ಬಾಂಗ್ಲಾದೇಶ: ಹಿಂದೂ ಶಿಕ್ಷಕನ ಮನೆಗೆ ಬೆಂಕಿ ಹಾಕಿದ ಮುಸ್ಲಿಮರು! Bangladesh Hindu Teacher House Attacked

ಸಿಲಹಟ್ (ಬಾಂಗ್ಲಾದೇಶ): ಜಿಲ್ಲೆಯ ಗೋವಾಯಿನ ಘಾಟ್‌ನ ಬಹೋರ್ ಗ್ರಾಮದಲ್ಲಿ ವಾಸಿಸುವ ಶಿಕ್ಷಕ ಬೀರೇಂದ್ರ ಕುಮಾರ್ ಡೇ ಅವರ ಮನೆಯ ಮೇಲೆ ಮುಸ್ಲಿಮರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಬೀರೇಂದ್ರ ಕುಮಾರ್ ಅವರು ಸ್ಥಳೀಯವಾಗಿ ‘ಝುನು ಸರ್’ ಎಂದೇ ಚಿರಪರಿಚಿತರಾಗಿದ್ದರು. ಈ ಬೆಂಕಿಯಿಂದಾಗಿ ಅವರ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದೆ. ಅದೃಷ್ಟವಶಾತ್ ಘಟನೆಯ ಸಮಯದಲ್ಲಿ ಕುಟುಂಬದ ಸದಸ್ಯರು ಸುರಕ್ಷಿತವಾಗಿ ಮನೆಯಿಂದ ಹೊರಬಂದಿದ್ದಾರೆ. ಈ ಪ್ರಕರಣದಲ್ಲಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಈ ಹಿಂದೆಯೂ ಬೀರೇಂದ್ರ ಕುಮಾರ್ ಡೇ ಅವರ ಮನೆಯ ಮೇಲೆ ದಾಳಿ ನಡೆದಿತ್ತು. ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿರುವುದರಿಂದ ಈ ಪ್ರದೇಶದ ಹಿಂದೂ ಕುಟುಂಬಗಳಲ್ಲಿ ತೀವ್ರ ಭಯ ಮತ್ತು ಅಸುರಕ್ಷತೆಯ ವಾತಾವರಣ ನಿರ್ಮಾಣವಾಗಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿ ಅಳಿವಿನಂಚಿನಲ್ಲಿರುವ ಹಿಂದೂಗಳು!