
ಇಸ್ಲಾಮಾಬಾದ್ (ಪಾಕಿಸ್ತಾನ): ಪಾಕಿಸ್ತಾನವು ಪ್ರತಿ ವರ್ಷದಂತೆ ಈ ವರ್ಷವೂ ಫೆಬ್ರವರಿ 5 ರಂದು ವಿವಾದಿತ ‘ಕಾಶ್ಮೀರ ಐಕ್ಯತಾ ದಿನ’ವನ್ನು ಆಚರಿಸಿದೆ. ಪಾಕಿಸ್ತಾನದ ಪ್ರಧಾನ ಮಂತ್ರಿ ಶಹಬಾಜ್ ಶರೀಫ್ ಮತ್ತು ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಅವರು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಮತ್ತೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ. ಪಾಕಿಸ್ತಾನಿ ಸೇನೆಯು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ, ಆಸಿಮ್ ಮುನೀರ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ನವೀದ್ ಅಶ್ರಫ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಜಹೀರ್ ಅಹ್ಮದ್ ಸಿದ್ಧು ಅವರು ಕಾಶ್ಮೀರ ಐಕ್ಯತಾ ದಿನದ ಸಂದರ್ಭದಲ್ಲಿ ಕಾಶ್ಮೀರಿ ಜನತೆಗೆ ಬೆಂಬಲ ಸೂಚಿಸಿದ್ದಾರೆಂದು ತಿಳಿಸಲಾಗಿದೆ. ಈ ಮೂವರು ಮುಖ್ಯಸ್ಥರು ಪಾಕಿಸ್ತಾನದ ಸಶಸ್ತ್ರ ಪಡೆಗಳ ಪರವಾಗಿ ಜಮ್ಮು-ಕಾಶ್ಮೀರದ ಜನರಿಗೆ ಬೆಂಬಲವನ್ನು ಘೋಷಿಸಿದ್ದಾರೆ.
1. ಪಾಕಿಸ್ತಾನದ ರಾಷ್ಟ್ರಾಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಮ್ಮ ಹೇಳಿಕೆಯಲ್ಲಿ, ಪಾಕಿಸ್ತಾನದವರು ಕಾಶ್ಮೀರಿ ಜನರ ಹೋರಾಟದಲ್ಲಿ ಅವರೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ ಎಂದು ಹೇಳಿದ್ದಾರೆ. ಕಾಶ್ಮೀರ ಐಕ್ಯತಾ ದಿನದ ಆಚರಣೆಯು 36 ವರ್ಷಗಳ ಹಿಂದೆ, ಅಂದರೆ 1989 ರಲ್ಲಿ ಬೆನಜೀರ್ ಭುಟ್ಟೋ ಅವರಿಂದ ಪ್ರಾರಂಭವಾಯಿತು. ಅಂದಿನಿಂದ ಈ ಕಾರ್ಯಕ್ರಮವು ಸತತವಾಗಿ ನಡೆಯುತ್ತಿದೆ.
2. ಪ್ರಧಾನ ಮಂತ್ರಿ ಶಹಬಾಜ್ ಶರೀಫ್ ತಮ್ಮ ಹೇಳಿಕೆಯ ಮೂಲಕ ಭಾರತವನ್ನು ಟೀಕಿಸಲು ಯತ್ನಿಸಿದರು. ಶಹಬಾಜ್ ವಿಶೇಷವಾಗಿ ಭಾರತದ ಕಾಶ್ಮೀರ ನೀತಿಯ ಬಗ್ಗೆ ಹಲವು ಆರೋಪಗಳನ್ನು ಮಾಡಿದರು. ಇದೇ ವೇಳೆ ಅವರು ಅಂತರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡುತ್ತಾ, ಕಾಶ್ಮೀರ ವಿಷಯದಲ್ಲಿ ಭಾರತದ ಮೇಲೆ ಜಾಗತಿಕ ಮಟ್ಟದಲ್ಲಿ ಒತ್ತಡ ಹೇರಬೇಕೆಂದು ಕೂಡ ಮತ್ತೊಮ್ಮೆ ಒತ್ತಾಯಿಸಿದರು.
ಸಂಪಾದಕೀಯ ನಿಲುವುಭವಿಷ್ಯದಲ್ಲಿ ಕಾಶ್ಮೀರ ‘ಒಗ್ಗೂಡುವುದು’ ಸತ್ಯ; ಆದರೆ ಕಾಶ್ಮೀರ ಪಾಕಿಸ್ತಾನದೊಂದಿಗೆ ವಿಲೀನವಾಗುವುದಿಲ್ಲ, ಪಾಕಿಸ್ತಾನ ಆಕ್ರಮಿತ ಕಾಶ್ಮೀರವು (PoK) ಭಾರತದೊಂದಿಗೆ ವಿಲೀನಗೊಳ್ಳಲಿದೆ ಎಂಬುದನ್ನು ಪಾಕಿಸ್ತಾನಕ್ಕೆ ತಿಳಿಸಬೇಕಿದೆ! |
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!