೀಸ್‌ ನಲ್ಲಿನ ಮುಸಲ್ಮಾನರ ಜನಸಂಖ್ಯೆಯು ದೇಶದ ಒಟ್ಟು ಜನಸಂಖ್ಯೆಯ ಸುಮಾರು ಶೇ. ೫ ರಷ್ಟಿದೆ, ಇದರಲ್ಲಿ ಬಹುಪಾಲು ಜನರು ಟರ್ಕಿ ಮೂಲದವರಾಗಿದ್ದಾರೆ. ಈ ಅಂಶವು ಧಾರ್ಮಿಕ ಆಚರಣೆಗೆ ಸಂಬಂಧಿಸಿದ್ದಲ್ಲ, ಬದಲಾಗಿ ಅಕ್ರಮ ನಿರ್ಮಾಣ ಮತ್ತು ಸಾಮಾಜಿಕ ಸಾಮರಸ್ಯವನ್ನು ಕೆಡಿಸುವ ಚಟುವಟಿಕೆಗಳ ದೃಷ್ಟಿಯಿಂದ ಕೂಡಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅನಧಿಕೃತ ಮಸೀದಿಗಳ ನಿರ್ಮಾಣದಿಂದಾಗಿ ಆ ಪ್ರದೇಶಗಳಲ್ಲಿ ಅಪರಾಧಗಳು ಹೆಚ್ಚಾಗಿದ್ದವು, ಅಲ್ಲದೆ ರಾತ್ರಿಯ ಸಮಯದಲ್ಲಿ ಮಸೀದಿಗಳ ಪರಿಸರವು ಮಹಿಳೆಯರಿಗೆ ಅಸುರಕ್ಷಿತವಾಗಿತ್ತು.

೪. ಗ್ರೀಸ್ ಸರಕಾರವು ಈ ನಿರ್ಧಾರವನ್ನು ಫೆಬ್ರವರಿ ಮತ್ತು ಏಪ್ರಿಲ್ ೨೦೨೫ ರಲ್ಲಿ ಅಥೆನ್ಸನಲ್ಲಿನ ಸರಕಾರಿ ಕಚೇರಿಗಳ ಹೊರಗೆ ನಡೆದ ಬಾಂಬ್ ಸ್ಫೋಟಗಳು ಸೇರಿದಂತೆ, ಭಯೋತ್ಪಾದಕ ಘಟಕಗಳಿಗೆ ಸಂಬಂಧಿಸಿದ ಸರಣಿ ಹಿಂಸಾತ್ಮಕ ಘಟನೆಗಳ ನಂತರ ತೆಗೆದುಕೊಂಡಿದೆ. ಅಧಿಕಾರಿಗಳು ಹೆಚ್ಚುತ್ತಿರುವ ಭದ್ರತಾ ಸವಾಲುಗಳಿಗೆ ಸಾಕ್ಷಿಯಾಗಿ ೨೦೨೪ ರ ವರ್ಷದಲ್ಲಿ ನಡೆದ ೩ ಭಯೋತ್ಪಾದಕ ದಾಳಿಗಳನ್ನು ಉಲ್ಲೇಖಿಸಿದ್ದಾರೆ.

೫. ಅಕ್ರಮ ಮಸೀದಿಗಳನ್ನು ನಡೆಸುವವರ ವಿರುದ್ಧ ಮೊಕದ್ದಮೆ ಹೂಡಲಾಗುವುದು, ಅವರು ಸೆರೆಮನೆ ವಾಸ ಅನುಭವಿಸಬೇಕಾಗುತ್ತದೆ ಮತ್ತು ಅಂತಿಮವಾಗಿ ಅವರನ್ನು ದೇಶದಿಂದ ಹೊರಹಾಕಲಾಗುವುದು ಎಂದು ಗ್ರೀಸ್ ಅಧಿಕಾರಿಗಳು ತಿಳಿಸಿದ್ದಾರೆ.

೬. ಈ ಕ್ರಮವು ಕಾನೂನಿನ ಆಡಳಿತವನ್ನು ಜಾರಿಗೆ ತರುವ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾಪಾಡುವ ಉದ್ದೇಶವನ್ನು ಹೊಂದಿದೆ ಎಂದು ಗ್ರೀಸ್ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.

ಸಂಪಾದಕೀಯ ನಿಲುವು

ಕಳೆದ ೩೫ ವರ್ಷಗಳಿಂದ ಭಾರತದಲ್ಲಿ ಜಿಹಾದಿ ಭಯೋತ್ಪಾದನೆ ನಡೆಯುತ್ತಿದ್ದರೂ, ಅದಕ್ಕಾಗಿ ಮಸೀದಿಗಳನ್ನು ಬಳಸಿಕೊಳ್ಳಲಾಗುತ್ತಿದ್ದರೂ ಭಾರತವು ಎಂದಿಗೂ ಇಂತಹ ಕ್ರಮ ಕೈಗೊಂಡಿಲ್ಲ, ಇದು ನಾಚಿಕೆಗೇಡಿನ ಸಂಗತಿ !