
ಜಾಲಂಧರ್ (ಪಂಜಾಬ್) – ಆಮ್ ಆದ್ಮಿ ಪಕ್ಷದ (‘ಆಪ್’ ನ) ನಾಯಕ ಲಕ್ಕಿ ಒಬೆರಾಯ್ (೫೨ ವರ್ಷ) ಅವರನ್ನು ಫೆಬ್ರವರಿ ೬ ರಂದು ಬೆಳಿಗ್ಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಒಬೆರಾಯ್ ಅವರು ಮಾಡೆಲ್ ಟೌನ್ ಪ್ರದೇಶದ ಗುರುದ್ವಾರಕ್ಕೆ ದರ್ಶನಕ್ಕಾಗಿ ಬಂದಿದ್ದರು. ಅವರು ಅಲ್ಲಿಂದ ಹೊರಬಂದು ತಮ್ಮ ಕಾರಿನಲ್ಲಿ ಕುಳಿತುಕೊಳ್ಳುತ್ತಿದ್ದಾಗ, ದುಷ್ಕರ್ಮಿಗಳು ಅವರ ಮೇಲೆ ಯದ್ವಾತದ್ವ ಗುಂಡಿನ ದಾಳಿ ನಡೆಸಿದರು. ಕುಟುಂಬಸ್ಥರು ಅವರನ್ನು ಗಂಭೀರ ಸ್ಥಿತಿಯಲ್ಲಿ ಮಾಡೆಲ್ ಟೌನ್‌ನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಕುಟುಂಬದವರಿಗೆ ಅದರ ಮೇಲೆ ನಂಬಿಕೆ ಇಡದೇ, ಅವರನ್ನು ನಗರದ ಶ್ರೀರಾಮ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿಯೂ ಅವರು ಮೃತಪಟ್ಟಿರುವುದನ್ನು ಖಚಿತಪಡಿಸಲಾಯಿತು.
#WATCH | Punjab | AAP's Lucky Oberoi shot dead in Jalandhar.
Dr Vishal, Sri Ram Hospital, says, "Lucky Oberoi was brought here around 8 am. On examination, it was found that 8-9 rounds were fired at him. He was given CPR and also put on a ventilator, but his life could not be… https://t.co/Zd6PT8A7kD pic.twitter.com/rgjbksE4V9
— ANI (@ANI) February 6, 2026
ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ಜಯಂತ್ ಪರಿ ಮಾತನಾಡಿ, ಪೊಲೀಸರು ಸಂಪೂರ್ಣ ಪ್ರದೇಶದಲ್ಲಿ ರಸ್ತೆ ತಡೆ ಹಾಗೂ ಸಂಚಾರ ನಿರ್ಬಂಧಗಳನ್ನು ಮಾಡಿದ್ದಾರೆ. ‘ಸಿಸಿಟಿವಿ’ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದಾಳಿಕೋರರನ್ನು ಬಂಧಿಸಲು ವಿವಿಧ ಕಡೆಗಳಲ್ಲಿ ಪೋಲೀಸ್ ವಾಹನಗಳನ್ನು ನಿಯೋಜಿಸಲಾಗಿದೆ. ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಮತ್ತು ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಆಡಳಿತ ಪಕ್ಷದ ನಾಯಕರೇ ಅಲ್ಲಿ ಸುರಕ್ಷಿತವಾಗಿಲ್ಲದಿರುವಾಗ, ಅಲ್ಲಿನ ಸಾಮಾನ್ಯ ಜನರ ರಕ್ಷಣೆ ಹೇಗೆ ಇರುವುದು, ಇದರ ವಿಚಾರ ಮಾಡದಿರುವದೇ ಒಳ್ಳೆಯದು! |
‘ಜೀವೋತ್ತಮ ವಿದ್ಯಾಪೀಠಂ’ ಸನಾತನ ಧರ್ಮದ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದೆ! – ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ
‘ಎನ್ಸಿಇಆರ್ಟಿ’ಯ 9ನೇ ತರಗತಿಯ ಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಮಾಹಿತಿ ಸೇರ್ಪಡೆ : NCERT Introduces Emergency
ಆರೋಪಿ ಭೀಮರಾವ್ ಕಾಂಬ್ಳೆಗೆ ದೋಷಿ ಎಂದು ತೀರ್ಪು; ಜೂನ್ 29 ರಂದು ಅಂತಿಮ ಶಿಕ್ಷೆ ಪ್ರಕಟ : Nasrapur Case
ಎನ್ಸಿಇಆರ್ಟಿ ಪಠ್ಯದಲ್ಲಿ ಮರಾಠಾ ಸಾಮ್ರಾಜ್ಯದ ಇತಿಹಾಸ: ಮಹಾರಾಷ್ಟ್ರ ಶಿಕ್ಷಣ ಸಚಿವರ ಆಗ್ರಹ
ಶ್ರೀರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ದೂರು ದಾಖಲು : ಇಬ್ಬರ ಬಂಧನ
ಘಾಜಿಯಾಬಾದ್ (ಉತ್ತರ ಪ್ರದೇಶ) ಇಲ್ಲಿ ವೈದ್ಯ ನದೀಮ್ ನಿಂದ ರೋಗಿಯ ತಪ್ಪು ರಕ್ತನಾಳ ಕತ್ತರಿಸಿದ! : Doctor cuts wrong Vein