ಈಶ್ವರೇಚ್ಛೆಯ ಭಾವವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಅಹಂಕಾರವು ದೂರವಾಗುವುದು !

ಮುಂಬಯಿ – ನಮ್ಮೆಲ್ಲರನ್ನು ನಡೆಸುವ ತತ್ತ್ವ ಒಂದೇ, ಅದುವೇ ಧರ್ಮ! ಎಲ್ಲಿಯವರೆಗೆ ಧರ್ಮವು ಭಾರತವರ್ಷವನ್ನು ನಡೆಸುತ್ತದೆಯೋ, ಅಲ್ಲಿಯವರೆಗೆ ಭಾರತವು ವಿಶ್ವಗುರುವಾಗಿ ಉಳಿಯುವುದು; ಏಕೆಂದರೆ ಜಗತ್ತಿನ ಬಳಿ ಇಂತಹ ಧರ್ಮವೇ ಇಲ್ಲ. ಸಾವಿರಾರು ವರ್ಷಗಳಿಂದ ಅನೇಕ ಸಂತರು ಈ ಧರ್ಮವನ್ನು ಜಾಗೃತಗೊಳಿಸಿದ್ದಾರೆ. ಈಗ ಭಾರತವೇ ಈ ಧರ್ಮವನ್ನು ಜಗತ್ತಿಗೆ ನೀಡುವ ಕಾರ್ಯವನ್ನು ಮಾಡಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ ಅವರು ಅಭಿಪ್ರಾಯಪಟ್ಟರು. ಅವರು ಘಾಟಕೊಪರ (ಪೂರ್ವ) ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದ ಸಂದರ್ಭದಲ್ಲಿ ಆಚಾರ್ಯಶ್ರೀ ವಿಜಯ ಅಕ್ಷಯಬೋಧಿಸೂರಿಶ್ವರಜೀ ಮಹಾರಾಜರು ಮತ್ತು ಆಚಾರ್ಯಶ್ರೀ ವಿಜಯ ಮಹಾಬೋಧಿಸೂರಿಶ್ವರಜೀ ಮಹಾರಾಜರು ಉಪಸ್ಥಿತರಿದ್ದರು.
ಪ.ಪೂ. ಸರಸಂಘಚಾಲಕರು ತಮ್ಮ ಮಾತನ್ನು ಮುಂದುವರೆಸಿಹೀಗೆಂದರು:
೧. ಭಾರತದಲ್ಲಿ ರಾಜಕೀಯ ಅಥವಾ ಸಾಮಾಜಿಕ ಜನರಲ್ಲ, ಬದಲಿಗೆ ಆಧ್ಯಾತ್ಮಿಕ ಜನರೇ ನೇತೃತ್ವ ವಹಿಸುತ್ತಾರೆ. ಆದ್ದರಿಂದಲೇ ಸಂತರ ಪ್ರವಚನಗಳು ನಡೆಯುತ್ತಿರುವಾಗ, ಅವರ ರಕ್ಷಣೆಯ ಕಾರ್ಯವನ್ನು ಸಂಘವು ಮಾಡುತ್ತದೆ.
೨. ನಾವು ಮಾಡುತ್ತಿರುವ ಕಾರ್ಯಕ್ಕೆ ನಾವು ಕೇವಲ ವಾಹಕರು ಅಷ್ಟೆ. ಈ ಕಾರ್ಯವು ಈಶ್ವರನದ್ದಾಗಿದೆ. ಆದ್ದರಿಂದ ಅಹಂಕಾರದಿಂದ ಮುಕ್ತರಾಗಿ ನಾವು ಈ ಕಾರ್ಯವನ್ನು ಮಾಡುತ್ತಿರಬೇಕು. ಅಹಂಕಾರದಿಂದ ಮುಕ್ತರಾಗುವುದು ಕಠಿಣವಾಗಿರುತ್ತದೆ; ಆದರೆ ‘ಈಶ್ವರನ ಇಚ್ಛೆಯಿಂದಲೇ ಈ ಕಾರ್ಯಕ್ಕಾಗಿ ನಮ್ಮ ಆಯ್ಕೆಯಾಗಿದೆ’ ಎನ್ನುವ ಭಾವವನ್ನು ಮನಸ್ಸಿನಲ್ಲಿಟ್ಟುಕೊಂಡರೆ ಅಹಂಕಾರವು ದೂರವಾಗಲು ಸಾಧ್ಯವಿದೆ.
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister