೭ ಹೊಸ ದೇವಸ್ಥಾನಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿ

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿನ ಶ್ರೀರಾಮಜನ್ಮಭೂಮಿ ಪರಿಸರದ ಸಂಪೂರ್ಣ ಅಭಿವೃದ್ಧಿಯನ್ನು ಸಮಗ್ರ ಮತ್ತು ಸರ್ವಸಮ್ಮತವಾದ ‘ಧಾರ್ಮಿಕ ಸಂಕೀರ್ಣ’ವನ್ನಾಗಿ ಮಾಡಲಾಗುತ್ತಿದೆ. ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸವು ಈ ಪರಿಸರದಲ್ಲಿ ೭ ಹೊಸ ದೇವಸ್ಥಾನಗಳನ್ನು ನಿರ್ಮಿಸಲು ಮತ್ತು ಅವುಗಳನ್ನು ಭಕ್ತರಿಗಾಗಿ ಮುಕ್ತಗೊಳಿಸಲು ಯೋಜನೆಯನ್ನು ಅಂತಿಮಗೊಳಿಸಿದೆ. ಈ ದೇವಸ್ಥಾನಗಳ ನಿರ್ಮಾಣ ಕಾರ್ಯವು ಅತ್ಯಂತ ವೇಗವಾಗಿ ನಡೆಯುತ್ತಿದೆ. ಈ ೭ ದೇವಸ್ಥಾನಗಳನ್ನು ರಾಮಾಯಣ ಕಾಲದ ಪ್ರಮುಖ ವ್ಯಕ್ತಿಗಳು ಮತ್ತು ಋಷಿಗಳಿಗೆ ಅರ್ಪಿಸಲಾಗುವುದು. ಇದರಲ್ಲಿ ಮಹರ್ಷಿ ವಾಲ್ಮೀಕಿ, ಮಹರ್ಷಿ ವಸಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ನಿಷಾದರಾಜ, ಮಾತಾ ಶಬರಿ ಮತ್ತು ದೇವಿ ಅಹಲ್ಯ ಇವರ ದೇವಸ್ಥಾನಗಳು ಸೇರಿವೆ. ಈ ದೇವಸ್ಥಾನಗಳ ಮೂಲಕ ರಾಮಾಯಣದ ಪ್ರತಿಯೊಂದು ಪ್ರಸಂಗ ಮತ್ತು ಸಮಾಜದ ಪ್ರತಿಯೊಂದು ವರ್ಗಕ್ಕೂ ಗೌರವ ನೀಡುವ ಪ್ರಯತ್ನ ಇದಾಗಿದೆ ಎಂದು ನ್ಯಾಸವು ಸ್ಪಷ್ಟಪಡಿಸಿದೆ. ಇದರಿಂದ ಭಕ್ತರಿಗೆ ರಾಮಾಯಣದ ದರ್ಶನದ ಅನುಭವ ಸಿಗಲಿದೆ.
ಪೂಜಾ ವಿಧಿವಿಧಾನಗಳಿಗಾಗಿ ಹೊಸ ಅರ್ಚಕರ ನೇಮಕಾತಿ
ಈ ದೇವಸ್ಥಾನಗಳಲ್ಲಿ ದೈನಂದಿನ ಪೂಜಾ ವಿಧಿವಿಧಾನಗಳು ಮತ್ತು ದರ್ಶನ ವ್ಯವಸ್ಥೆಯನ್ನು ಸುಗಮವಾಗಿ ನಡೆಸಲು ನ್ಯಾಸವು ಹೊಸ ಅರ್ಚಕರನ್ನು ನೇಮಿಸಿಕೊಳ್ಳಲು ನಿರ್ಧರಿಸಿದೆ. ಶ್ರೀರಾಮಮಂದಿರ ಪರಿಸರದಲ್ಲಿ ಶೀಘ್ರದಲ್ಲೇ ಅಂದಾಜು ೫೦ ಹೊಸ ಅರ್ಚಕರನ್ನು ನೇಮಿಸಲಾಗುವುದು. ಉಪ-ದೇವಸ್ಥಾನಗಳು ಆರಂಭವಾಗುವ ಮುನ್ನವೇ ಈ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಿದ್ಧತೆ ನಡೆದಿದ್ದು, ಎಲ್ಲಾ ಧಾರ್ಮಿಕ ವಿಧಿಗಳು ಶಾಸ್ತ್ರೋಕ್ತವಾಗಿ ನಡೆಯಲಿವೆ. ಸದ್ಯ ರಾಮಮಂದಿರದಲ್ಲಿ ೨೦ ಅರ್ಚಕರು ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸ ಉಪ-ದೇವಸ್ಥಾನಗಳು ನಿರ್ಮಾಣವಾದ ನಂತರ, ಪೂಜೆಗಾಗಿ ೩ ಪಾಳಿಗಳಲ್ಲಿ ಒಟ್ಟು ೪೨ ಅರ್ಚಕರ ಅವಶ್ಯಕತೆ ಇರಲಿದೆ. ಇದರ ಜೊತೆಗೆ, ಸಪ್ತ ಮಂಟಪಂ ಮತ್ತು ಕುಬೇರ ಟೀಲಾ ಪರಿಸರಕ್ಕಾಗಿ ೮ ಹೆಚ್ಚುವರಿ ಅರ್ಚಕರನ್ನು ನೇಮಿಸಲಾಗುವುದು.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!