ಬಾಂಗ್ಲಾದೇಶ: ಮುಸಲ್ಮಾನರಿಂದ ಹಿಂದೂ ಮಿಠಾಯಿ ವ್ಯಾಪಾರಿಯ ಹತ್ಯೆ Bangladesh Hindu Merchant Liton Chandra Murder

ಹಿಂದೂ ನೌಕರನ ಮೇಲಿನ ಹಲ್ಲೆ ತಡೆಯಲು ಹೋದಾಗ ಕೊಲೆ

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಗಾಜಿಪುರ ಜಿಲ್ಲೆಯಲ್ಲಿ ಲಿಟನ್ ಚಂದ್ರ ಘೋಷ್ ಎಂಬ ೫೫ ವರ್ಷದ ಹಿಂದೂ ಮಿಠಾಯಿ ವ್ಯಾಪಾರಿಯನ್ನು ಹತ್ಯೆ ಮಾಡಲಾಗಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರನ ಮೇಲೆ ದಾಳಿಯಾದಾಗ, ಅದನ್ನು ತಡೆಯಲು ಘೋಷ್ ಅವರು ಮಧ್ಯಪ್ರವೇಶಿಸಿದರು; ಆಗ ಘೋಷ್ ಅವರ ಮೇಲೆ ಸಲಿಕೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಯಿತು. ಈ ಘಟನೆಯ ವೇಳೆ ನೆರೆದಿದ್ದವರು ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

ಲಿಟನ್ ಚಂದ್ರ ಘೋಷ್ ಅವರು ಬಾರಾನಗರ ರಸ್ತೆ ಪ್ರದೇಶದಲ್ಲಿ ‘ಬೈಸಾಖಿ ಸ್ವೀಟ್ ಮೀಟ್ ಆಂಡ್ ಹೋಟೆಲ್’ ಎಂಬ ಹೆಸರಿನ ಅಂಗಡಿ ನಡೆಸುತ್ತಿದ್ದರು. ಜನವರಿ ೧೭ ರಂದು ಬೆಳಿಗ್ಗೆ ಸುಮಾರು ೧೧ ಗಂಟೆಗೆ ಮಾಸೂಮ್ ಮಿಯಾ ಎಂಬ ಹುಡುಗ ಅಂಗಡಿಗೆ ಬಂದಿದ್ದನು. ಆಗ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅನಂತ ದಾಸ ಎಂಬ ೧೭ ವರ್ಷದ ನೌಕರನೊಂದಿಗೆ ಮಾಸೂಮ್ ವಾಗ್ವಾದ ಮಾಡಿದನು. ಈ ವಾಗ್ವಾದವು ಪರಸ್ಪರ ನಿಂದನೆ ಮತ್ತು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಕೂಡಲೇ ಮಾಸೂಮ್‌ ನ ತಂದೆ ಮಹಮ್ಮದ್ ಮತ್ತು ತಾಯಿ ಮಾಜೇದಾ ಅಲ್ಲಿಗೆ ಆಗಮಿಸಿದರು. ಅವರು ಕೂಡ ಮಾಸೂಮ್‌ ಜೊತೆ ಸೇರಿ ಅನಂತ ದಾಸನ ಮೇಲೆ ಹಲ್ಲೆ ಮಾಡಲಾರಂಭಿಸಿದರು.

ಆಗ ಲಿಟನ್ ಘೋಷ್ ಅವರು ಅನಂತನನ್ನು ರಕ್ಷಿಸಲು ಮಧ್ಯೆ ಪ್ರವೇಶಿಸಿದಾಗ, ಮಾಸೂಮ್, ಮಹಮ್ಮದ್ ಮತ್ತು ಮಾಜೇದಾ ಈ ಮೂವರು ಸೇರಿ ಲಿಟನ್ ಘೋಷ್ ಅವರ ಮೇಲೆ ಸಲಿಕೆಯಿಂದ ದಾಳಿ ಮಾಡಿದರು. ಗಾಯ ಎಷ್ಟು ಗಂಭೀರವಾಗಿತ್ತೆಂದರೆ, ಲಿಟನ್ ಘೋಷ್ ಅವರು ಸ್ಥಳದಲ್ಲೇ ಮೃತಪಟ್ಟರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದ ಹಿಂದೂಗಳನ್ನು ಕೊಲ್ಲಲು ಮತಾಂಧ ಮುಸಲ್ಮಾನರಿಗೆ ಯಾವುದೇ ಕಾರಣದ ಅವಶ್ಯಕತೆ ಇರುವುದಿಲ್ಲ. ಅವರ ಗುರಿ ಕೇವಲ ಹಿಂದೂಗಳ ನರಸಂಹಾರ ಮಾಡುವುದೇ ಆಗಿದೆ !