
ಢಾಕಾ (ಬಾಂಗ್ಲಾದೇಶ) – ಇಲ್ಲಿನ ಜಗನ್ನಾಥ ವಿಶ್ವವಿದ್ಯಾಲಯದ ಹಿಂದೂ ವಿದ್ಯಾರ್ಥಿ ಆಕಾಶ ಸರಕಾರ ಎಂಬಾತನ ಶವವು ಸಂಶಯಾಸ್ಪದ ಸ್ಥಿತಿಯಲ್ಲಿ ಅವನ ಕೋಣೆಯಲ್ಲಿ ಪತ್ತೆಯಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆಯ ಪ್ರಕರಣ ಎಂದು ಹೇಳಲಾಗುತ್ತಿದ್ದರೂ, ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯಗಳ ಹಿನ್ನೆಲೆಯಲ್ಲಿ ಈ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪೊಲೀಸರು ತಿಳಿಸಿರುವಂತೆ, ಆಕಾಶನ ಕೋಣೆಯ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿತ್ತು. ಬಹಳ ಹೊತ್ತು ಬಾಗಿಲು ತಟ್ಟಿದ ನಂತರ ಬಾಗಿಲನ್ನು ಮುರಿದು ನೋಡಿದಾಗ, ಕೋಣೆಯಲ್ಲಿ ಆಕಾಶನ ಶವವು ಫ್ಯಾನಿಗೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
𝐒𝐮𝐬𝐩𝐢𝐜𝐢𝐨𝐮𝐬 𝐝𝐞𝐚𝐭𝐡𝐬 𝐨𝐟 𝟐 𝐇𝐢𝐧𝐝𝐮 𝐬𝐭𝐮𝐝𝐞𝐧𝐭𝐬 𝐢𝐧 𝐁𝐚𝐧𝐠𝐥𝐚𝐝𝐞𝐬𝐡 𝐫𝐚𝐢𝐬𝐞 𝐚𝐥𝐚𝐫𝐦
Akash Sarkar, a Hindu student of Jagannath University, was found dead in his room in Dhaka; police call it suicide, but concerns persist amid rising anti-Hindu… https://t.co/KajfyLUVVY pic.twitter.com/oKFdsZeTdX
— Sanatan Prabhat (@SanatanPrabhat) January 21, 2026
ನೌಗಾಂವನಲ್ಲಿ ಹಿಂದೂ ಯುವಕನ ಶವ ಪತ್ತೆ
ಒಂದು ವಾರದ ಹಿಂದೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದೆ. ನೌಗಾಂವನ ಕಾಲಿತಲಾ ಸ್ಮಶಾನ ಘಾಟ್ ಬಳಿಯ ನದಿಯಲ್ಲಿ ಆ ವಿದ್ಯಾರ್ಥಿಯ ಶವ ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜನವರಿಯಿಂದ ಈ ವಿದ್ಯಾರ್ಥಿಯು ಕಾಣೆಯಾಗಿದ್ದನು. ಈ ವಿದ್ಯಾರ್ಥಿಯ ಹೆಸರು ಅಭಿ ಎಂದಾಗಿದ್ದು, ಆತನು ಮ್ಯಾನೇಜಮೆಂಟ್ ವಿಷಯವನ್ನು ಓದುತ್ತಿದ್ದನು. ಅಭಿ ನಾಪತ್ತೆಯಾದ ನಂತರ ಅವನ ತಂದೆ ರಮೇಶಚಂದ್ರ ಅವರು ಮಗನನ್ನು ಹುಡುಕಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಪೊಲೀಸರಿಗೂ ದೂರು ನೀಡಿದ್ದರು; ಆದರೆ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಮಗನ ಸಾವು ಹೇಗೆ ಸಂಭವಿಸಿತು ಎಂಬುದು ಇದುವರೆಗೆ ಅವರಿಗೆ ತಿಳಿದುಬಂದಿಲ್ಲ.
ಅಮೆರಿಕದ ಸಂಸತ್ತಿನಲ್ಲಿ ಇರಾನ್ ವಿರುದ್ಧದ ಯುದ್ಧ ನಿಲ್ಲಿಸುವ ಪ್ರಸ್ತಾವನೆ ಅಂಗೀಕಾರ
India-Nepal Border Dispute : ನೇಪಾಳದೊಂದಿಗಿನ ಗಡಿ ವಿವಾದದಲ್ಲಿ ಮೂರನೇ ಪಕ್ಷದ ಅಗತ್ಯವಿಲ್ಲ! – ಭಾರತ
Trump Tariff : ಭಾರತ ಸೇರಿದಂತೆ ಹಲವು ದೇಶಗಳ ಮೇಲೆ ಶೇ. ೧೨.೫% ರಷ್ಟು ಹೆಚ್ಚುವರಿ ಆಮದು ಸುಂಕ ವಿಧಿಸಲಿರುವ ಟ್ರಂಪ್
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಬಾಂಗ್ಲಾದೇಶದ ವಿರೋಧದಿಂದಾಗಿ ನುಸುಳುಕೋರರನ್ನು ಗಡಿಯಿಂದ ಹಿಂತಿರುಗಿಸುವುದು ಕಷ್ಟವಾಗುತ್ತಿದೆ !