|

ಮುಂಬ್ರಾ (ಠಾಣೆ ಜಿಲ್ಲೆ) – ‘ಎ.ಐ.ಎಂ.ಐ.ಎಂ.’ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷದ ನೂತನ ನಗರಸಭೆ ಸದಸ್ಯೆ ಸಹರ್ ಶೇಖ್ ಅವರು ತಮ್ಮ ಲಿಖಿತ ಕ್ಷಮಾಪಣಾ ಪತ್ರವನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಇಲ್ಲಿ ನಡೆದ ಸಭೆಯೊಂದರಲ್ಲಿ ಅವರು ಪ್ರಚೋದನಾಕಾರಿ ಭಾಷಣ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಜಪ ನಾಯಕ ಕಿರೀಟ್ ಸೋಮಯ್ಯ, ಶಾಸಕ ನಿರಂಜನ್ ದಾವ್ಖರೆ ಸೇರಿದಂತೆ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸ್ ತನಿಖೆ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಸಹರ್ ಶೇಖ್ ಕ್ಷಮಾಪಣೆ ಪತ್ರ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ದೂರುದಾರರಿಗೆ ಲಿಖಿತವಾಗಿ ಮಾಹಿತಿ ನೀಡಿದ್ದಾರೆ. ಕ್ಷಮಾಪಣೆಯನ್ನು ಸ್ವೀಕರಿಸಿದ ನಂತರ ಈ ಪ್ರಕರಣವನ್ನು ಕೈಬಿಡಲಾಗಿದೆ.
“ಭವಿಷ್ಯದಲ್ಲಿ ಇಂತಹ ಹೇಳಿಕೆಗಳು ಪುನರಾವರ್ತನೆಯಾದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಹಿರಿಯ ಪೊಲೀಸ್ ನಿರೀಕ್ಷಕ ಅನಿಲ್ ಶಿಂದೆ ಅವರು ಕಿರೀಟ್ ಸೋಮಯ್ಯ ಅವರಿಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಿದ್ದಾರೆ.
सहर शेखच्या "माफीनामा"
AIMIM ऑल इंडिया मजलिस-ए-इत्तेहादुल मुस्लिमीन पक्षाचा सहर शेखनी हिंदुना चिथावणी देणाऱ्या
"हम मुंब्रा को हरा बना देंगे"
ह्या वक्तव्याबद्दल माफी मागितली.मुंब्रा पोलिसांनी माझा तक्रारी नंतर सहर शेखला नोटीस पाठवली होती. मी आज पाठपुरावा साठी मुंब्रा पोलिस… pic.twitter.com/ln9LaeESQe
— Kirit Somaiya (@KiritSomaiya) January 24, 2026
ಸಹರ್ ಶೇಖ್ ಕ್ಷಮಾಪಣಾ ಪತ್ರದಲ್ಲಿ ಏನಿದೆ?“ಮುಂಬ್ರಾದಲ್ಲಿ ನಡೆದ ಸಭೆಯಲ್ಲಿ ನಾನು ಬಳಸಿದ ವಾಕ್ಯವು ಪಕ್ಷದ ಧ್ವಜ ಮತ್ತು ಚಿಹ್ನೆಗೆ ಸಂಬಂಧಿಸಿದ್ದಾಗಿತ್ತು. ಯಾರ ಮನಸ್ಸನ್ನೂ ನೋಯಿಸುವ ಅಥವಾ ಸಾಮಾಜಿಕ ವಾತಾವರಣವನ್ನು ಹಾಳು ಮಾಡುವ ಉದ್ದೇಶ ನನಗಿರಲಿಲ್ಲ. ನಾವು ತ್ರಿವರ್ಣಕ್ಕಾಗಿ ಬದುಕುತ್ತೇವೆ ಮತ್ತು ತ್ರವರ್ಣಕ್ಕಾಗಿಯೇ ಸಾಯುತ್ತೇವೆ. ನನ್ನ ಹೇಳಿಕೆಯಿಂದ ಯಾರ ಭಾವನೆಗಳಿಗೆ ಧಕ್ಕೆಯಾಗಿದ್ದರೆ, ನಾನು ಅವರಲ್ಲಿ ಬಹಿರಂಗವಾಗಿ ಮತ್ತು ಲಿಖಿತ ರೂಪದಲ್ಲಿ ಕ್ಷಮೆಯಾಚಿಸುತ್ತೇನೆ.” |
ಸಂಪಾದಕೀಯ ನಿಲುವು
|
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಹಿಂದೂಗಳ ತೀವ್ರ ವಿರೋಧದ ನಂತರ ಕಲಾವಿದೆಯಿಂದ ಕ್ಷಮೆಯಾಚನೆ!