
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಫೆಬ್ರವರಿ 12 ರಂದು ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಸುಮಾರು 17 ಕೋಟಿಗಿಂತಲೂ ಅಧಿಕ ಜನಸಂಖ್ಯೆ ಹೊಂದಿರುವ ಈ ದೇಶದಲ್ಲಿ, ಲಭ್ಯವಿರುವ ಮಾಹಿತಿಯ ಪ್ರಕಾರ ಒಟ್ಟು 80 ಹಿಂದೂ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರಲ್ಲಿ 12 ಮಂದಿ ಪಕ್ಷೇತರರಾಗಿದ್ದರೆ, 68 ಮಂದಿ ವಿವಿಧ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದಾರೆ. ಇವರಲ್ಲಿ 10 ಮಹಿಳಾ ಅಭ್ಯರ್ಥಿಗಳೂ ಸೇರಿದ್ದಾರೆ. ದೇಶದ ಒಟ್ಟು ಜನಸಂಖ್ಯೆ ಮತ್ತು ಅಲ್ಪಸಂಖ್ಯಾತರ ಸಂಖ್ಯೆಯನ್ನು ಗಮನಿಸಿದರೆ ಈ ಅಂಕಿ-ಅಂಶವು ಅತ್ಯಂತ ಕಡಿಮೆ ಎನ್ನಬಹುದು.
1. ಚುನಾವಣಾ ಆಯೋಗದ ಮಾಹಿತಿಪ್ರಕಾರ ಬಾಂಗ್ಲಾದೇಶ ಚುನಾವಣಾ ಆಯೋಗದ ಅಂಕಿ-ಅಂಶಗಳ ಪ್ರಕಾರ, ಅಲ್ಪಸಂಖ್ಯಾತ ಸಮುದಾಯದ 88 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅವರಲ್ಲಿ 5 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡರೆ, 3 ಅಭ್ಯರ್ಥಿಗಳು ನಂತರ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ. ಪರಿಣಾಮವಾಗಿ ಪ್ರಸ್ತುತ 80 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ರಸ್ತುತ ಚುನಾವಣಾ ಆಯೋಗದಲ್ಲಿ 60 ರಾಜಕೀಯ ಪಕ್ಷಗಳು ನೋಂದಾಯಿಸಲ್ಪಟ್ಟಿದ್ದು, ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ನೋಂದಣಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿದೆ.
2. ಈ ಚುನಾವಣೆಯಲ್ಲಿ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP), ಜಮಾತ್-ಎ-ಇಸ್ಲಾಮಿ ಸೇರಿದಂತೆ ಒಟ್ಟು 22 ರಾಜಕೀಯ ಪಕ್ಷಗಳು ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಎಡಪಂಥೀಯ ಪಕ್ಷಗಳು ಅತಿ ಹೆಚ್ಚು ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಬಾಂಗ್ಲಾದೇಶ ಕಮ್ಯುನಿಸ್ಟ್ ಪಾರ್ಟಿ 17 ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದು, ಇದು ಯಾವುದೇ ಪಕ್ಷವು ನೀಡಿದ ಗರಿಷ್ಠ ಸಂಖ್ಯೆಯಾಗಿದೆ.
3. ‘ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಐಕ್ಯ ಪರಿಷತ್ತಿನ’ ಜಂಟಿ ಅಧ್ಯಕ್ಷ ನಿರ್ಮಲ್ ರೊಸಾರಿಯೋ ಮಾತನಾಡಿ, “ಅಲ್ಪಸಂಖ್ಯಾತ ಸಮುದಾಯವು ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳದಿದ್ದರೆ ಮತ್ತು ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಸಾಧ್ಯವಾಗದಿದ್ದರೆ, ಅವರ ಹಕ್ಕುಗಳು, ಅಭಿವೃದ್ಧಿ ಮತ್ತು ಅಸ್ತಿತ್ವದ ಸಂಪೂರ್ಣ ರಕ್ಷಣೆ ಸಾಧ್ಯವಿಲ್ಲ” ಎಂದು ಹೇಳಿದರು. ಅವರು ಅಲ್ಪಸಂಖ್ಯಾತರು ಚುನಾವಣಾ ರಾಜಕೀಯ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳಲ್ಲಿ ಹೆಚ್ಚು ಸಕ್ರಿಯ ಪಾತ್ರ ವಹಿಸಬೇಕಾದ ಅಗತ್ಯವನ್ನು ಒತ್ತಿಹೇಳಿದರು.
4. ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (BNP) ಅಲ್ಪಸಂಖ್ಯಾತ ಸಮುದಾಯದ 6 ಅಭ್ಯರ್ಥಿಗಳಿಗೆ ಉಮೇದುವಾರಿಕೆ ನೀಡಿದೆ. ಇದರಲ್ಲಿ ಪಕ್ಷದ ಇಬ್ಬರು ಹಿರಿಯ ನಾಯಕರಿದ್ದಾರೆ. ಸ್ಥಾಯಿ ಸಮಿತಿಯ ಸದಸ್ಯ ಗಾಯೇಶ್ವರ ಚಂದ್ರ ರಾಯ್ ಢಾಕಾ-3 ರಿಂದ ಮತ್ತು ಉಪಾಧ್ಯಕ್ಷ ನಿತಾಯ್ ರಾಯ್ ಚೌಧರಿ ಮಗುರಾ-2 ರಿಂದ ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಕಪಿಲ್ ಕೃಷ್ಣ ಮಂಡಲ್ (ಬಾಗೇರ್‌ಹಟ್-1), ಸೋಮನಾಥ್ ಡೇ (ಬಾಗೇರ್‌ಹಟ್-4), ದೀಪೇನ್ ದಿವಾನ್ (ರಂಗಮತಿ) ಮತ್ತು ಸಚಿಂಗ್ ಪ್ರಯೂ (ಬಂದರ್ಬನ್) ಅವರು ಕಣದಲ್ಲಿದ್ದಾರೆ.
5. ರಾಷ್ಟ್ರೀಯ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಜಮಾತ್-ಎ-ಇಸ್ಲಾಮಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಕೃಷ್ಣ ನಂದಿ ಅವರು ಖುಲ್ನಾ-1 ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವು ಹಿಂದೂ ಪ್ರಾಬಲ್ಯದ ದಾಕೋಪ್ ಮತ್ತು ಬಟಿಯಾಘಾಟಾ ಉಪಜಿಲ್ಲೆಗಳನ್ನು ಒಳಗೊಂಡಿದೆ. ಕೃಷ್ಣ ನಂದಿ ಅವರು ಖುಲ್ನಾ ಜಿಲ್ಲೆಯ ದುಮುರಿಯಾ ಉಪಜಿಲ್ಲೆಯ ಚುಕ್‌ನಗರದ ನಿವಾಸಿಯಾಗಿದ್ದು, ದುಮುರಿಯಾ ಉಪಜಿಲ್ಲಾ ಜಮಾತ್‌ನ ಹಿಂದೂ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಖುಲ್ನಾ-1 ಕ್ಷೇತ್ರವು ಈ ಬಾರಿ ವಿಶೇಷವಾಗಿ ಸುದ್ದಿಯಲ್ಲಿದ್ದು, ಇಲ್ಲಿ ಒಟ್ಟು 8 ಅಲ್ಪಸಂಖ್ಯಾತ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಇದರಲ್ಲಿ ಜಮಾತ್, ಕಮ್ಯುನಿಸ್ಟ್ ಪಾರ್ಟಿ ಸಹಿತ 6 ಪಕ್ಷದ ಅಭ್ಯರ್ಥಿಗಳಿದ್ದು 2 ಸ್ವತಂತ್ರ ಅಭ್ಯರ್ಥಿಗಳಾಗಿ ಇದೇ ಸಮುದಾಯದಲ್ಲಿದ್ದಾರೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿ 80 ಹಿಂದೂಗಳಿಗೆ ಉಮೇದುವಾರಿಕೆ ಸಿಕ್ಕಿರುವುದೇ ಒಂದು ದೊಡ್ಡ ವಿಷಯ ಎಂದು ಹೇಳಬೇಕಾಗಿದೆ! |
ಯುಕ್ರೇನ್ ನಿಂದ ರಷ್ಯಾದ 12 ಪ್ರಾಂತ್ಯಗಳ ಮೇಲೆ ನೂರಾರು ಡ್ರೋನ್ ದಾಳಿ ! : Ukraine-Russia War
1985 ರಲ್ಲಿ ಏರ್ ಇಂಡಿಯಾದ ‘ಕನಿಷ್ಕ’ ವಿಮಾನದಲ್ಲಿ ಖಲಿಸ್ತಾನಿ ಭಯೋತ್ಪಾದಕರು ಸ್ಫೋಟ ನಡೆಸಿದ್ದರು! ಭಾರತೀಯ ಮೂಲದ 329 ಪ್ರಯಾಣಿಕರು ಸಾವನ್ನಪ್ಪಿದ್ದರು ! : Kanishka Blast
ಬಾಂಗ್ಲಾದೇಶದಲ್ಲಿ ಕಳೆದ ೫ ತಿಂಗಳಲ್ಲಿ ಹಿಂದೂಗಳ ವಿರುದ್ಧ ೬೪೫ ಅಪರಾಧಗಳು!
೧೦ ಸಾವಿರದಿಂದ ೧ ಲಕ್ಷ ಜನರು ಸಾವನ್ನಪ್ಪಿರುವ ಸಾಧ್ಯತೆ : Venezuela Earthquake
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಹತ್ಯೆಗೆ ‘ಮೊಸಾದ್’ ಸಂಚು ರೂಪಿಸಿತ್ತು!
ರಸ್ತೆಯಲ್ಲಿ ನಮಾಜ್ ಮತ್ತು ಅಜಾನ್ ನಿಷೇಧಿಸುವ ಚಿಂತನೆಯಲ್ಲಿ ಡೆನ್ಮಾರ್ಕ್ ಸರಕಾರ!