‘ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಹುತೇಕ ಪ್ರಕರಣಗಳು ಧಾರ್ಮಿಕ ದ್ವೇಷದ್ದಲ್ಲ, ಬದಲಿಗೆ ಅಪರಾಧೀ ಸ್ವರೂಪದ್ದು. (ಅಂತೆ) : Bangladesh

ಬಾಂಗ್ಲಾದೇಶದ ಮಧ್ಯಂತರ ಸರಕಾರದ ವಾರ್ಷಿಕ ವರದಿಯಲ್ಲಿನ ಹೇಳಿಕೆ

ಮುಹಮ್ಮದ್ ಯೂನಸ್ (ಎಡ) ಮತ್ತು ಹಿಂದೂಗಳನ್ನು ಕೊಂದ (ಬಲ)

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಮಧ್ಯಂತರ ಸರಕಾರವು ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂಧಿಸಿದ ಘಟನೆಗಳ ಕುರಿತು ೧ ವರ್ಷದ ಅವಲೋಕನ ವರದಿಯನ್ನು ಪ್ರಕಟಿಸಿದೆ.

ಈ ಅವಧಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂಧಿಸಿದ ಒಟ್ಟು ೬೪೫ ಪ್ರಕರಣಗಳು ದಾಖಲಾಗಿವೆ ಎಂದು ಇದರಲ್ಲಿ ನಮೂದಿಸಲಾಗಿದೆ. ಈ ೬೪೫ ಪ್ರಕರಣಗಳ ಪೈಕಿ ಕೇವಲ ೭೧ ಘಟನೆಗಳನ್ನು ಮಾತ್ರ ಧಾರ್ಮಿಕ ದ್ವೇಷದ ಸ್ವರೂಪದ್ದೆಂದು ಪರಿಗಣಿಸಲಾಗಿದೆ, ಉಳಿದ ೫೭೪ ಪ್ರಕರಣಗಳು ಧಾರ್ಮಿಕ ದ್ವೇಷದ್ದಲ್ಲ ಎಂದು ನಮೂದಿಸಲಾಗಿದೆ. ಧಾರ್ಮಿಕ ದ್ವೇಷದ ಘಟನೆಗಳಲ್ಲಿ ಪ್ರಮುಖವಾಗಿ ಧಾರ್ಮಿಕ ಸ್ಥಳಗಳು ಅಥವಾ ವಿಗ್ರಹಗಳ ಧ್ವಂಸಗಳಂತಹ ಪ್ರಕರಣಗಳು ಸೇರಿವೆ. ಈ ವರದಿಯನ್ನು ದೇಶಾದ್ಯಂತದ ಪೊಲೀಸರ ದಾಖಲೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ.

. ಉಳಿದ ಬಹುತೇಕ ಪ್ರಕರಣಗಳ ಹಿಂದೆ ಭೂವಿವಾದ, ನೆರೆಹೊರೆಯವರ ನಡುವಿನ ಜಗಳ, ರಾಜಕೀಯ ದ್ವೇಷ, ಕಳ್ಳತನ, ಲೈಂಗಿಕ ದೌರ್ಜನ್ಯ ಮತ್ತು ವೈಯಕ್ತಿಕ ಶತ್ರುತ್ವದಂತಹ ಕಾರಣಗಳಿದ್ದು, ಅವುಗಳಿಗೆ ನೇರವಾಗಿ ಧರ್ಮದೊಂದಿಗೆ ಸಂಬಂಧವಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

. ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನೂಸ್ ಅವರು ಮಾತನಾಡಿ, ಪ್ರತಿಯೊಂದು ಘಟನೆಯೂ ಗಂಭೀರವಾಗಿದ್ದು, ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ; ಆದರೆ ತಪ್ಪು ಮಾಹಿತಿ ಮತ್ತು ಭೀತಿಯ ವಾತಾವರಣ ನಿರ್ಮಾಣವಾಗಬಾರದು ಎನ್ನುವ ಕಾರಣಕ್ಕೆ ನಿಖರವಾದ ವರ್ಗೀಕರಣ ಅಗತ್ಯವಾಗಿದೆ. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಬಹುತೇಕ ಪ್ರಕರಣಗಳು ಎಲ್ಲಾ ನಾಗರಿಕರ ಮೇಲೆ ಪರಿಣಾಮ ಬೀರುವ ಕಾನೂನು ಮತ್ತು ಸುವ್ಯವಸ್ಥೆಯ ಸವಾಲುಗಳ ಭಾಗವಾಗಿದೆ. ಸಂವಿಧಾನದ ಪ್ರಕಾರ ಮುಸಲ್ಮಾನ, ಹಿಂದೂ, ಬೌದ್ಧ, ಕ್ರೈಸ್ತ ಮತ್ತು ಎಲ್ಲಾ ಸಮುದಾಯಗಳ ಸಂರಕ್ಷಣೆ ಹಾಗೂ ನ್ಯಾಯವನ್ನು ಖಚಿತಪಡಿಸುವುದು ಸರಕಾರದ ಕಾನೂನುಬದ್ಧ ಮತ್ತು ನೈತಿಕ ಹೊಣೆಗಾರಿಕೆಯಾಗಿದೆ ಎಂದು ಹೇಳಿದರು.

. ವರದಿಯ ಪ್ರಕಾರ, ಅನೇಕ ಪ್ರಕರಣಗಳಲ್ಲಿ ಪೊಲೀಸರು ಔಪಚಾರಿಕ ದೂರುಗಳನ್ನು ದಾಖಲಿಸಿಕೊಂಡಿದ್ದು, ಕೆಲವು ಕಡೆ ಬಂಧನಗಳನ್ನು ಮಾಡಲಾಗಿದೆ, ಉಳಿದ ಪ್ರಕರಣಗಳ ತನಿಖೆ ನಡೆಯುತ್ತಿದೆ. ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ಅಥವಾ ಸೂಕ್ಷ್ಮ ಘಟನೆಗಳ ಬಗ್ಗೆ ವಿಶೇಷ ಗಮನ ನೀಡಲಾಗಿದೆ.

ಪ್ರತಿ ವರ್ಷ ಹಿಂಸಾತ್ಮಕ ಅಪರಾಧಗಳಲ್ಲಿ ೩ ಸಾವಿರದಿಂದ ೩ ಸಾವಿರದ ೫೦೦ ಜನರ ಸಾವು !

ರಾಷ್ಟ್ರಮಟ್ಟದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸವಾಲುಗಳು ಇನ್ನೂ ಇವೆ ಎಂಬುದನ್ನು ಸರಕಾರ ಒಪ್ಪಿಕೊಂಡಿದೆ. ಪ್ರತಿ ವರ್ಷ ಸುಮಾರು ೩ ಸಾವಿರದಿಂದ ೩ ಸಾವಿರದ ೫೦೦ ಜನರು ಹಿಂಸಾತ್ಮಕ ಅಪರಾಧಗಳಲ್ಲಿ ಸಾವನ್ನಪ್ಪುತ್ತಿದ್ದಾರೆ; ಆದರೆ ತುರ್ತು ಕ್ರಮಗಳಿಂದಾಗಿ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ ಎಂಬುದು ಸರಕಾರದ ವಾದವಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆದ ದಾಳಿಗಳು ಧರ್ಮದ್ವೇಷದಿಂದಲೇ ಪ್ರೇರಿತವಾಗಿವೆ ಎಂಬುದು ಜಗಜ್ಜಾಹೀರಾಗಿದೆ. ಸರಕಾರ ಇಂತಹ ಎಷ್ಟು ಸುಳ್ಳು ವರದಿಗಳನ್ನು ಪ್ರಕಟಿಸಿದರೂ ಸತ್ಯ ಬದಲಾಗದು !