ಬಂಗಾಳದ ಜಾದವಪುರ ವಿಶ್ವವಿದ್ಯಾನಿಲಯದ ಘಟನೆಇಸ್ಲಾಂ ವಿರೋಧಿ ಎಂಬ ಪಟ್ಟ ಕಟ್ಟಿ ಹುದ್ದೆಯಿಂದ ತೆಗೆದುಹಾಕಲು ಒತ್ತಾಯ |

ಕೋಲಕಾತಾ (ಬಂಗಾಳ) – ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿರುವ ಸಂದೇಹದ ಮೇಲೆ ಇಂಗ್ಲಿಷ್ ವಿಷಯದ ಪ್ರಾಧ್ಯಾಪಕಿ ಶಾಶ್ವತಿ ಹಲದರ ಅವರು ಮುಸಲ್ಮಾನ ವಿದ್ಯಾರ್ಥಿನಿಯೊಬ್ಬಳಿಗೆ ಹಿಜಾಬ್ ತೆಗೆಯುವಂತೆ ಸೂಚಿಸಿದ ಘಟನೆ ಇಲ್ಲಿನ ಜಾದವಪುರ ವಿಶ್ವವಿದ್ಯಾನಿಲಯದಲ್ಲಿ ಡಿಸೆಂಬರ್ 22, 2025 ರಂದು ನಡೆದಿತ್ತು. ಈ ಘಟನೆಯ ನಂತರ, ‘ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ’ ವಿದ್ಯಾರ್ಥಿ ಸಂಘಟನೆಯು ಘಟಿಕೋತ್ಸವದ ಸಮಯದಲ್ಲಿ ವೇದಿಕೆಯನ್ನೇರಿ ಪ್ರಾಧ್ಯಾಪಕಿ ಇಸ್ಲಾಂ ವಿರೋಧಿ ವರ್ತನೆ ತೋರಿದ್ದಾರೆ ಎಂದು ಆರೋಪಿಸಿತು.
ಈ ಪ್ರಕರಣದ ವಿಚಾರಣೆ ನಡೆಸಲು ಬಂಗಾಳ ಅಲ್ಪಸಂಖ್ಯಾತ ಆಯೋಗದ 6 ಸದಸ್ಯರ ತಂಡವು ಡಿಸೆಂಬರ್ 30 ರಂದು ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿತು. ತಂಡವು ಕುಲಪತಿಗಳು, ನೋಂದಣಿ ಅಧಿಕಾರಿ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಚರ್ಚಿಸಿತು. ವಿದ್ಯಾರ್ಥಿನಿಗೆ ಹಿಜಾಬ್ ತೆಗೆಯಲು ಬಲವಂತಪಡಿಸುವುದು ತಪ್ಪು ಮತ್ತು ಸ್ವೀಕಾರಾರ್ಹವಲ್ಲ ಎಂದು ಆಯೋಗದ ಅಧ್ಯಕ್ಷ ಇಮ್ರಾನ್ ಅಹ್ಮದ್ ಹೇಳಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಾಧ್ಯಾಪಕಿ ಶಾಶ್ವತಿ ಹಲದರ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ.
ವಿಶ್ವವಿದ್ಯಾನಿಲಯ ಸಮಿತಿಯ ನಿಲುವು
ಈ ವಿವಾದದ ತನಿಖೆಗಾಗಿ ಜಾದವಪುರ ವಿಶ್ವವಿದ್ಯಾನಿಲಯವು 5 ಸದಸ್ಯರ ಸಮಿತಿಯನ್ನು ರಚಿಸಿತ್ತು. ಜನವರಿ 6 ರಂದು ಸಮಿತಿಯು ವಿದ್ಯಾರ್ಥಿನಿ ಮತ್ತು ಇಂಗ್ಲಿಷ್ ಪ್ರಾಧ್ಯಾಪಕಿಯ ಹೇಳಿಕೆಯನ್ನು ದಾಖಲಿಸಿಕೊಂಡಿತು. ಹೇಳಿಕೆ ದಾಖಲಿಸಿದ ನಂತರ ಸಮಿತಿಯ ಅಧ್ಯಕ್ಷೆ ಸೈಯದ್ ತನ್ವಿ ನಸ್ರೀನ್ ಅವರು ಪ್ರಾಧ್ಯಾಪಕಿಯನ್ನು ಹುದ್ದೆಯಿಂದ ತೆಗೆದುಹಾಕಲು ಒತ್ತಾಯಿಸಿದರು; ಆದರೆ ಈ ಬೇಡಿಕೆಯನ್ನು ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ ಕುಲಾಧಿಪತಿಗಳ ನಾಮನಿರ್ದೇಶಿತ ಸದಸ್ಯ ಹಾಗೂ ಸಮಿತಿಯ ಸದಸ್ಯ ಕಾಜಿ ಮಸೂಮ್ ಅಖ್ತರ್ ವಿರೋಧಿಸಿದರು. ‘ತನಿಖೆ ಪೂರ್ಣಗೊಳ್ಳುವ ಮೊದಲೇ ಪ್ರಾಧ್ಯಾಪಕಿಯನ್ನು ತೆಗೆದುಹಾಕುವುದು ಅವರಿಗೆ ಮಾಡುವ ಅವಮಾನ ಮತ್ತು ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ’ ಎಂದು ಅವರು ತಿಳಿಸಿದರು. ಇದರ ಬೆನ್ನಲ್ಲೇ, ತನಿಖೆ ಮುಗಿಯುವವರೆಗೆ ಪ್ರಾಧ್ಯಾಪಕಿ ಶಾಶ್ವತಿ ಹಲದರ ಅವರನ್ನು ಜನವರಿ 7 ರಿಂದ ಜನವರಿ 30 ರವರೆಗೆ ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ.
ತಮ್ಮ ನಿಲುವನ್ನು ಸ್ಪಷ್ಟಪಡಿಸಿರುವ ಶಾಶ್ವತಿ ಹಲದರ ಅವರು, `ನಾನು ಕೇವಲ ನನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದೆ` ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಬಂಗಾಳವು ಎರಡನೇ ಬಾಂಗ್ಲಾದೇಶವಾಗುತ್ತಿರುವುದರ ಲಕ್ಷಣಗಳೇ ಇವು ! |
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ