ಅಸ್ಸಾಂ: ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಕರೆ

(ಮಿಯಾ ಮುಸ್ಲಿಂ ಎಂದರೆ ಬೆಂಗಾಲಿ ಮುಸ್ಲಿಂ)
ಗುವಾಹಟಿ (ಅಸ್ಸಾಂ): ಹೌದು, ನಾವು ಮಿಯಾ ಮುಸ್ಲಿಮರ (ಬೆಂಗಾಲಿ ಮುಸ್ಲಿಮರ) ಮತಗಳನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ. ಅವರು ನಮ್ಮ ದೇಶದಲ್ಲಲ್ಲ, ಬಾಂಗ್ಲಾದೇಶದಲ್ಲಿ ಮತದಾನ ಮಾಡಲಿ. ಅವರು ಅಸ್ಸಾಂನಲ್ಲಿ ಮತದಾನ ಮಾಡದಂತೆ ನಾವು ವ್ಯವಸ್ಥೆ ಮಾಡುತ್ತಿದ್ದೇವೆ. ಮತದಾರರ ಪಟ್ಟಿಯ ವಿಶೇಷ ಆಳವಾದ ಪರಿಶೀಲನೆಯ ಬಗ್ಗೆ ಯಾವುದೇ ಅಸ್ಸಾಮಿ ನಾಗರಿಕನಿಗೆ ತೊಂದರೆಯಾಗುತ್ತಿಲ್ಲ; ಆದರೆ ಕೇವಲ ಮಿಯಾ ಮುಸ್ಲಿಮರಿಗೆ ಮಾತ್ರ ಈ ಪ್ರಕ್ರಿಯೆಯಿಂದ ತೊಂದರೆಯಾಗುತ್ತಿದೆ. ಮಿಯಾ ಮುಸ್ಲಿಮರಿಗೆ ತೊಂದರೆಯಾಗುತ್ತಿದ್ದರೆ ನಾವೇಕೆ ಅದರ ಬಗ್ಗೆ ಚಿಂತಿಸಬೇಕು? ಯಾರಾದರೂ ಮಿಯಾ ಮುಸ್ಲಿಂ ರಿಕ್ಷಾವಾಲಾ 5 ರೂಪಾಯಿ ಬಾಡಿಗೆ ಕೇಳಿದರೆ, ಅವರಿಗೆ 4 ರೂಪಾಯಿಗಳನ್ನೇ ನೀಡಿ. ಅವರಿಗೆ ತುಂಬಾ ತೊಂದರೆ ಕೊಡಿ, ಇದರಿಂದ ಅವರು ಅಸ್ಸಾಂ ಬಿಟ್ಟು ಮತ್ತೆ ಬಾಂಗ್ಲಾದೇಶಕ್ಕೆ ಹೋಗುತ್ತಾರೆಂದು ಅಸ್ಸಾಂನ ಬಿಜೆಪಿ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಅವರ ವಿರುದ್ಧ ಟೀಕೆ ಮಾಡಿವೆ.
‘ಪ್ರಧಾನ ಮಂತ್ರಿ ಮೋದಿ ಮತ್ತು ಮುಖ್ಯಮಂತ್ರಿ ಶರ್ಮಾ ಕ್ಷಮೆಯಾಚಿಸಲಿ!’ – ಕಾಂಗ್ರೆಸ್ ಒತ್ತಾಯ
ಕಾಂಗ್ರೆಸ್ ‘ಎಕ್ಸ್’ (X) ನಲ್ಲಿ ಶರ್ಮಾ ಅವರ ಈ ಹೇಳಿಕೆಯನ್ನು ಪ್ರಸಾರ ಮಾಡಿ, ಇದು ಅಸ್ಸಾಂ ಮುಖ್ಯಮಂತ್ರಿ ಮತ್ತು ನರೇಂದ್ರ ಮೋದಿ ಅವರ ನೆಚ್ಚಿನ ನಾಯಕ ಹಿಮಂತ ಬಿಸ್ವ ಶರ್ಮಾ ಅವರ ಅತ್ಯಂತ ಕೆಳಮಟ್ಟದ ಹೇಳಿಕೆಯಾಗಿದೆ ಎಂದು ಹೇಳಿದೆ. ಶರ್ಮಾ ಅವರು ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿ ಸಂವಿಧಾನವನ್ನೇ ತುಳಿಯುತ್ತಿದ್ದಾರೆ ಮತ್ತು ದ್ವೇಷದ ಬೀಜಗಳನ್ನು ಬಿತ್ತುತ್ತಿದ್ದಾರೆ. ಇದು ಬಿಜೆಪಿ-ಆರ್.ಎಸ್.ಎಸ್ ನ ದ್ವೇಷಪೂರಿತ ಮನಸ್ಥಿತಿಯಾಗಿದೆ. ಈ ಹೇಳಿಕೆಯು ಕೇವಲ ಅಶೋಭನೀಯವಷ್ಟೇ ಅಲ್ಲ, ಬಾಬಾಸಾಹೇಬರ ಸಂವಿಧಾನ ಮತ್ತು ನಮ್ಮ ಗಂಗಾ-ಜಮುನಿ ಸಂಸ್ಕೃತಿಯ (ಹಿಂದೂ ಮತ್ತು ಮುಸ್ಲಿಮರ ನಡುವಿನ ಏಕತೆಯನ್ನು ಪ್ರತಿಬಿಂಬಿಸುವ ಸಂಸ್ಕೃತಿ) ಮೇಲಿನ ನೇರ ದಾಳಿಯಾಗಿದೆ. ಸಂವಿಧಾನವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕನ್ನು ನೀಡಿದೆ. (ಅಕ್ರಮ ವಲಸೆ ಬರುವ ಮುಸ್ಲಿಮರನ್ನು ಹೊರಹಾಕುವುದು ಸಂವಿಧಾನದ ಪಾಲನೆಯಾಗಿದೆ. ಅದನ್ನು ಮಾಡದಿರುವುದು ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ ಮತ್ತು ಕಾಂಗ್ರೆಸ್ ನಿರಂತರವಾಗಿ ಈ ಅವಮಾನವನ್ನು ಮಾಡುತ್ತಾ ಬಂದಿದೆ ಮತ್ತು ಈಗಲೂ ಅದನ್ನೇ ಮಾಡಲು ಹೇಳುತ್ತಿದೆ – ಸಂಪಾದಕ). ಹಿಮಂತ ಬಿಸ್ವ ಶರ್ಮಾ ಅವರ ಈ ನಾಚಿಕೆಗೇಡಿನ ಹೇಳಿಕೆಗಾಗಿ ನರೇಂದ್ರ ಮೋದಿ ಮತ್ತು ಬಿಜೆಪಿ ಇಡೀ ದೇಶದ ಜನರ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.
ಮುಖ್ಯಮಂತ್ರಿ ಶರ್ಮಾ ಮುಸ್ಲಿಮರನ್ನು ಅವಮಾನಿಸುವ ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆ! – ಮೌಲಾನಾ ಬರೇಲ್ವಿ ಟೀಕೆ

‘ಆಲ್ ಇಂಡಿಯಾ ಮುಸ್ಲಿಂ ಜಮಾತ್’ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನು ಟೀಕಿಸುತ್ತಾ, ಶರ್ಮಾ ಅವರ ನಿಲುವು ಮುಸ್ಲಿಂ ವಿರೋಧಿಯಾಗಿದೆ ಎಂದು ಕರೆದರು. ಮುಖ್ಯಮಂತ್ರಿಯಾದಾಗಿನಿಂದ ಅವರು ನಿರಂತರವಾಗಿ ಮುಸ್ಲಿಮರನ್ನು ಗುರಿ ಮಾಡುತ್ತಿದ್ದಾರೆ. ಶರ್ಮಾ ಅವರು ಮುಸ್ಲಿಮರನ್ನು ಅಕ್ರಮ ವಲಸಿಗರು ಮತ್ತು ಬಾಂಗ್ಲಾದೇಶಿಯರು ಎಂದು ಕರೆಯುತ್ತಿದ್ದಾರೆ ಮತ್ತು ಮುಸ್ಲಿಮರ ಮೇಲೆ ಅನ್ಯಾಯ ಮಾಡುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅವರು ಮುಸ್ಲಿಮರ ವಿರುದ್ಧ ಹೆಚ್ಚು ಆಕ್ರಮಣಕಾರಿ ನಿಲುವು ತಳೆದಿದ್ದಾರೆ. ಅವರು ಮುಸ್ಲಿಮರನ್ನು ‘ಮಿಯಾ’ ಎಂದು ಸಂಬೋಧಿಸಿ ಅವಮಾನಿಸುತ್ತಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲೂ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಹಂಬಲ ಅವರಿಗಿದೆ. ಮುಸ್ಲಿಮರನ್ನು ಅವಮಾನಿಸುವಲ್ಲಿ ಅವರು ಎಲ್ಲಾ ದಾಖಲೆಗಳನ್ನು ಮುರಿದಿದ್ದಾರೆಂದು ಶಹಾಬುದ್ದೀನ್ ರಜ್ವಿ ಅವರು ಟೀಕಿಸಿದರು.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ