‘ಸನಾತನ ಪ್ರಭಾತ್’ ವರದಿಯ ಪರಿಣಾಮ!

ಮುಂಬಯಿ, 30 ಜನವರಿ (ಸುದ್ದಿ) – ಮಹಾರಾಷ್ಟ್ರ ವಿಧಾನಭವನದ ವಿವಿಧ ಮಹಡಿಗಳಲ್ಲಿರುವ ಕಾರಿಡಾರ್‌ಗಳಲ್ಲಿ ಹಲವು ವರ್ಷಗಳಿಂದ ಪುಸ್ತಕಗಳು ಮತ್ತು ಕಾಗದಪತ್ರಗಳಿದ್ದವು. ಧೂಳು ಹಿಡಿದು ಬಿದ್ದಿದ್ದ ಈ ವಸ್ತುಗಳನ್ನು ಕೊನೆಗೂ ವಿಧಾನಮಂಡಲದ ಆಡಳಿತ ಮಂಡಳಿಯು ತೆರವುಗೊಳಿಸಿದೆ. ಇವುಗಳನ್ನು ಗೋದಾಮಿನಲ್ಲಿ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಆಡಳಿತದ ಮುಖ್ಯ ಕಟ್ಟಡದಲ್ಲಿನ ಕಾಗದಪತ್ರಗಳ ಅವ್ಯವಸ್ಥೆಯ ಬಗ್ಗೆ ದೈನಿಕ ‘ಸನಾತನ ಪ್ರಭಾತ್’ 18 ಜುಲೈ 2025 ರ ಸಂಚಿಕೆಯಲ್ಲಿ ಛಾಯಾಚಿತ್ರಗಳೊಂದಿಗೆ ವರದಿಯನ್ನು ಪ್ರಕಟಿಸಿತ್ತು. ವಿಧಾನಮಂಡಲದ ಆಡಳಿತ ಮಂಡಳಿಯು ಕೊನೆಗೂ ಇದನ್ನು ಗಮನಕ್ಕೆ ತೆಗೆದುಕೊಂಡು, ಸುಧಾರಿತ ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಿದೆ.
|
|
|
‘ಸನಾತನ ಪ್ರಭಾತ್’ನಲ್ಲಿ ವರದಿ ಪ್ರಕಟವಾದ ನಂತರ, ವಿಧಾನಮಂಡಲದ ಕಾರ್ಯದರ್ಶಿ ಜಿತೇಂದ್ರ ಭೋಲೆ ಅವರು ‘ಕಾರಿಡಾರ್‌ಗಳಲ್ಲಿ ಕಾಗದಪತ್ರಗಳು ಇರಬಾರದು’ ಎಂದು ಪ್ರತಿಕ್ರಿಯಿಸಿದ್ದರು. ಕಳೆದ 2 ತಿಂಗಳುಗಳಿಂದ ಕಾಗದಪತ್ರಗಳನ್ನು ವರ್ಗೀಕರಿಸಿ, ಎಲ್ಲಾ ಮಹಡಿಗಳು ಮತ್ತು ಕೊಠಡಿಗಳಲ್ಲಿನ ಅನಗತ್ಯ ಕಾಗದಪತ್ರಗಳನ್ನು ತೆಗೆಯುವ ಕೆಲಸ ನಡೆಯುತ್ತಿದೆ. ಈ ಬಗ್ಗೆ ಒಬ್ಬ ಆಡಳಿತಾಧಿಕಾರಿಯು ‘ವಿಧಾನಮಂಡಲದ ಕಾರ್ಯದರ್ಶಿಯವರು ನವೆಂಬರ್ 2025 ರಲ್ಲಿ ಕಾಗದಪತ್ರಗಳನ್ನು ತೆರವುಗೊಳಿಸಲು ಸೂಚನೆ ನೀಡಿದ್ದರು’ ಎಂಬ ಮಾಹಿತಿಯನ್ನು ‘ಸನಾತನ ಪ್ರಭಾತ್’ಗೆ ನೀಡಿದ್ದಾರೆ.
ಈ ಮೊದಲು ಹೀಗಿತ್ತು ವಿಧಾನಭವನದ ದುಸ್ಥಿತಿ!
1. ವಿಧಾನಭವನದ ಕೆಲವು ಮಹಡಿಗಳು ಕಾಗದಪತ್ರಗಳಿಂದ ತುಂಬಿ ಹೋಗಿದ್ದವು.
2. ಸಾಕಷ್ಟು ಕಪಾಟುಗಳು ಇಲ್ಲದ ಕಾರಣ ಕೊಠಡಿಗಳ ಮೇಜುಗಳ ಮೇಲೆ ಕಾಗದಪತ್ರಗಳ ರಾಶಿಯನ್ನು ಹಾಕಲಾಗಿತ್ತು.
3. ಕೆಲವು ಕೊಠಡಿಗಳಲ್ಲಿ ನೆಲದ ಮೇಲೂ ಕಾಗದಪತ್ರಗಳ ರಾಶಿ ಇತ್ತು.
4. ಕೊಠಡಿಗಳ ಹೊರಗಿನ ಕಾರಿಡಾರ್‌ಗಳಲ್ಲಿ ನೂರಾರು ಪುಸ್ತಕಗಳ ರಾಶಿ ಬಿದ್ದಿತ್ತು.
5. ಕೆಲವು ಮಹಡಿಗಳಲ್ಲಿ ಲಿಫ್ಟ್ ಹೊರಗಿನ ಜಾಗದಲ್ಲಿ ಪುಸ್ತಕಗಳ ರಾಶಿ ಇತ್ತು.
6. ಕೆಲವು ಮೆಟ್ಟಿಲುಗಳ ಮೂಲೆಗಳ ಸ್ಥಿತಿಯೂ ಹೀಗೆಯೇ ಆಗಿತ್ತು.
ಈಗ ಇವೆಲ್ಲಾ ಸ್ಥಳಗಳನ್ನು ಮುಕ್ತಗೊಳಿಸಲಾಗಿದೆ.


ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ