ರಷ್ಯಾದಿಂದ ಉಕ್ರೇನ್ ರಾಜಧಾನಿ ಸೇರಿ 2 ಪ್ರಮುಖ ನಗರಗಳ ಮೇಲೆ ದಾಳಿ: 13 ಮಂದಿಗೆ ಗಾಯ Russia Ukraine War

ಕೀವ್ (ಉಕ್ರೇನ್) – ಕಳೆದ 4 ವರ್ಷಗಳಿಂದ ನಡೆಯುತ್ತಿರುವ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವ ಕುರಿತು ಇದುವರೆಗೂ ಯಾವುದೇ ಒಮ್ಮತ ಮೂಡಿಲ್ಲ. ಎರಡೂ ದೇಶಗಳು ಪರಸ್ಪರ ನಿರಂತರವಾಗಿ ದಾಳಿ ನಡೆಸುತ್ತಿವೆ. ಈಗ ರಷ್ಯಾ ಉಕ್ರೇನ್‌ನ ರಾಜಧಾನಿ ಕೀವ್ ಮತ್ತು ಖಾರ್ಕಿವ್ ಎಂಬ ಎರಡು ನಗರಗಳನ್ನು ಗುರಿಯಾಗಿಸಿಕೊಂಡಿದೆ. ಈ ದಾಳಿಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ.

೧. ಕೀವ್ ಮೇಯರ್ ವಿಟಾಲಿ ಕ್ಲಿಟ್ಸ್ಕೊ ನೀಡಿರುವ ಮಾಹಿತಿಯ ಪ್ರಕಾರ, ರಾಜಧಾನಿಯಲ್ಲಿ ಗಾಯಗೊಂಡ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

೨. ರಾಜಧಾನಿಯ ಮೇಲೆ ನಡೆದ ಈ ದಾಳಿಯಲ್ಲಿ ಡ್ರೋನ್ ಮತ್ತು ಕ್ಷಿಪಣಿ ಎಂಬ ಎರಡೂ ಶಸ್ತ್ರಾಸ್ತ್ರಗಳನ್ನು ಬಳಸಲಾಗಿದೆ ಎಂದು ಉಕ್ರೇನ್ ವಾಯುಸೇನೆ ಮಾಹಿತಿ ನೀಡಿದೆ. ಇದರಿಂದಾಗಿ ನೂರಾರು ವಸತಿ ಕಟ್ಟಡಗಳಲ್ಲಿನ ವಿದ್ಯುತ್ ಮತ್ತು ಹೀಟಿಂಗ್ (ಉಷ್ಣತೆ ನೀಡುವ) ವ್ಯವಸ್ಥೆ ಸ್ಥಗಿತಗೊಂಡಿದೆ. ತುರ್ತು ಸೇವಾ ಸಿಬ್ಬಂದಿಗಳು ನಿವಾಸಿಗಳ ಸೇವೆಯನ್ನು ಪುನರಾರಂಭಿಸಲು ಪ್ರಯತ್ನಿಸುತ್ತಿದ್ದಾರೆ.

೩. ಖಾರ್ಕಿವ್ ಮೇಯರ್ ಇಗೊರ್ ತೆರೆಖೋವ್ ನೀಡಿರುವ ಮಾಹಿತಿಯ ಪ್ರಕಾರ, ಡ್ರೋನ್ ಮೂಲಕ ನಿರಾಶ್ರಿತರ ವಸತಿಗೃಹ, ಒಂದು ಆಸ್ಪತ್ರೆ ಮತ್ತು ಪ್ರಸೂತಿ ಆಸ್ಪತ್ರೆಯ ಮೇಲೆ ದಾಳಿ ನಡೆಸಲಾಗಿದೆ.